- ಪದ ಎಂದರೆ – ಮೂಲರೂಪ ಪ್ರಕೃತಿಯೊಂದಕ್ಕೆ ಪ್ರತ್ಯಯ ಹತ್ತಿದ ರೂಪ.
- ನಾಮಪ್ರಕೃತಿ ಎಂದರೆ – ನಾಮಪದದ ಮೂಲರೂಪವಾಗಿಯೂ, ಕ್ರಿಯೆಯ ಅರ್ಥವನ್ನು ಕೊಡದೆಯೂ ಇರುವ ಶಬ್ದ.
- ನಾಮಪ್ರಕೃತಿಗಳಿಗೆ ಇರುವ ಮತ್ತೊಂದು ಹೆಸರು – ಪ್ರಾತಿಪದಿಕಗಳು.
- ನಾಮಪ್ರಕೃತಿಗೆ ಕೆಲವು ಉದಾಹರಣೆಗಳು – ಮರ, ನೆಲ, ಹುಡುಗ, ಮಂಚ, ಕಟ್ಟಿಗೆ ಇತ್ಯಾದಿ.
- ನಾಮಪ್ರಕೃತಿಗಳಿಗೆ ನಾಮವಿಭಕ್ತಿ ಪ್ರತ್ಯಯಗಳು ಸೇರಿದರೆ ಅದು – ನಾಮಪದ.
- ವಿಭಕ್ತಿ ಪ್ರತ್ಯಯಗಳು ಎಂದರೆ – ಸ್ವತಂತ್ರವಾಗಿ ಅರ್ಥವಿಲ್ಲದೆ, ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆ ಬೇರೆ ಅರ್ಥವನ್ನು ಉಂಟುಮಾಡುವ ಉ, ಅನ್ನು, ಇಂದ, ಗೆ, ಅಲ್ಲಿ ಮುಂತಾದವುಗಳು.
- ‘ಹುಡುಗನು’ ಈ ನಾಮಪದದಲ್ಲಿರುವ ನಾಮಪ್ರಕೃತಿ – ಹುಡುಗ.
- ‘ಹುಡುಗನು’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಉ.
- ‘ತಂದೆಯೇ’ ಈ ನಾಮಪದದಲ್ಲಿರುವ ನಾಮಪ್ರಕೃತಿ – ತಂದೆ.
- ‘ತಂದೆಯೇ’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಏ.
- ‘ರಾಮಾ’ ಈ ನಾಮಪದದಲ್ಲಿರುವ ನಾಮಪ್ರಕೃತಿ – ರಾಮ.
- ‘ರಾಮಾ’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಆ.
- ‘ತಾಯಿಯಲ್ಲಿ’ ಈ ನಾಮಪದದಲ್ಲಿರುವ ನಾಮಪ್ರಕೃತಿ – ತಾಯಿ.
- ‘ತಾಯಿಯಲ್ಲಿ’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಅಲ್ಲಿ.
- ‘ಬಟ್ಟೆಯಿಂದ’ ಈ ನಾಮಪದದಲ್ಲಿರುವ ನಾಮಪ್ರಕೃತಿ – ಬಟ್ಟೆ.
- ‘ಬಟ್ಟೆಯಿಂದ’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಇಂದ.
- ‘ಅಕ್ಕನ’ ಈ ನಾಮಪದದಲ್ಲಿರುವ ನಾಮಪ್ರಕೃತಿ – ಅಕ್ಕ.
- ‘ಅಕ್ಕನ’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಅ.
- ‘ಮಂಚವನ್ನು’ ಈ ನಾಮಪದದಲ್ಲಿರುವ ನಾಮಪ್ರಕೃತಿ – ಮಂಚ.
- ‘ಮಂಚವನ್ನು’ ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ – ಅನ್ನು.
- ನಾಮಪ್ರಕೃತಿಗಳಲ್ಲಿರುವ ಎರಡು ವಿಧಗಳು – ಸಹಜ ನಾಮಪ್ರಕೃತಿಗಳು ಮತ್ತು ಸಾಧಿತ (ನಿಷ್ಪನ್ನ) ನಾಮಪ್ರಕೃತಿಗಳು.
- ಸಹಜ ನಾಮಪ್ರಕೃತಿಗಳಲ್ಲಿ ಕಂಡುಬರುವ ಪ್ರಮುಖ ಗುಂಪುಗಳು – ವಸ್ತುವಾಚಕಗಳು, ಗುಣವಾಚಕಗಳು, ಸಂಖ್ಯಾವಾಚಕಗಳು, ಸಂಖ್ಯೆಯವಾಚಕಗಳು, ಭಾವನಾಮಗಳು, ಪರಿಮಾಣವಾಚಕಗಳು, ಪ್ರಕಾರವಾಚಕಗಳು, ದಿಗ್ವಾಚಕಗಳು, ಸರ್ವನಾಮಗಳು ಮುಂತಾದವು.
