| ಕಾಯಿಲೆಯ ಹೆಸರು | ಕಾರಣ | ಕಾಯಿಲೆಯ ಲಕ್ಷಣಗಳು |
| ದೈತ್ಯತೆ – | ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ | ವ್ಯಕ್ತಿ ದೈತ್ಯ ಗಾತ್ರಕ್ಕೆ ಬೆಳೆಯುತ್ತಾನೆ. |
| ಕುಬ್ಜತೆ – | ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ಕಡಿಮೆ ಉತ್ಪತ್ತಿಯಿಂದ | ವ್ಯಕ್ತಿ ಕುಬ್ಜನಾಗಿ ಬೆಳೆಯುತ್ತಾನೆ.. |
| ಆಕ್ರೋಮೆಗಾಲಿ – | ಪ್ರೌಢರಲ್ಲಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ. | ಕೈ-ಕಾಲುಗಳ ಮೂಳೆಗಳು ಅಸಮ ಪ್ರಮಾಣದಲ್ಲಿ ಬೆಳೆಯುತ್ತವೆ ಹಾಗೂ ಮೂಗು ಮತ್ತು ದವಡೆ ಮುಂದೆ ಚಾಚುತ್ತವೆ. |
| ಸರಳ ಗಾಯಿಟರ್ – | ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುತ್ತದೆ. | ಕುತ್ತಿಗೆಯ ಭಾಗದಲ್ಲಿ ಥೈರಾಯ್ಡ್ ಗ್ರಂಥಿ ಊದಿಕೊಳ್ಳುತ್ತದೆ |
| ಮಿಕ್ಸಿಡಿಮಾ – | ಪ್ರೌಢರಲ್ಲಿ ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಕ್ಷೀಣಿಸುವುದರಿಂದ (ಥೈರಾಕ್ಸಿನ್ ಪ್ರಮಾಣ ಕಡಿಮೆಯಿಂದ) | ಚಯಾಪಚಯ ಕ್ರಿಯೆಯ ವೇಗ ಇಳಿಯುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆ ಆಗಿರುತ್ತದೆ, ಹೃದಯ ಬಡಿತ ಕಡಿಮೆಯಾಗುತ್ತದೆ. ಅವರ ದೇಹದ ತೂಕ ಹಾಗೂ ಚರ್ಮದ ದಪ್ಪ ಹೆಚ್ಚುತ್ತದೆ. |
| ಹೈಪರ್ ಥೈರಾಯ್ಡಿಸಂ | ಪ್ರೌಢರಲ್ಲಿ ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಹೆಚ್ಚುವುದರಿಂದ (ಥೈರಾಕ್ಸಿನ್ ಪ್ರಮಾಣ ಹೆಚ್ಚುವುದರಿಂದ) | ಚಯಾಪಚಯ ಕ್ರಿಯೆಯ ವೇಗ ಹೆಚ್ಚುತ್ತದೆ, ಕಣ್ಣು ಗುಡ್ಡೆಗಳು ಮುಂದೆ ಬರುವುದು, ರಕ್ತದೊತ್ತಡ ಏರಿಕೆಯಾಗುವುದು, ನರಗಳು ಉದ್ರೇಕಗೊಳ್ಳುವುದು, ಬೆವರುವುದು, ಅಸಹನೀಯವಾಗುವುದು ಮತ್ತು ದೇಹದ ತೂಕ ನಷ್ಟವಾಗುತ್ತದೆ. |
| ಕ್ರಿಟಿನಿಸಮ್ – | ಮಕ್ಕಳಲ್ಲಿ ಥೈರಾಕ್ಸಿನ್ ಕೊರತೆಯಿಂದ | ಮಕ್ಕಳಲ್ಲಿ ಮಾನಸಿಕ ಹಾಗೂ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಬಾಗ್ರುವ ಕಾಲುಗಳು, ದೋಷಪೂರಿತ ಹಲ್ಲುಗಳು, ಹೊರ ಚಾಚಿದ ನಾಲಿಗೆ ಮತ್ತು ಒಣಗಿದ ಸುಕ್ಕುಗಟ್ಟಿರುವ ಚರ್ಮ. |
| ಸ್ನಾಯು ಸೆಳೆತ – | ಪ್ಯಾರಥಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. | ನೋವಿನಿಂದ ಕೂಡಿದ ಸ್ನಾಯುಗಳ ಸೆಳೆತ.. |
| ಮೂಳೆಗಳು ಮೃದು – | ಪ್ಯಾರಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ . | ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಮೂಳೆಗಳು ಮೃದುವಾಗುತ್ತವೆ |
| ಡಯಾಬಿಟಿಸ್ ಮೆಲ್ಲಿಟಸ್ – | ಸಾಕಷ್ಟುಪ್ರಮಾಣದಲ್ಲಿ ಇನ್ ಸುಲಿನ್ ಉತ್ಪತ್ತಿಯಾಗದಿದ್ದರೆ. | ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜಿಸುತ್ತದೆ ಪದೇ ಪದೇ ಮೂತ್ರ ವಿಸರ್ಜನೆ, ಬಾಯಾರಿಕೆ, ಆಯಾಸ ಮತ್ತು ಮೈಬೆವರುವುದು. |
ವಿರ್ನಾಳಗ್ರಂಥಿಯ ಕಾಯಿಲೆಗಳು ಮತ್ತು ಲಕ್ಷಣಗಳು
By Karnataka | 26 Aug, 2026 | Comments Off on ವಿರ್ನಾಳಗ್ರಂಥಿಯ ಕಾಯಿಲೆಗಳು ಮತ್ತು ಲಕ್ಷಣಗಳು