Karnatakaexamshub


Science Notes

ವಿರ್ನಾಳಗ್ರಂಥಿಯ ಕಾಯಿಲೆಗಳು ಮತ್ತು ಲಕ್ಷಣಗಳು

By Karnataka  |  26 Aug, 2026  |  Comments Off on ವಿರ್ನಾಳಗ್ರಂಥಿಯ ಕಾಯಿಲೆಗಳು ಮತ್ತು ಲಕ್ಷಣಗಳು


ಕಾಯಿಲೆಯ ಹೆಸರುಕಾರಣಕಾಯಿಲೆಯ ಲಕ್ಷಣಗಳು
ದೈತ್ಯತೆಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದವ್ಯಕ್ತಿ ದೈತ್ಯ ಗಾತ್ರಕ್ಕೆ ಬೆಳೆಯುತ್ತಾನೆ.
ಕುಬ್ಜತೆಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ಕಡಿಮೆ ಉತ್ಪತ್ತಿಯಿಂದವ್ಯಕ್ತಿ ಕುಬ್ಜನಾಗಿ ಬೆಳೆಯುತ್ತಾನೆ..
ಆಕ್ರೋಮೆಗಾಲಿಪ್ರೌಢರಲ್ಲಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ.ಕೈ-ಕಾಲುಗಳ ಮೂಳೆಗಳು ಅಸಮ ಪ್ರಮಾಣದಲ್ಲಿ ಬೆಳೆಯುತ್ತವೆ ಹಾಗೂ ಮೂಗು ಮತ್ತು ದವಡೆ ಮುಂದೆ ಚಾಚುತ್ತವೆ.
ಸರಳ ಗಾಯಿಟರ್ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುತ್ತದೆ.ಕುತ್ತಿಗೆಯ ಭಾಗದಲ್ಲಿ ಥೈರಾಯ್ಡ್ ಗ್ರಂಥಿ ಊದಿಕೊಳ್ಳುತ್ತದೆ
ಮಿಕ್ಸಿಡಿಮಾಪ್ರೌಢರಲ್ಲಿ ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಕ್ಷೀಣಿಸುವುದರಿಂದ

(ಥೈರಾಕ್ಸಿನ್ ಪ್ರಮಾಣ ಕಡಿಮೆಯಿಂದ)
ಚಯಾಪಚಯ ಕ್ರಿಯೆಯ ವೇಗ ಇಳಿಯುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆ ಆಗಿರುತ್ತದೆ, ಹೃದಯ ಬಡಿತ ಕಡಿಮೆಯಾಗುತ್ತದೆ. ಅವರ ದೇಹದ ತೂಕ ಹಾಗೂ ಚರ್ಮದ ದಪ್ಪ ಹೆಚ್ಚುತ್ತದೆ.
ಹೈಪರ್ ಥೈರಾಯ್ಡಿಸಂಪ್ರೌಢರಲ್ಲಿ ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಹೆಚ್ಚುವುದರಿಂದ

(ಥೈರಾಕ್ಸಿನ್ ಪ್ರಮಾಣ ಹೆಚ್ಚುವುದರಿಂದ)
ಚಯಾಪಚಯ ಕ್ರಿಯೆಯ ವೇಗ ಹೆಚ್ಚುತ್ತದೆ, ಕಣ್ಣು ಗುಡ್ಡೆಗಳು ಮುಂದೆ ಬರುವುದು, ರಕ್ತದೊತ್ತಡ ಏರಿಕೆಯಾಗುವುದು, ನರಗಳು ಉದ್ರೇಕಗೊಳ್ಳುವುದು, ಬೆವರುವುದು, ಅಸಹನೀಯವಾಗುವುದು ಮತ್ತು ದೇಹದ ತೂಕ ನಷ್ಟವಾಗುತ್ತದೆ.
ಕ್ರಿಟಿನಿಸಮ್ಮಕ್ಕಳಲ್ಲಿ ಥೈರಾಕ್ಸಿನ್ ಕೊರತೆಯಿಂದಮಕ್ಕಳಲ್ಲಿ ಮಾನಸಿಕ ಹಾಗೂ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಬಾಗ್ರುವ ಕಾಲುಗಳು, ದೋಷಪೂರಿತ ಹಲ್ಲುಗಳು, ಹೊರ ಚಾಚಿದ ನಾಲಿಗೆ ಮತ್ತು ಒಣಗಿದ ಸುಕ್ಕುಗಟ್ಟಿರುವ ಚರ್ಮ.
ಸ್ನಾಯು ಸೆಳೆತಪ್ಯಾರಥಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.ನೋವಿನಿಂದ ಕೂಡಿದ ಸ್ನಾಯುಗಳ ಸೆಳೆತ..
ಮೂಳೆಗಳು ಮೃದುಪ್ಯಾರಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ .ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಮೂಳೆಗಳು ಮೃದುವಾಗುತ್ತವೆ
ಡಯಾಬಿಟಿಸ್ ಮೆಲ್ಲಿಟಸ್ಸಾಕಷ್ಟುಪ್ರಮಾಣದಲ್ಲಿ ಇನ್ ಸುಲಿನ್ ಉತ್ಪತ್ತಿಯಾಗದಿದ್ದರೆ.ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜಿಸುತ್ತದೆ ಪದೇ ಪದೇ ಮೂತ್ರ ವಿಸರ್ಜನೆ, ಬಾಯಾರಿಕೆ, ಆಯಾಸ ಮತ್ತು ಮೈಬೆವರುವುದು.
manojns1997

error: Content is protected !!