- ವಸ್ತುವಾಚಕ ಎಂದರೆ – ವಸ್ತುಗಳ ಹೆಸರನ್ನು ಹೇಳುವ ಶಬ್ದಗಳು.
- ವಸ್ತುವಾಚಕಗಳಿಗೆ ಉದಾಹರಣೆಗಳೆಂದರೆ – ಮನುಷ್ಯ, ಕೃಷ್ಣ, ನಾಯಿ, ಕಲ್ಲು, ಮರ, ಹಣ್ಣು ಮುಂತಾದವು.
- ವಸ್ತುವಾಚಕಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳು – ರೂಢನಾಮ, ಅಂಕಿತನಾಮ ಮತ್ತು ಅನ್ವರ್ಥನಾಮ.
- ರೂಢನಾಮ ಎಂದರೆ – ರೂಢಿಯಿಂದ ಬಂದ ಸಾಮಾನ್ಯವಾಚಕಗಳು.
- ರೂಢನಾಮಗಳಿಗೆ ಉದಾಹರಣೆಗಳು – ನದಿ, ಪರ್ವತ, ಪಟ್ಟಣ, ಮನುಷ್ಯ, ದೇಶ ಇತ್ಯಾದಿ.
- ಅಂಕಿತನಾಮ ಎಂದರೆ – ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳು.
- ಅಂಕಿತನಾಮಗಳಿಗೆ ಉದಾಹರಣೆಗಳು – ಗಂಗಾ, ಹಿಮಾಲಯ, ರಾಮ, ಭಾರತ, ಬೆಂಗಳೂರು ಇತ್ಯಾದಿ.
- ಅನ್ವರ್ಥನಾಮ ಎಂದರೆ – ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು.
- ಅನ್ವರ್ಥನಾಮಗಳಿಗೆ ಉದಾಹರಣೆಗಳು – ಕುಂಟ, ಕುರುಡ, ವ್ಯಾಪಾರಿ, ವಿದ್ವಾಂಸ, ರೋಗಿ ಇತ್ಯಾದಿ.
- ಗುಣವಾಚಕಗಳು ಎಂದರೆ – ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳು.
- ಗುಣವಾಚಕಗಳಿಗೆ ಉದಾಹರಣೆಗಳು – ದೊಡ್ಡ, ಒಳ್ಳೆಯ, ಕರಿಯ, ಹಳೆಯ, ಹೊಸದು ಇತ್ಯಾದಿ.
- ಸಂಖ್ಯಾವಾಚಕಗಳು ಎಂದರೆ – ಸಂಖ್ಯೆಯನ್ನು ಹೇಳುವ ಶಬ್ದಗಳು.
- ಸಂಖ್ಯಾವಾಚಕಗಳಿಗೆ ಉದಾಹರಣೆಗಳು – ಒಂದು, ಎರಡು, ಮೂರು, ಹತ್ತು, ಸಾವಿರ, ಲಕ್ಷ ಇತ್ಯಾದಿ.
- ಸಂಖ್ಯೆಯವಾಚಕಗಳು ಎಂದರೆ – ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳು.
- ಸಂಖ್ಯೆಯವಾಚಕಗಳಿಗೆ ಉದಾಹರಣೆಗಳು – ಮೂವರು, ನಾಲ್ವರು, ಐವರು, ಒಂದನೆಯ, ಎರಡನೆಯ, ಮೂರನೆಯ ಇತ್ಯಾದಿ.
- ಭಾವನಾಮಗಳು ಎಂದರೆ – ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳು.
- ಭಾವನಾಮಗಳಿಗೆ ಉದಾಹರಣೆಗಳು – ಬಿಳುಪು, ಕಪ್ಪು, ಹಿರಿಮೆ, ನೋಟ, ಮಾಟ ಇತ್ಯಾದಿ.
- ಪರಿಮಾಣವಾಚಕಗಳು ಎಂದರೆ – ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು.
- ಪರಿಮಾಣವಾಚಕಗಳಿಗೆ ಉದಾಹರಣೆಗಳು – ಅಷ್ಟು, ಇಷ್ಟು, ಹಲವು, ಕೆಲವು, ಇನಿತು ಇತ್ಯಾದಿ.
- ಪ್ರಕಾರವಾಚಕಗಳು ಎಂದರೆ – ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳು.
- ಪ್ರಕಾರವಾಚಕಗಳಿಗೆ ಉದಾಹರಣೆಗಳು – ಅಂತಹ, ಇಂತಹ, ಅಂತಹನು, ಎಂತಹ ಇತ್ಯಾದಿ.
