Karnatakaexamshub


Grammar Notes

ಛಂದಸ್ಸು

By Karnataka  |  24 Jun, 2026  |  Leave a comment


  • ‘ಛಂದೋಂಬುಧಿ’ ಎಂಬುದು – ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥ.
  • ‘ಛಂದೋಂಬುಧಿ’ ಗ್ರಂಥವನ್ನು ಬರೆದವನು – ಒಂದನೇ ನಾಗವರ್ಮ.
  • ಒಂದನೇ ನಾಗವರ್ಮನು ಬರೆದಿರುವ ಮತ್ತೊಂದು ಗ್ರಂಥ – ಕರ್ನಾಟಕ ಕಾದಂಬರಿ.
  • ಒಂದನೇ ನಾಗವರ್ಮನ ತಂದೆ ತಾಯಿಯರ ಹೆಸರು – ವೆಣ್ಣಮಯ್ಯ ಮತ್ತು ಹೋಕಳಬ್ಬೆ.
  • ಒಂದನೇ ನಾಗವರ್ಮನಿಗಿದ್ದ ಬಿರುದುಗಳು – ಕವಿರಾಜಹಂಸ, ಬುಧಾಬ್ಜವನಕಳಂಸ, ಕಂದಕಂದರ್ಪ.
  • ಒಂದನೇ ನಾಗವರ್ಮನ ಆಶ್ರಯದಾತನಾಗಿದ್ದವನು – ಗಂಗರ ಮಂತ್ರಿ ಚಾವುಂಡರಾಯ.
  • ಒಂದನೇ ನಾಗವರ್ಮನ ಗುರುಗಳು – ಅಜಿತಸೇನದೇವ.
  • ಕನ್ನಡ ಭಾಷೆಯಲ್ಲಿ ಲಭ್ಯವಿರುವ ಗ್ರಂಥಗಳಲ್ಲಿ ಮೊದಲಿನವು – ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ.
  • ಚಂಪೂಕಾವ್ಯಗಳು ಎಂದರೆ – ಗದ್ಯಪದ್ಯಗಳಿಂದ ಕೂಡಿದ ಕಾವ್ಯಗಳು.
  • ಚಂಪೂಕಾವ್ಯಗಳನ್ನು ರಚಿಸಿರುವ ಪ್ರಮುಖ ಕವಿಗಳು – ಪಂಪ, ರನ್ನ, ಜನ್ನ, ಅಭಿನವ ಪಂಪ ಮುಂತಾದವರು.
  • ಹರಿಹರೇಶ್ವರನೆಂಬ ಕವಿಯು ಈ ಛಂದಸ್ಸಿನಲ್ಲಿ ಕಾವ್ಯಗಳನ್ನು ರಚಿಸಿದನು – ರಗಳೆಯ ಛಂದಸ್ಸು.
  • ರಾಘವಾಂಕನು ಈ ಛಂದಸ್ಸಿನಲ್ಲಿ ಕಾವ್ಯಗಳನ್ನು ರಚಿಸಿದನು – ಷಟ್ಪದಿಗಳ ಛಂದಸ್ಸು.
  • ರತ್ನಾಕರವರ್ಣಿಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಬರೆದ ಕೃತಿ – ಭರತೇಶ ವೈಭವ.
  • ಪದ್ಯಗಳು ಎಂದರೆ – ಒಂದು ಗೊತ್ತಾದ ಸಾಲುಗಳ ನಿಯಮದಿಂದ ಬರೆದವುಗಳು.
  • ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಹೀಗೆನ್ನುವರು – ಪ್ರಾಸ.
  • ಪ್ರಾಸಗಳಲ್ಲಿರುವ ವಿಧಗಳ ಸಂಖ್ಯೆ – ಆರು.
  • ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನ ಬಂದು ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಅದು – ಸಿಂಹಪ್ರಾಸ.
  • ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನ ಬಂದು ಹಿಂದಿನ ಸ್ವರ ದೀರ್ಘವಾಗಿದ್ದರೆ ಅದು – ಗಜಪ್ರಾಸ.
  • ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಅಂ) ಇದ್ದರೆ ಅದು – ವೃಷಭಪ್ರಾಸ.
