- ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾದರೆ ಅದು – ಸಮಾಸ.
- ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ ಹೀಗೆನ್ನುವರು – ವಿಗ್ರಹ ವಾಕ್ಯ.
- ಸಮಾಸಗಳಲ್ಲಿರುವ ವಿಧಗಳ ಸಂಖ್ಯೆ – ಎಂಟು.
- ಸಮಾಸಗಳಲ್ಲಿರುವ ಎಂಟು ವಿಧಗಳು – ತತ್ಪುರುಷ ಸಮಾಸ, ಕರ್ಮಧಾರಯ ಸಮಾಸ, ದ್ವಿಗು ಸಮಾಸ, ಅಂಶಿ ಸಮಾಸ, ದ್ವಂದ್ವ ಸಮಾಸ, ಬಹುವ್ರೀಹಿ ಸಮಾಸ, ಕ್ರಿಯಾ ಸಮಾಸ ಮತ್ತು ಗಮಕ ಸಮಾಸ.
- ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸವೇ – ತತ್ಪುರುಷ ಸಮಾಸ.
- ‘ಮರಗಾಲು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ತತ್ಪುರುಷ ಸಮಾಸ.
- ‘ಮರಗಾಲು’ ಪದದ ವಿಗ್ರಹ ವಾಕ್ಯ – ಮರದ + ಕಾಲು.
- ‘ಹಗಲುಗನಸು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ತತ್ಪುರುಷ ಸಮಾಸ.
- ‘ಹಗಲುಗನಸು’ ಪದದ ವಿಗ್ರಹ ವಾಕ್ಯ – ಹಗಲಿನಲ್ಲಿ + ಕನಸು.
- ‘ತೇರುಮರ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ತತ್ಪುರುಷ ಸಮಾಸ.
- ‘ತೇರುಮರ’ ಪದದ ವಿಗ್ರಹ ವಾಕ್ಯ – ತೇರಿಗೆ + ಮರ.
- ‘ಕಣ್ಣುಕುರುಡ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ತತ್ಪುರುಷ ಸಮಾಸ.
- ‘ಕಣ್ಣುಕುರುಡ’ ಪದದ ವಿಗ್ರಹ ವಾಕ್ಯ – ಕಣ್ಣಿನಿಂದ + ಕುರುಡ.
- ‘ವ್ಯಾಘ್ರಭಯ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ತತ್ಪುರುಷ ಸಮಾಸ.
- ‘ವ್ಯಾಘ್ರಭಯ’ ಪದದ ವಿಗ್ರಹ ವಾಕ್ಯ – ವ್ಯಾಘ್ರದನೆಯಿಂದ + ಭಯ.
- ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವೇ – ಕರ್ಮಧಾರಯ ಸಮಾಸ.
- ‘ಹಣ್ಣೇನು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕರ್ಮಧಾರಯ ಸಮಾಸ.
- ‘ಹಣ್ಣೇನು’ ಈ ಸಮಾಸದ ವಿಗ್ರಹ ವಾಕ್ಯ ಇದು – ಹಿರಿದು + ಜೇನು.
- ‘ಶ್ವೇತವಸ್ತ್ರ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕರ್ಮಧಾರಯ ಸಮಾಸ.
- ‘ಶ್ವೇತವಸ್ತ್ರ’ ಈ ಸಮಾಸದ ವಿಗ್ರಹ ವಾಕ್ಯ ಇದು – ಶ್ವೇತವಾದ + ವಸ್ತ್ರ.
- ‘ಪುಂಡರೀಕಾಕ್ಷಗಳು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕರ್ಮಧಾರಯ ಸಮಾಸ.
- ‘ಪುಂಡರೀಕಾಕ್ಷಗಳು’ ಈ ಸಮಾಸದ ವಿಗ್ರಹ ವಾಕ್ಯ ಇದು – ಪುಂಡರೀಕದಂತೆ + ಅಕ್ಷಗಳು.
- ‘ಮುಖಕಮಲ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕರ್ಮಧಾರಯ ಸಮಾಸ.
- ‘ಮುಖಕಮಲ’ ಈ ಸಮಾಸದ ವಿಗ್ರಹ ವಾಕ್ಯ ಇದು – ಮುಖವು + ಕಮಲದಂತೆ.
- ‘ಫಲಾಹಾರ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕರ್ಮಧಾರಯ ಸಮಾಸ.
- ‘ಫಲಾಹಾರ’ ಈ ಸಮಾಸದ ವಿಗ್ರಹ ವಾಕ್ಯ ಇದು – ಫಲವೇ + ಆಹಾರ.
- ‘ನಳರಾಜ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕರ್ಮಧಾರಯ ಸಮಾಸ.
- ‘ನಳರಾಜ’ ಈ ಸಮಾಸದ ವಿಗ್ರಹ ವಾಕ್ಯ ಇದು – ನಳನೆಂಬ + ರಾಜ.
- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ – ದ್ವಿಗು ಸಮಾಸ.
- ‘ಒಗ್ಗಟ್ಟು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ದ್ವಿಗು ಸಮಾಸ.
- ‘ಒಗ್ಗಟ್ಟು’ ಈ ಸಮಾಸದ ವಿಗ್ರಹ ವಾಕ್ಯ ಇದು – ಒಂದು + ಕಟ್ಟು.
- ‘ನಾಲ್ಮಡಿ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ದ್ವಿಗು ಸಮಾಸ.
- ‘ನಾಲ್ಮಡಿ’ ಈ ಸಮಾಸದ ವಿಗ್ರಹ ವಾಕ್ಯ ಇದು – ನಾಲ್ಕು + ಮಡಿ.