- ದಿಗ್ವಾಚಕಗಳು ಎಂದರೆ – ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳು.
- ದಿಗ್ವಾಚಕಗಳಿಗೆ ಉದಾಹರಣೆಗಳು – ಉತ್ತರ, ದಕ್ಷಿಣ, ಅಚೆ, ಈಚೆ, ಮೂಡಲು, ಪಡುವಲು ಇತ್ಯಾದಿ.
- ಸರ್ವನಾಮಗಳು ಎಂದರೆ – ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅದನ್ನು ಸೂಚಿಸುವ ಶಬ್ದಗಳು.
- ಸರ್ವನಾಮಗಳಿಗೆ ಉದಾಹರಣೆಗಳು – ಅದು, ಇದು, ತಾನು, ತಾವು, ನೀನು, ನೀವು, ಅವನು, ಯಾವನು, ಯಾವಳು ಇತ್ಯಾದಿ.
- ಸರ್ವನಾಮಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು ಅವುಗಳು – ಪುರುಷಾರ್ಥಕ ಸರ್ವನಾಮಗಳು, ಪ್ರಶ್ನಾರ್ಥಕ ಸರ್ವನಾಮಗಳು ಮತ್ತು ಆತ್ಮಾರ್ಥಕ ಸರ್ವನಾಮಗಳು.
- ಪುರುಷಾರ್ಥಕ ಸರ್ವನಾಮಗಳಿಗೆ ಉದಾಹರಣೆಗಳು – ಉತ್ತಮ ಪುರುಷ ಸರ್ವನಾಮಗಳಾದ ನಾನು-ನಾವು, ಮಧ್ಯಮ ಪುರುಷ ಸರ್ವನಾಮಗಳಾದ ನೀನು-ನೀವು ಮತ್ತು ಪ್ರಥಮ ಪುರುಷ ಸರ್ವನಾಮಗಳಾದ ಅವನು-ಅವರು, ಅವಳು-ಅವರು, ಅದು-ಅವು.
- ಪ್ರಶ್ನಾರ್ಥಕ ಸರ್ವನಾಮಗಳಿಗೆ ಉದಾಹರಣೆಗಳು – ಯಾವುದು, ಏನು, ಯಾವನು, ಯಾವಳು ಇತ್ಯಾದಿ.
- ಆತ್ಮಾರ್ಥಕ ಸರ್ವನಾಮಗಳಿಗೆ ಉದಾಹರಣೆಗಳು – ತಾನು ಮತ್ತು ತಾವು.
- ಲಿಂಗಗಳ ಮೂರು ಪ್ರಮುಖ ಪ್ರಕಾರಗಳು – ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ.
- ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು – ಪುಲ್ಲಿಂಗ.
- ಯಾವ ಶಬ್ದ ಪ್ರಯೋಗ ಮಾಡಿದಾಗ ಹೆಂಗಸು ಎಂಬ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು – ಸ್ತ್ರೀಲಿಂಗ.
- ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು ಗಂಡಸು ಎರಡೂ ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು – ನಪುಂಸಕಲಿಂಗ.
- ಪುಲ್ಲಿಂಗದಂತೆಯೂ, ನಪುಂಸಕಲಿಂಗದಂತೆಯೂ, ಪ್ರಯೋಗಿಸಲಾಗುವ ಸೂರ್ಯ, ಚಂದ್ರ, ಶನಿ, ಮಂಗಳ ಮುಂತಾದ ಗ್ರಹವಾಚಕ ಶಬ್ದಗಳನ್ನು ಹೀಗೆಂದು ಕರೆಯುತ್ತೇವೆ – ಪುನ್ನಪುಂಸಕಲಿಂಗಗಳು.
- ಸ್ತ್ರೀಲಿಂಗ, ನಪುಂಸಕಲಿಂಗಗಳೆರಡರಲ್ಲೂ ಪ್ರಯೋಗಿಸಲ್ಪಡುವ ಲಕ್ಷ್ಮಿ, ಸರಸ್ವತಿ, ಪಾರ್ವತಿ, ದೇವಿ, ಮುಂತಾದ ದೇವತಾವಾಚಕ ಶಬ್ದಗಳನ್ನು ಹೀಗೆಂದು ಕರೆಯುವರು – ಸ್ತ್ರೀನಪುಂಸಕಲಿಂಗಗಳು.
- ಯಾವಾಗಲೂ ನಪುಂಸಕಲಿಂಗದಲ್ಲಿಯೇ ಪ್ರಯೋಗಿಸಲ್ಪಡುವ ಶಿಶು, ಜನ, ದಂಡು ಮುಂತಾದ ಶಬ್ದಗಳನ್ನು ಹೀಗೆಂದು ಕರೆಯುವರು – ನಿತ್ಯನಪುಂಸಕಲಿಂಗಗಳು.
- ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಈ ಮೂರರಲ್ಲೂ ಒಂದೇ ರೀತಿ ಪ್ರಯೋಗಿಸಲ್ಪಡುವ ಶಬ್ದಗಳಿಗೆ ಹೀಗೆಂದು ಹೇಳುವರು – ವಾಚ್ಯಲಿಂಗಗಳು ಅಥವಾ ವಿಶೇಷ್ಯಾಧೀನಲಿಂಗಗಳು.
- ವಾಚ್ಯಲಿಂಗಗಳಿಗೆ ಉದಾಹರಣೆಗಳು – ನಾನು, ನೀನು, ತಾನು, ಹಲವು, ಕೆಲವು, ಒಳ್ಳೆಯ, ಕೆಟ್ಟ, ಬಿಳಿಯ, ಕರಿಯ ಇತ್ಯಾದಿ.
- ವಚನಗಳಲ್ಲಿನ ಎರಡು ವಿಧಗಳು – ಏಕವಚನ ಮತ್ತು ಬಹುವಚನ.
- ಏಕವಚನ ಎಂದರೆ – ಒಂದು ವಸ್ತು ಎಂದು ಹೇಳುವ ಶಬ್ದಗಳು.
- ಬಹುವಚನ ಎಂದರೆ – ಒಂದಕ್ಕಿಂತ ಹೆಚ್ಚು ಎಂದು ಹೇಳುವ ಶಬ್ದಗಳು.
- ವಿಭಕ್ತಿ ಎಂದರೆ – ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಅಧಿಕರಣಾಕಾರಕಾರ್ಥಗಳನ್ನು ವಿಭಾಗಿಸಿಕೊಡುವ ಶಬ್ದರೂಪ.
- ಪ್ರಥಮ ವಿಭಕ್ತಿಯ ಕಾರಕಾರ್ಥ – ಕರ್ತೃರ್ಥ.
- ದ್ವಿತೀಯ ವಿಭಕ್ತಿಯ ಕಾರಕಾರ್ಥ – ಕರ್ಮಾರ್ಥ.
- ತೃತೀಯ ವಿಭಕ್ತಿಯ ಕಾರಕಾರ್ಥ – ಕರಣಾರ್ಥ.
- ಚತುರ್ಥಿ ವಿಭಕ್ತಿಯ ಕಾರಕಾರ್ಥ – ಸಂಪ್ರದಾನ.
- ಪಂಚಮೀ ವಿಭಕ್ತಿಯ ಕಾರಕಾರ್ಥ – ಅಪಾದಾನ.
- ಷಷ್ಠೀ ವಿಭಕ್ತಿಯ ಕಾರಕಾರ್ಥ – ಸಂಬಂಧ.
- ಸಪ್ತಮೀ ವಿಭಕ್ತಿಯ ಕಾರಕಾರ್ಥ – ಅಧಿಕರಣ.
- ಪ್ರಥಮ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಉ.
- ದ್ವಿತೀಯ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಅನ್ನು.
- ತೃತೀಯ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಇಂದ.
- ಚತುರ್ಥಿ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಗೆ, ಇಗೆ, ಕೈ, ಅಕ್ಕೆ.
- ಪಂಚಮೀ ವಿಭಕ್ತಿಯ ವಿಭಕ್ತಿ ಪ್ರತ್ಯಯ – ದೆಸೆಯಿಂದ.
- ಷಷ್ಠೀ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಅ.
- ಸಪ್ತಮೀ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಅಲ್ಲಿ.
- ಪ್ರಥಮಾ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಮ್.
- ದ್ವಿತೀಯಾ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಅಂ.
- ತೃತೀಯಾ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಇಂ, ಇಂದು, ಇಂದೆ.
- ಚತುರ್ಥೀ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಗೆ, ಕೆ, ಕ್ಕೆ.
- ಪಂಚಮೀ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಅತ್ತಣಿಂ, ಅತ್ತಣಿಂದಂ, ಅತ್ತಣಿಂದೆ.
- ಷಷ್ಠೀ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಅ.
- ಸಪ್ತಮೀ ವಿಭಕ್ತಿಯ ಹಳನ್ನಡದ ವಿಭಕ್ತಿ ಪ್ರತ್ಯಯ – ಒಳ್.
- ಸಂಬೋಧನಾ ವಿಭಕ್ತಿಯ ವಿಭಕ್ತಿ ಪ್ರತ್ಯಯ – ಆ, ಏ, ಇರಾ, ಈ.
ನಾಮಪದ ಪ್ರಕರಣ
By Karnataka | 24 Jun, 2026 | Leave a comment