  • ಪ್ರಾಸಾಕ್ಷರದ ಹಿಂದೆ ವಿಸರ್ಗ (ಅಃ) ಇದ್ದರೆ ಅದು – ಅಜಪ್ರಾಸ.
  • ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು – ಶರಭಪ್ರಾಸ.
  • ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು – ಹಯಪ್ರಾಸ.
  • ಯತಿ ಎಂದರೆ – ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.
  • ಛಂದಶಾಸ್ತ್ರದಲ್ಲಿ ಗಣ ಎಂದರೆ – ಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.
  • ಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ – ಲಘುಗಳು.
  • ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ – ಲಘುಗಳು.
  • ಎರಡು ಮಾತ್ರಗಳ ಕಾಲದಲ್ಲಿ ಉಚ್ಚರಿಸಲ್ಪಟ್ಟ ಅಕ್ಷರಗಳೆಲ್ಲ – ಗುರುಗಳು.
  • ಗುರುಗಳಾಗುವ ಅಕ್ಷರಗಳು ಇವು – ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು, ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ, ಷಟ್ಪದಿಗಳಲ್ಲಿ ಬರುವ ಮೂರನೆಯ ಆರನೆಯ ಸಾಲಿನ ಕೊನೆಯಲ್ಲಿರುವ ಅಕ್ಷರಗಳು.
  • ಮಾತ್ರಾಗಣಗಳು ಎಂದರೆ – ಮೂರು, ನಾಲ್ಕು, ಐದು ಮಾತ್ರಗಳ ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು.
  • ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತು ಮಾಡುವುದಕ್ಕೆ ಹೀಗೆಂದು ಹೆಸರು – ಪ್ರಸ್ತಾರ.
  • ಮಾತ್ರಾಗಣಗಳಿಂದ ಪದ್ಯಜಾತಿಗಳು ಇವಾಗಿವೆ – ಕಂದ, ಷಟ್ಪದಿ, ರಗಳೆ ಇತ್ಯಾದಿ.
  • ಕಂದ ಪದ್ಯವೆಂದರೆ – ನಾಲ್ಕು ಸಾಲುಗಳಿಂದ ಕೂಡಿದ ಪದ್ಯ.
  • ಕಂದ ಪದ್ಯದಲ್ಲಿ ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ಅವು – ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿರುತ್ತವೆ.
  • ಕಂದ ಪದ್ಯದಲ್ಲಿನ ಮೂರನೆಯ ನಾಲ್ಕನೆಯ ಸಾಲುಗಳು ಸಮವಾಗಿದ್ದು ಅವು – ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿರುತ್ತವೆ.
  • ಷಟ್ಪದಿ ಎಂದರೆ – ಆರು ಸಾಲುಗಳಿಂದ ಕೂಡಿದ ಪದ್ಯ.
  • ಷಟ್ಪದಿಯಲ್ಲಿರುವ ವಿಧಗಳ ಸಂಖ್ಯೆ – ಆರು.
  • ಷಟ್ಪದಿಯಲ್ಲಿರುವ ಆರು ವಿಧಗಳು – ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಷಟ್ಪದಿಗಳು.
  • ಶರ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು – ನಾಲ್ಕು ಮಾತ್ರೆಯ ಎರಡು ಗಣಗಳಿಂದ ಕೂಡಿರುತ್ತವೆ.
  • ಶರ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು – ನಾಲ್ಕು ಮಾತ್ರೆಯ ಮೂರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಕುಸುಮ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು – ಐದು ಮಾತ್ರೆಯ ಎರಡು ಗಣಗಳಿಂದ ಕೂಡಿರುತ್ತವೆ.
  • ಕುಸುಮ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು – ಐದು ಮಾತ್ರೆಯ ಮೂರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಭೋಗ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು – ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ಭೋಗ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು – ಮೂರು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಭಾಮಿನಿ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು – ಮೂರು ಮತ್ತು ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ಭಾಮಿನಿ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು – ಮೂರು ಮತ್ತು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ಪರಿವರ್ಧಿನಿ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು – ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ಪರಿವರ್ಧಿನಿ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು – ನಾಲ್ಕು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ವಾರ್ಧಕ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು – ಐದು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
  • ವಾರ್ಧಕ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು – ಐದು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
  • ರಗಳೆಯಲ್ಲಿರುವ ಮೂರು ವಿಧಗಳು – ಉತ್ಸಾಹರಗಳೆ, ಮಂದಾನಿಲರಗಳೆ ಮತ್ತು ಲಲಿತರಗಳೆ.
  • ಎರಡೇಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯಜಾತಿಯೇ – ಉತ್ಸಾಹರಗಳೆ.
  • ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿಯೊಮ್ಮೆಯೂ ಬಂದು ಎರಡೇಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೇ ಹೀಗೆನ್ನುವರು – ಮಂದಾನಿಲರಗಳೆ.
  • ಸಾಲುಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲದೆ, ಪ್ರತಿಯೊಂದು ಪಾದದಲ್ಲೂ ಐದು ಮಾತ್ರೆಯ ನಾಲ್ಕು ಗಣಗಳನ್ನಿಟ್ಟು ಎರಡೇಡು ಸಾಲುಗಳಲ್ಲಿ ಪ್ರಾಸನಿಯಮವನ್ನು ಮುಖ್ಯವಾಗಿ ಆದಿಯಲ್ಲಿ ಪಾಲಿಸಿಕೊಂಡು ಬರೆಯಲ್ಪಟ್ಟ ಪದ್ಯಗಳೇ – ಲಲಿತರಗಳೆ.
  • ಅಕ್ಷರಗಣಗಳು ಎಂದರೆ – ಮೂರು ಮೂರು ಅಕ್ಷರಗಳ ಗುಂಪುಗಳನ್ನು ಒಂದೊಂದು ಗಣವೆಂದು ತಿಳಿಯುವ ಗಣಗಳು.
  • ಮೂರು ಮೂರು ಅಕ್ಷರಗಳ ಲೆಕ್ಕದಿಂದ ಗಣಗಳನ್ನು ವಿಂಗಡಿಸುವುದು ಈ ಛಂದಸ್ಸುಗಳಲ್ಲಿ ಮಾತ್ರ – ವೃತ್ತಜಾತಿಯ ಛಂದಸ್ಸು.
  • ಅಕ್ಷರಗಣಗಳಲ್ಲಿರುವ ವಿಧಗಳ ಸಂಖ್ಯೆ – ಎಂಟು.
  • ಮೂರು ಗುರು ಬರುವ ಮೂರಕ್ಷರದ ಗಣವೇ – ಮಗಣ.
  • ಮೂರು ಲಘು ಬರುವ ಮೂರಕ್ಷರದ ಗಣವೇ – ನಗಣ.
  • ಗುರು ಮೊದಲು ಬಂದು ಎರಡು ಲಘು ಬರುವ ಗಣವೇ – ಭಗಣ.
  • ಲಘು ಮೊದಲು ಬಂದು ಎರಡು ಗುರು ಬರುವ ಗಣವೇ – ಯಗಣ.
  • ಗುರು ನಡುವೆ ಬರುವ ಗಣವೇ – ಜಗಣ.
  • ಲಘು ನಡುವೆ ಬರುವ ಗಣವೇ – ರಗಣ.
  • ಗುರು ಕೊನೆಯಲ್ಲಿ ಬರುವ ಗಣವೇ – ಸಗಣ.
  • ಲಘು ಕೊನೆಯಲ್ಲಿ ಬರುವ ಗಣವೇ – ತಗಣ.
  • ಎಂಟು ಅಕ್ಷರಗಣಗಳನ್ನು ನೆನಪಿಡಲು ಈ ಸೂತ್ರವನ್ನು ಬಳಸುತ್ತಾರೆ – ಯಮಾತಾರಾಜಭಾನಸಲಗಂ.
  • ಪ್ರತಿ ಸಾಲಿನಲ್ಲೂ ಭ, ರ, ನ, ಭ, ಭ, ರ ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಬರುವ ವೃತ್ತವೇ – ಉತ್ಪಲಮಾಲಾವೃತ್ತ.
