- ಕನ್ನಡ ಭಾಷೆಯ ಈ ಭಾಷಾವರ್ಗಕ್ಕೆ ಸೇರಿದೆ – ದ್ರಾವಿಡ ಭಾಷಾವರ್ಗ.
- ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಐದು ಭಾಷೆಗಳು – ಕನ್ನಡ, ತೆಲುಗು, ತಮಿಳು, ಮಲಯಾಳಿ ಮತ್ತು ತುಳು.
- ಕನ್ನಡ ಭಾಷೆ ಬಳಕೆಯಲ್ಲಿರುವುದು – ಸುಮಾರು ಎರಡು ಸಾವಿರ ವರ್ಷಗಳಿಂದ.
- ಪ್ರಾಚೀನ ಕಾಲದ ಕನ್ನಡ ಭಾಷೆಯನ್ನು ಹೀಗೆಂದು ಕರೆಯಲಾಗುತ್ತದೆ – ಹಳಗನ್ನಡ.
- ಕ್ರಿ.ಶ.ಸುಮಾರು 1145ರಲ್ಲಿದ್ದ ಎರಡನೇ ನಾಗವರ್ಮನು ಬರೆದ ಎರಡು ಗ್ರಂಥಗಳು – ಕರ್ನಾಟಕ ಭಾಷಾಭೂಷಣ ಮತ್ತು ಕಾವ್ಯಾವಲೋಕನ.
- ಎರಡನೇ ನಾಗವರ್ಮನ ಕಾವ್ಯಾವಲೋಕನ ಕೃತಿಯ ಈ ಹೆಸರಿನ ಒಂದನೇ ಭಾಗವು ವ್ಯಾಕರಣಶಾಸ್ತ್ರಕ್ಕೆ ಸಂಬಂಧಿಸಿದೆ – ಶಬ್ದಸ್ಮೃತಿ.
- ಶಬ್ದಸ್ಮೃತಿಯಲ್ಲಿರುವ ಐದು ಭಾಗಗಳು – ಸಂಧಿ, ನಾಮ, ಸಮಾಸ, ತದ್ಧಿತ ಮತ್ತು ಆಖ್ಯಾತ.
- ಕನ್ನಡ ವ್ಯಾಕರಣ ಗ್ರಂಥವಾದ ‘ಕರ್ನಾಟಕ ಭಾಷಾ ಭೂಷಣ’ವು ಈ ಭಾಷೆಯಲ್ಲಿ ಬರೆಯಲ್ಪಟ್ಟಿದೆ – ಸಂಸ್ಕೃತ ಭಾಷೆ.
- ಕ್ರಿ.ಶ.ಸುಮಾರು 1260ರಲ್ಲಿದ್ದ ಕೇಶಿರಾಜನು ರಚಿಸಿದ ಕನ್ನಡ ವ್ಯಾಕರಣಗ್ರಂಥದ ಹೆಸರು – ಶಬ್ದಮಣಿ ದರ್ಪಣ.
- ಕೇಶಿರಾಜನ ತಂದೆಯ ಹೆಸರು – ಮಲ್ಲಿಕಾರ್ಜುನ ಕವಿ.
- ಕವಿ ಜನ್ನು ಈತನಿಗೆ ಸೋದರಮಾವ – ಕೇಶಿರಾಜ.
- ಶಬ್ದಮಣಿದರ್ಪಣ ವ್ಯಾಕರಣ ಗ್ರಂಥದಲ್ಲಿರುವ ಎಂಟು ಅಧ್ಯಾಯಗಳು ಇವು – ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ ಮತ್ತು ಅವ್ಯಯ.
- ಶಬ್ದಮಣಿದರ್ಪಣ ಗ್ರಂಥದ ಕೊನೆಯಲ್ಲಿರುವ ಈ ಅಧ್ಯಾಯವು ಶಬ್ದಾರ್ಥನಿರ್ಣಯವನ್ನು ತಿಳಿಯಲು ಉಪಯುಕ್ತವಾಗಿದೆ – ಪ್ರಯೋಗಸಾರ.
- ಶಬ್ದಮಣಿದರ್ಪಣ ವ್ಯಾಕರಣಗ್ರಂಥದ ಎಲ್ಲಾ ವ್ಯಾಕರಣ ಸೂತ್ರಗಳು ಈ ಸಾಹಿತ್ಯ ಪ್ರಕಾರದಲ್ಲಿವೆ – ಕಂದಪದ್ಯ.
- ಶಬ್ದಮಣಿದರ್ಪಣ ವ್ಯಾಕರಣಗ್ರಂಥದಲ್ಲಿರುವ ಒಟ್ಟು ಸೂತ್ರಗಳ ಸಂಖ್ಯೆ – 322.
- ಕ್ರಿ.ಶ.ಸುಮಾರು 1604ರಲ್ಲಿದ್ದ ಭಟ್ಟಾಕಳಂಕದೇವನು ರಚಿಸಿದ ಕನ್ನಡ ವ್ಯಾಕರಣಗ್ರಂಥ – ಶಬ್ದಾನುಶಾಸನ.
- ಕನ್ನಡ ವ್ಯಾಕರಣಗ್ರಂಥ ಶಬ್ದಾನುಶಾಸನ ಈ ಭಾಷೆಯಲ್ಲಿದೆ – ಸಂಸ್ಕೃತ ಭಾಷೆ.
- ಭಟ್ಟಾಕಳಂಕದೇವನ ಗುರುಗಳಾಗಿದ್ದವರು – ಅಕಳಂಕದೇವ.
- ಅಷ್ಟಾಧ್ಯಾಯಿ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು – ಪಾಣಿನಿ.
- ಮಹಾಭಾಷ್ಯ ಎಂಬ ವ್ಯಾಕರಣ ಗ್ರಂಥವನ್ನು ಬರೆದವರು – ಪತಂಜಲಿ ಮಹರ್ಷಿ.
ಕನ್ನಡ ವ್ಯಾಕರಣ: ಪ್ರಮುಖ ಅಂಶಗಳು
By Karnataka | 24 Jun, 2026 | Leave a comment