Karnatakaexamshub


Science Notes

ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಗಳು ಮತ್ತು ಕಾಯಿಲೆಗಳು

By Karnataka  |  26 Aug, 2026  |  Comments Off on ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಗಳು ಮತ್ತು ಕಾಯಿಲೆಗಳು


ಗ್ರಂಥಿಯ ಹೆಸರುಸ್ರವಿಸುವ ಹಾರ್ಮೋನ್ಕಾರ್ಯಗಳುಕಾಯಿಲೆಗಳು
ಪಿಟ್ಯುಟರಿ ಗ್ರಂಥಿಬೆಳವಣಿಗೆ ಹಾರ್ಮೋನ್ದೇಹದ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.ದೈತ್ಯತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ವ್ಯಕ್ತಿ ದೈತ್ಯ ಗಾತ್ರಕ್ಕೆ ಬೆಳೆಯುತ್ತಾನೆ..


ಕುಬ್ಜತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ಕಡಿಮೆ ಉತ್ಪತ್ತಿಯಿಂದ ವ್ಯಕ್ತಿ ಕುಬ್ಜನಾಗಿ ಬೆಳೆಯುತ್ತಾನೆ..


ಆಕ್ರೋಮೆಗಾಲಿ – ಪ್ರೌಢರಲ್ಲಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ಕೈ-ಕಾಲುಗಳ ಮೂಳೆಗಳು ಅಸಮ ಪ್ರಮಾಣದಲ್ಲಿ ಬೆಳೆಯುತ್ತವೆ ಹಾಗೂ ಮೂಗು ಮತ್ತು ದವಡೆ ಮುಂದೆ ಚಾಚುತ್ತವೆ.
ಥೈರಾಯ್ಡ್ ಗ್ರಂಥಿ

(ವ್ಯಕ್ತಿತ್ವದ ಹಾರ್ಮೋನ್)
ಥೈರಾಕ್ಸಿನ್ದೇಹದ ಚಯಾಪಚಯ ಕ್ರಿಯೆಯ ವೇಗ ಹಾಗೂ ದೇಹದ ತಾಪವನ್ನು ಹೆಚ್ಚಿಸುತ್ತದೆ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ.ಸರಳ ಗಾಯಿಟರ್ – ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುತ್ತದೆ.


ಕ್ರಿಟಿನಿಸಮ್ – ಥೈರಾಕ್ಸಿನ್ ಕೊರತೆಯಿಂದ ಮಕ್ಕಳಲ್ಲಿ ಮಾನಸಿಕ ಹಾಗೂ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.


ಮಿಕ್ಸಿಡಿಮಾ – ಪ್ರೌಢರಲ್ಲಿ ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಕ್ಷೀಣಿಸುವುದರಿಂದ
ಪ್ಯಾರಾಥೈರಾಯ್ಡ್ ಗ್ರಂಥಿಪ್ಯಾರಥಾರ್ಮೋನ್ರಕ್ತ ಮತ್ತು ಮೂಳೆಗಳಲ್ಲಿನ ಕ್ಯಾಲ್ಸಿಯಂ ಪ್ರಮಾಣ ನಿಯಂತ್ರಿಸುವುದು.ಸ್ನಾಯು ಸೆಳೆತ – ಪ್ಯಾರಥಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.


ಮೂಳೆಗಳು ಮೃದು – ಪ್ಯಾರಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ.
ಲ್ಯಾಂಗರ್ ಹಾನ್ಸ್ ನ ಕಿರುದ್ವೀಪಗಳುಅ) ಇನ್ ಸುಲಿನ್ಗ್ಲುಕೋಸ್ ಅನ್ನು ಗ್ಲೈಕೋಜನ್ ಆಗಿ ಪರಿವರ್ತಿಸುತ್ತದೆ.ಡಯಾಬಿಟಿಸ್ ಮೆಲ್ಲಿಟಸ್ – ಸಾಕಷ್ಟು ಪ್ರಮಾಣದಲ್ಲಿ ಇನ್ ಸುಲಿನ್ ಉತ್ಪತ್ತಿಯಾಗದಿದ್ದರೆ.
ಬ) ಗ್ಲುಕಾಗಾನ್ಗ್ಲೈಕೋಜನ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ.————————
ಅಡ್ರಿನಲ್ ಗ್ರಂಥಿಗಳುಭಾಗಗಳು

ಅ) ಕಾರ್ಟೆಕ್ಸ್

I) ಕಾರ್ಟಿಸೋನ್
ಚಯಾಪಚಯ ಕ್ರಿಯೆಯ ವೇಗ ಹಾಗೂ ರಕ್ತದಲ್ಲಿರುವ ಲವಣಗಳ ಸಾಂದ್ರತೆಯನ್ನು ನಿಯಂತ್ರಿಸುತ್ತದೆ.————————
ಬ) ಮೆಡುಲ್ಲಾ

i) ಅಡ್ರಿನಲಿನ್
ಹೃದಯದ ಬಡಿತ, ಉಸಿರಾಟ ಮತ್ತು ರಕ್ತದ ಒತ್ತಡ ನಿಯಂತ್ರಿಸುತ್ತದೆ.ಸಾಮಾನ್ಯ ಪರಿಸ್ಥಿತಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
ii) ನಾರ್ ಅಡ್ರಿನಲಿನ್ಅಡ್ರಿನಲಿನ್ ನ ವಿರುದ್ಧ ಕಾರ್ಯ ನಿರ್ವಹಿಸುತ್ತದೆ.————————
iii) ಡೋಪಮಿನ್————————————————
ಜನನ ಗ್ರಂಥಿಗಳು

(ಲೈಂಗಿಕ ಗ್ರಂಥಿಗಳು)
ಅ) ವೃಷಣಗಳು

(ಆಂಡ್ರೋಜನ್ ಗಳು)

— ಟೆಸ್ಟೋಸ್ಟೆರಾನ್
ಪುರುಷರಲ್ಲಿ ಗಂಡಸಿನ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗಿದೆಕಡಿಮೆ ಅಥವಾ ಉತ್ಪತ್ತಿಯಾಗದೇ ಇದ್ದಲ್ಲಿ ಗಂಡಸಿನ ಲಕ್ಷಣಗಳು ಕಾಣಿಸುವುದಿಲ್ಲ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ.
ಬ) ಅಂಡಾಶಯಗಳು

(ಈಸ್ಟ್ರೋಜನ್ ಗಳು)

— ಪ್ರೊಜೆಸ್ಟಿರಾನ್
ಋತು ಚಕ್ರ ಹಾಗೂ ಗರ್ಭಧಾರಣೆ ಸಂದರ್ಭದಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟುಮಾಡುತ್ತದೆ.ಕಡಿಮೆ ಅಥವಾ ಉತ್ಪತ್ತಿಯಾಗದೇ ಇದ್ದಲ್ಲಿ ಹೆಂಗಸಿನ ಲಕ್ಷಣಗಳು ಕಾಣಿಸುವುದಿಲ್ಲ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ.
manojns1997

error: Content is protected !!