  • ಉತ್ಪಲಮಾಲಾವೃತ್ತವನ್ನು ನೆನಪಿಡಲು ಬಳಸುವ ಸೂತ್ರ – ಉತ್ಪಲಮಾಲೆಯುವುದು ಭರಂ ನಭಭ ರಲಗಂ ನೆಗಳಿರ್ಲ್.
  • ಪ್ರತಿ ಸಾಲಿನಲ್ಲೂ ನ, ಜ, ಭ, ಜ, ಜ, ಜ, ರ ಎಂಬ ಏಳು ಗಣಗಳಿರುವ ವೃತ್ತವೇ – ಚಂಪಕಮಾಲಾವೃತ್ತ.
  • ಚಂಪಕಮಾಲಾವೃತ್ತವನ್ನು ನೆನಪಿಡಲು ಬಳಸುವ ಸೂತ್ರ – ನಜಭಜಜಂಜರಂ ಬಗೆಗೊಳ್ವುದಿರೆ ಚಂಪಕಮಾಲೆಯೆಂದಪರ್.
  • ಪ್ರತಿಯೊಂದು ಪಾದದಲ್ಲೂ ಮ, ಸ, ಜ, ಸ, ತ, ತ ಎಂಬ ಆರು ಗಣಗಳೂ, ಮೇಲೆ ಒಂದು ಗುರುವೂ ಇರುವ ವೃತ್ತವೇ – ಶಾರ್ದೂಲವಿಕ್ರೀಡಿತವೃತ್ತ.
  • ಶಾರ್ದೂಲವಿಕ್ರೀಡಿತವೃತ್ತವನ್ನು ನೆನಪಿಡಲು ಬಳಸುವ ಸೂತ್ರ – ಕಣ್ಕಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ.
  • ಪ್ರತಿ ಸಾಲಿನಲ್ಲಿಯೂ ಸ, ಭ, ರ, ನ, ಮ, ಯ ಗಣಗಳಿಂದಲೂ, ಮೇಲೊಂದು ಲಘು ಮತ್ತು ಒಂದು ಗುರುವಿನಿಂದಲೂ ಕೂಡಿದ ಪದ್ಯಜಾತಿಯೇ – ಮತ್ತೇಭವಿಕ್ರೀಡಿತವೃತ್ತ.
  • ಮತ್ತೇಭವಿಕ್ರೀಡಿತವೃತ್ತದ ಲಕ್ಷಣಗಳನ್ನು ತಿಳಿಸುವ ಸೂತ್ರ – ಸಭರನಂದಯಲಂಗಮುಂ ಬಗೆಗೊಳ್ ಮತ್ತೇಭವಿಕ್ರೀಡಿತಂ.
  • ಪ್ರತಿಯೊಂದು ಪಾದದಲ್ಲೂ ಮ, ರ, ಭ, ನ, ಯ, ಯ, ಯ ಗಣಗಳಿರುವ ವೃತ್ತವೇ – ಸ್ರಗ್ಧರಾವೃತ್ತ.
  • ಸ್ರಗ್ಧರಾವೃತ್ತದ ಸೂತ್ರ – ತೋರೇಲ್ ಮರಭನಮಯಯಗಣಮುದೆ ತಾಂ ಸ್ರಗ್ಧರಾವೃತ್ತಮುಂ.
  • ಪ್ರತಿ ಸಾಲಿನಲ್ಲಿಯೂ ಸ, ತ, ತ, ನ, ಸ, ರ, ರ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿದ ವೃತ್ತವೇ – ಮಹಾಸ್ರಗ್ಧರಾವೃತ್ತ.
  • ಮಹಾಸ್ರಗ್ಧರಾವೃತ್ತದ ಸೂತ್ರ – ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮುಂ.
  • ಅಂಶಗಣಗಳು ಈ ರೀತಿಯ ಛಂದಸ್ಸುಗಳಲ್ಲಿ ಬಳಸಲ್ಪಡುತ್ತವೆ – ತ್ರಿಪದಿ, ಸಾಂಗತ್ಯ, ಅಕ್ಕರ ಇತ್ಯಾದಿ.
manojns1997

Your email address will not be published. Required fields are marked *

error: Content is protected !!