- ‘ಪಂಚೇಂದ್ರಿಯಗಳು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ದ್ವಿಗು ಸಮಾಸ.
- ‘ಪಂಚೇಂದ್ರಿಯಗಳು’ ಈ ಸಮಾಸದ ವಿಗ್ರಹ ವಾಕ್ಯ ಇದು – ಪಂಚಗಳಾದ + ಇಂದ್ರಿಯಗಳು.
- ಈ ಸಮಾಸವನ್ನು ‘ಅವ್ಯಯೀಭಾವ ಸಮಾಸ’ ಎಂದೂ ಕರೆಯುತ್ತಾರೆ – ಅಂಶಿ ಸಮಾಸ.
- ಪೂರ್ವೋತ್ತರಪದಗಳು ಅಂಶಾಂತಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸವೇ – ಅಂಶಿ ಸಮಾಸ.
- ‘ಮುಂಗೈ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಅಂಶಿ ಸಮಾಸ.
- ‘ಮುಂಗೈ’ ಈ ಸಮಾಸದ ವಿಗ್ರಹ ವಾಕ್ಯ ಇದು – ಕೈಯ + ಮುಂದು.
- ‘ಕೆಳತುಟಿ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಅಂಶಿ ಸಮಾಸ.
- ‘ಕೆಳತುಟಿ’ ಈ ಸಮಾಸದ ವಿಗ್ರಹ ವಾಕ್ಯ ಇದು – ತುಟಿಯ + ಕೆಳಗೆ.
- ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಹೀಗೆಂದು ಹೆಸರು – ದ್ವಂದ್ವ ಸಮಾಸ.
- ‘ಕೆರೆಕಟ್ಟೆಬಾವಿ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ದ್ವಂದ್ವ ಸಮಾಸ.
- ‘ಕೆರೆಕಟ್ಟೆಬಾವಿ’ ಈ ಸಮಾಸದ ವಿಗ್ರಹ ವಾಕ್ಯ ಇದು – ಕೆರೆಯೂ + ಕಟ್ಟೆಯೂ + ಬಾವಿಯೂ.
- ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಹೀಗೆನ್ನುವರು – ಬಹುವ್ರೀಹಿ ಸಮಾಸ.
- ‘ಮುಕ್ಕಣ್ಣ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಬಹುವ್ರೀಹಿ ಸಮಾಸ.
- ‘ಮುಕ್ಕಣ್ಣ’ ಈ ಸಮಾಸದ ವಿಗ್ರಹ ವಾಕ್ಯ ಇದು – ಮೂರು ಕಣ್ಣು ಉಳ್ಳವ.
- ‘ಇಕ್ಷುಕೋದಂಡ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಬಹುವ್ರೀಹಿ ಸಮಾಸ.
- ‘ಇಕ್ಷುಕೋದಂಡ’ ಈ ಸಮಾಸದ ವಿಗ್ರಹ ವಾಕ್ಯ ಇದು – ಇಕ್ಷುವನ್ನು ಕೋದಂಡವಾಗಿ ಉಳ್ಳವನು.
- ‘ಹೋಲಾಹೋಲಿ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಬಹುವ್ರೀಹಿ ಸಮಾಸ.
- ‘ಹೋಲಾಹೋಲಿ’ ಈ ಸಮಾಸದ ವಿಗ್ರಹ ವಾಕ್ಯ ಇದು – ಕೋಲಿನಿಂದ ಕೋಲಿನಿಂದ ಮಾಡಿದ ಜಗಳ.
- ಪೂರ್ವಪದವು ಪ್ರಾಯಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಹೀಗೆನ್ನುವರು – ಕ್ರಿಯಾ ಸಮಾಸ.
- ‘ಮೈದಡವಿ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕ್ರಿಯಾ ಸಮಾಸ.
- ‘ಮೈದಡವಿ’ ಈ ಸಮಾಸದ ವಿಗ್ರಹ ವಾಕ್ಯ ಇದು – ಮೈಯನ್ನು + ತಡವಿ.
- ‘ದಾರಿಕಾಣನು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕ್ರಿಯಾ ಸಮಾಸ.
- ‘ದಾರಿಕಾಣನು’ ಈ ಸಮಾಸದ ವಿಗ್ರಹ ವಾಕ್ಯ ಇದು – ದಾರಿಯನ್ನು + ಕಾಣನು.
- ‘ನೀರೊಡಿ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಕ್ರಿಯಾ ಸಮಾಸ.
- ‘ನೀರೊಡಿ’ ಈ ಸಮಾಸದ ವಿಗ್ರಹ ವಾಕ್ಯ ಇದು – ನೀರಿನಿಂದ + ಕೂಡಿ.
- ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಹೀಗೆಂದು ಕರೆಯುವರು – ಗಮಕ ಸಮಾಸ.
- ‘ಆ ಹುಡುಗ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಗಮಕ ಸಮಾಸ.
- ‘ಆ ಹುಡುಗ’ ಈ ಸಮಾಸದ ವಿಗ್ರಹ ವಾಕ್ಯ ಇದು – ಅವನು + ಹುಡುಗ.
- ‘ಮಾಡಿದಡುಗೆ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ – ಗಮಕ ಸಮಾಸ.
- ‘ಮಾಡಿದಡುಗೆ’ ಈ ಸಮಾಸದ ವಿಗ್ರಹ ವಾಕ್ಯ ಇದು – ಮಾಡಿದ್ದುದು + ಅಡುಗೆ.
ಸಮಾಸ ಪ್ರಕರಣ
By Karnataka | 24 Jun, 2026 | Leave a comment