| ಗ್ರಂಥಿಯ ಹೆಸರು | ಸ್ರವಿಸುವ ಹಾರ್ಮೋನ್ | ಕಾರ್ಯಗಳು | ಕಾಯಿಲೆಗಳು |
| ಪಿಟ್ಯುಟರಿ ಗ್ರಂಥಿ | ಬೆಳವಣಿಗೆ ಹಾರ್ಮೋನ್ | ದೇಹದ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. | ದೈತ್ಯತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ವ್ಯಕ್ತಿ ದೈತ್ಯ ಗಾತ್ರಕ್ಕೆ ಬೆಳೆಯುತ್ತಾನೆ.. ಕುಬ್ಜತೆ – ಪ್ರಾಯಕ್ಕೆ ಮುಂಚಿತವಾಗಿ ಬೆಳವಣಿಗೆ ಹಾರ್ಮೋನ್ ಕಡಿಮೆ ಉತ್ಪತ್ತಿಯಿಂದ ವ್ಯಕ್ತಿ ಕುಬ್ಜನಾಗಿ ಬೆಳೆಯುತ್ತಾನೆ.. ಆಕ್ರೋಮೆಗಾಲಿ – ಪ್ರೌಢರಲ್ಲಿ ಬೆಳವಣಿಗೆ ಹಾರ್ಮೋನ್ ನ ಮಿತಿಮೀರಿದ ಉತ್ಪತ್ತಿಯಿಂದ ಕೈ-ಕಾಲುಗಳ ಮೂಳೆಗಳು ಅಸಮ ಪ್ರಮಾಣದಲ್ಲಿ ಬೆಳೆಯುತ್ತವೆ ಹಾಗೂ ಮೂಗು ಮತ್ತು ದವಡೆ ಮುಂದೆ ಚಾಚುತ್ತವೆ. |
| ಥೈರಾಯ್ಡ್ ಗ್ರಂಥಿ (ವ್ಯಕ್ತಿತ್ವದ ಹಾರ್ಮೋನ್) | ಥೈರಾಕ್ಸಿನ್ | ದೇಹದ ಚಯಾಪಚಯ ಕ್ರಿಯೆಯ ವೇಗ ಹಾಗೂ ದೇಹದ ತಾಪವನ್ನು ಹೆಚ್ಚಿಸುತ್ತದೆ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ. | ಸರಳ ಗಾಯಿಟರ್ – ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುತ್ತದೆ. ಕ್ರಿಟಿನಿಸಮ್ – ಥೈರಾಕ್ಸಿನ್ ಕೊರತೆಯಿಂದ ಮಕ್ಕಳಲ್ಲಿ ಮಾನಸಿಕ ಹಾಗೂ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಿಕ್ಸಿಡಿಮಾ – ಪ್ರೌಢರಲ್ಲಿ ಥೈರಾಯ್ಡ್ ಗ್ರಂಥಿಯ ಚಟುವಟಿಕೆ ಕ್ಷೀಣಿಸುವುದರಿಂದ |
| ಪ್ಯಾರಾಥೈರಾಯ್ಡ್ ಗ್ರಂಥಿ | ಪ್ಯಾರಥಾರ್ಮೋನ್ | ರಕ್ತ ಮತ್ತು ಮೂಳೆಗಳಲ್ಲಿನ ಕ್ಯಾಲ್ಸಿಯಂ ಪ್ರಮಾಣ ನಿಯಂತ್ರಿಸುವುದು. | ಸ್ನಾಯು ಸೆಳೆತ – ಪ್ಯಾರಥಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಮೂಳೆಗಳು ಮೃದು – ಪ್ಯಾರಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ. |
| ಲ್ಯಾಂಗರ್ ಹಾನ್ಸ್ ನ ಕಿರುದ್ವೀಪಗಳು | ಅ) ಇನ್ ಸುಲಿನ್ | ಗ್ಲುಕೋಸ್ ಅನ್ನು ಗ್ಲೈಕೋಜನ್ ಆಗಿ ಪರಿವರ್ತಿಸುತ್ತದೆ. | ಡಯಾಬಿಟಿಸ್ ಮೆಲ್ಲಿಟಸ್ – ಸಾಕಷ್ಟು ಪ್ರಮಾಣದಲ್ಲಿ ಇನ್ ಸುಲಿನ್ ಉತ್ಪತ್ತಿಯಾಗದಿದ್ದರೆ. |
| ಬ) ಗ್ಲುಕಾಗಾನ್ | ಗ್ಲೈಕೋಜನ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ. | ———————— | |
| ಅಡ್ರಿನಲ್ ಗ್ರಂಥಿಗಳು | ಭಾಗಗಳು ಅ) ಕಾರ್ಟೆಕ್ಸ್ I) ಕಾರ್ಟಿಸೋನ್ | ಚಯಾಪಚಯ ಕ್ರಿಯೆಯ ವೇಗ ಹಾಗೂ ರಕ್ತದಲ್ಲಿರುವ ಲವಣಗಳ ಸಾಂದ್ರತೆಯನ್ನು ನಿಯಂತ್ರಿಸುತ್ತದೆ. | ———————— |
| ಬ) ಮೆಡುಲ್ಲಾ i) ಅಡ್ರಿನಲಿನ್ | ಹೃದಯದ ಬಡಿತ, ಉಸಿರಾಟ ಮತ್ತು ರಕ್ತದ ಒತ್ತಡ ನಿಯಂತ್ರಿಸುತ್ತದೆ. | ಸಾಮಾನ್ಯ ಪರಿಸ್ಥಿತಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. | |
| ii) ನಾರ್ ಅಡ್ರಿನಲಿನ್ | ಅಡ್ರಿನಲಿನ್ ನ ವಿರುದ್ಧ ಕಾರ್ಯ ನಿರ್ವಹಿಸುತ್ತದೆ. | ———————— | |
| iii) ಡೋಪಮಿನ್ | ———————— | ———————— | |
| ಜನನ ಗ್ರಂಥಿಗಳು (ಲೈಂಗಿಕ ಗ್ರಂಥಿಗಳು) | ಅ) ವೃಷಣಗಳು (ಆಂಡ್ರೋಜನ್ ಗಳು) — ಟೆಸ್ಟೋಸ್ಟೆರಾನ್ | ಪುರುಷರಲ್ಲಿ ಗಂಡಸಿನ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗಿದೆ | ಕಡಿಮೆ ಅಥವಾ ಉತ್ಪತ್ತಿಯಾಗದೇ ಇದ್ದಲ್ಲಿ ಗಂಡಸಿನ ಲಕ್ಷಣಗಳು ಕಾಣಿಸುವುದಿಲ್ಲ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ. |
| ಬ) ಅಂಡಾಶಯಗಳು (ಈಸ್ಟ್ರೋಜನ್ ಗಳು) — ಪ್ರೊಜೆಸ್ಟಿರಾನ್ | ಋತು ಚಕ್ರ ಹಾಗೂ ಗರ್ಭಧಾರಣೆ ಸಂದರ್ಭದಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟುಮಾಡುತ್ತದೆ. | ಕಡಿಮೆ ಅಥವಾ ಉತ್ಪತ್ತಿಯಾಗದೇ ಇದ್ದಲ್ಲಿ ಹೆಂಗಸಿನ ಲಕ್ಷಣಗಳು ಕಾಣಿಸುವುದಿಲ್ಲ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ. |
ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಗಳು ಮತ್ತು ಕಾಯಿಲೆಗಳು
By Karnataka | 26 Aug, 2026 | Comments Off on ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಗಳು ಮತ್ತು ಕಾಯಿಲೆಗಳು