Karnatakaexamshub


Grammar Notes

ಕನ್ನಡ ವ್ಯಾಕರಣ: ಪ್ರಮುಖ ಅಂಶಗಳು

By Karnataka  |  24 Jun, 2026  |  Leave a comment


  • ಕನ್ನಡ ಭಾಷೆಯ ಈ ಭಾಷಾವರ್ಗಕ್ಕೆ ಸೇರಿದೆ – ದ್ರಾವಿಡ ಭಾಷಾವರ್ಗ.
  • ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಐದು ಭಾಷೆಗಳು – ಕನ್ನಡ, ತೆಲುಗು, ತಮಿಳು, ಮಲಯಾಳಿ ಮತ್ತು ತುಳು.
  • ಕನ್ನಡ ಭಾಷೆ ಬಳಕೆಯಲ್ಲಿರುವುದು – ಸುಮಾರು ಎರಡು ಸಾವಿರ ವರ್ಷಗಳಿಂದ.
  • ಪ್ರಾಚೀನ ಕಾಲದ ಕನ್ನಡ ಭಾಷೆಯನ್ನು ಹೀಗೆಂದು ಕರೆಯಲಾಗುತ್ತದೆ – ಹಳಗನ್ನಡ.
  • ಕ್ರಿ.ಶ.ಸುಮಾರು 1145ರಲ್ಲಿದ್ದ ಎರಡನೇ ನಾಗವರ್ಮನು ಬರೆದ ಎರಡು ಗ್ರಂಥಗಳು – ಕರ್ನಾಟಕ ಭಾಷಾಭೂಷಣ ಮತ್ತು ಕಾವ್ಯಾವಲೋಕನ.
  • ಎರಡನೇ ನಾಗವರ್ಮನ ಕಾವ್ಯಾವಲೋಕನ ಕೃತಿಯ ಈ ಹೆಸರಿನ ಒಂದನೇ ಭಾಗವು ವ್ಯಾಕರಣಶಾಸ್ತ್ರಕ್ಕೆ ಸಂಬಂಧಿಸಿದೆ – ಶಬ್ದಸ್ಮೃತಿ.
  • ಶಬ್ದಸ್ಮೃತಿಯಲ್ಲಿರುವ ಐದು ಭಾಗಗಳು – ಸಂಧಿ, ನಾಮ, ಸಮಾಸ, ತದ್ಧಿತ ಮತ್ತು ಆಖ್ಯಾತ.
  • ಕನ್ನಡ ವ್ಯಾಕರಣ ಗ್ರಂಥವಾದ ‘ಕರ್ನಾಟಕ ಭಾಷಾ ಭೂಷಣ’ವು ಈ ಭಾಷೆಯಲ್ಲಿ ಬರೆಯಲ್ಪಟ್ಟಿದೆ – ಸಂಸ್ಕೃತ ಭಾಷೆ.
  • ಕ್ರಿ.ಶ.ಸುಮಾರು 1260ರಲ್ಲಿದ್ದ ಕೇಶಿರಾಜನು ರಚಿಸಿದ ಕನ್ನಡ ವ್ಯಾಕರಣಗ್ರಂಥದ ಹೆಸರು – ಶಬ್ದಮಣಿ ದರ್ಪಣ.
  • ಕೇಶಿರಾಜನ ತಂದೆಯ ಹೆಸರು – ಮಲ್ಲಿಕಾರ್ಜುನ ಕವಿ.
  • ಕವಿ ಜನ್ನು ಈತನಿಗೆ ಸೋದರಮಾವ – ಕೇಶಿರಾಜ.
  • ಶಬ್ದಮಣಿದರ್ಪಣ ವ್ಯಾಕರಣ ಗ್ರಂಥದಲ್ಲಿರುವ ಎಂಟು ಅಧ್ಯಾಯಗಳು ಇವು – ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ ಮತ್ತು ಅವ್ಯಯ.
  • ಶಬ್ದಮಣಿದರ್ಪಣ ಗ್ರಂಥದ ಕೊನೆಯಲ್ಲಿರುವ ಈ ಅಧ್ಯಾಯವು ಶಬ್ದಾರ್ಥನಿರ್ಣಯವನ್ನು ತಿಳಿಯಲು ಉಪಯುಕ್ತವಾಗಿದೆ – ಪ್ರಯೋಗಸಾರ.
  • ಶಬ್ದಮಣಿದರ್ಪಣ ವ್ಯಾಕರಣಗ್ರಂಥದ ಎಲ್ಲಾ ವ್ಯಾಕರಣ ಸೂತ್ರಗಳು ಈ ಸಾಹಿತ್ಯ ಪ್ರಕಾರದಲ್ಲಿವೆ – ಕಂದಪದ್ಯ.
  • ಶಬ್ದಮಣಿದರ್ಪಣ ವ್ಯಾಕರಣಗ್ರಂಥದಲ್ಲಿರುವ ಒಟ್ಟು ಸೂತ್ರಗಳ ಸಂಖ್ಯೆ – 322.
  • ಕ್ರಿ.ಶ.ಸುಮಾರು 1604ರಲ್ಲಿದ್ದ ಭಟ್ಟಾಕಳಂಕದೇವನು ರಚಿಸಿದ ಕನ್ನಡ ವ್ಯಾಕರಣಗ್ರಂಥ – ಶಬ್ದಾನುಶಾಸನ.
  • ಕನ್ನಡ ವ್ಯಾಕರಣಗ್ರಂಥ ಶಬ್ದಾನುಶಾಸನ ಈ ಭಾಷೆಯಲ್ಲಿದೆ – ಸಂಸ್ಕೃತ ಭಾಷೆ.
  • ಭಟ್ಟಾಕಳಂಕದೇವನ ಗುರುಗಳಾಗಿದ್ದವರು – ಅಕಳಂಕದೇವ.
  • ಅಷ್ಟಾಧ್ಯಾಯಿ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು – ಪಾಣಿನಿ.
  • ಮಹಾಭಾಷ್ಯ ಎಂಬ ವ್ಯಾಕರಣ ಗ್ರಂಥವನ್ನು ಬರೆದವರು – ಪತಂಜಲಿ ಮಹರ್ಷಿ.
manojns1997

Your email address will not be published. Required fields are marked *

error: Content is protected !!