- ಕ್ರಿಯಾಪದ ಎಂದರೆ – ಕ್ರಿಯೆಯನ್ನು ಸೂಚಿಸುವ ಪದ.
- ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಹೀಗೆನ್ನುವರು – ಕ್ರಿಯಾಪಕೃತಿ ಅಥವಾ ಧಾತು.
- ಧಾತುವಿನ ಎರಡು ವಿಧಗಳು – ಮೂಲ ಧಾತು ಮತ್ತು ಸಾಧಿತ (ಪ್ರತ್ಯಯಾಂತ) ಧಾತು.
- ಮೂಲಧಾತುಗಳಿಗೆ ಉದಾಹರಣೆಗಳು – ಮಲಗು, ಹೋಗು, ಬರು, ತಿನ್ನು ಇತ್ಯಾದಿ.
- ಸಾಧಿತ ಅಥವಾ ಪ್ರತ್ಯಯಾಂತ ಧಾತುಗಳಿಗೆ ಉದಾಹರಣೆಗಳು – ಅಬ್ಬರಿಸು, ಕಣ್ಣುಡಿಸು, ಧಗಧಗಿಸು, ಯತ್ನಿಸು, ತಿನ್ನಿಸು ಇತ್ಯಾದಿ.
- ಸಕರ್ಮಕ ಧಾತು ಎಂದರೆ – ಕರ್ಮಪದವನ್ನು ಅಪೇಕ್ಷಿಸುವ ಧಾತುಗಳು.
- ಸಕರ್ಮಕ ಧಾತುಗಳಿಗೆ ಉದಾಹರಣೆಗಳು – ಮಾಡು, ಬಿಡು, ಮುಚ್ಚು, ಕತ್ತರಿಸು ಇತ್ಯಾದಿ.
- ಅಕರ್ಮಕ ಧಾತು ಎಂದರೆ – ಕರ್ಮಪದದ ಅಪೇಕ್ಷೆಯಿಲ್ಲದ ಧಾತುಗಳು.
- ಅಕರ್ಮಕ ಧಾತುಗಳಿಗೆ ಉದಾಹರಣೆಗಳು – ಮಲಗು, ಓಡು, ಬದುಕು, ಹುಟ್ಟು, ನಾಚು, ಬರು, ಇರು, ಏಳು ಇತ್ಯಾದಿ.
- ಧಾತುಗಳಿಗೆ ಆಖ್ಯಾತ ಪ್ರತ್ಯಯ ಸೇರಿದರೆ ಅದು – ಕ್ರಿಯಾಪದ.
- ಧಾತುಗಳಿಗೆ ವರ್ತಮಾನ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿದರೆ ಅದು – ವರ್ತಮಾನಕಾಲ ಕ್ರಿಯಾಪದ.
- ‘ಹೋಗುತ್ತಾನೆ’ ಈ ಕ್ರಿಯಾಪದದಲ್ಲಿರುವ ಧಾತು – ಹೋಗು.
- ‘ಹೋಗುತ್ತಾನೆ’ ಈ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ – ಉತ್ತ.
- ‘ಹೋಗುತ್ತಾನೆ’ ಈ ಕ್ರಿಯಾಪದದಲ್ಲಿರುವ ಆಖ್ಯಾತ ಪ್ರತ್ಯಯ – ಆನೆ.
- ಧಾತುಗಳಿಗೆ ಭೂತಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿದರೆ ಅದು – ಭೂತಕಾಲದ ಕ್ರಿಯಾಪದ.
- ‘ತಿಳಿದನು’ ಈ ಕ್ರಿಯಾಪದದಲ್ಲಿರುವ ಧಾತು – ತಿಳಿ.
- ‘ತಿಳಿದನು’ ಈ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ – ದ.
- ‘ತಿಳಿದನು’ ಈ ಕ್ರಿಯಾಪದದಲ್ಲಿರುವ ಆಖ್ಯಾತ ಪ್ರತ್ಯಯ – ಅನು.
- ಧಾತುಗಳಿಗೆ ಭವಿಷ್ಯತ್ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿದರೆ ಅದು – ಭವಿಷ್ಯತ್ ಕಾಲದ ಕ್ರಿಯಾಪದ.
- ‘ಕೊಡುವನು’ ಈ ಕ್ರಿಯಾಪದದಲ್ಲಿರುವ ಧಾತು – ಕೊಡು.
- ‘ಕೊಡುವನು’ ಈ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ – ವ.
- ‘ಕೊಡುವನು’ ಈ ಕ್ರಿಯಾಪದದಲ್ಲಿರುವ ಆಖ್ಯಾತ ಪ್ರತ್ಯಯ – ಅನು.
- ವಿಧ್ಯರ್ಥಕ ಕ್ರಿಯಾಪದ ಎಂದರೆ – ಆಶೀರ್ವಾದ, ಅಪ್ಪಣೆ, ಹಾರೈಕೆ, ಅಜ್ಞೆ ಇವುಗಳನ್ನು ತೋರುವಾಗ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಉಂಟಾಗುವ ಕ್ರಿಯಾಪದಗಳು.
- ವಿಧ್ಯರ್ಥಕ ಕ್ರಿಯಾಪದಗಳಿಗೆ ಉದಾಹರಣೆಗಳು – ಮಾಡಲಿ, ಮಾಡಿರಿ, ಮಾಡೋಣ, ಮಾಡುವ, ಹೋಗಲಿ, ಆಗಲಿ, ಓದಲಿ ಇತ್ಯಾದಿ.
- ನಿಷೇಧಾರ್ಥಕ ಕ್ರಿಯಾಪದ ಎಂದರೆ – ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಉಂಟಾಗುವ ಕ್ರಿಯಾಪದಗಳು.
- ನಿಷೇಧಾರ್ಥಕ ಕ್ರಿಯಾಪದಗಳಿಗೆ ಉದಾಹರಣೆಗಳು – ತಿನ್ನನು, ಬಾರನು, ಹೋಗನು, ಓದನು, ಮಾಡನು ಇತ್ಯಾದಿ.
- ಸಂಭಾವನಾರ್ಥಕ ಕ್ರಿಯಾಪದ ಎಂದರೆ – ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಉಂಟಾಗುವ ಕ್ರಿಯಾಪದಗಳು.
- ಸಂಭಾವನಾರ್ಥಕ ಕ್ರಿಯಾಪದಗಳಿಗೆ ಉದಾಹರಣೆಗಳು – ಬಂದಾನು, ತಿಂದಾನು, ಏರೀತು, ಹೋದಾನು ಇತ್ಯಾದಿ.
- ಕ್ರಿಯಾರ್ಥಕಾವ್ಯಯಗಳು ಎಂದರೆ – ಕ್ರಿಯಾಪದದ ಅರ್ಥ ಕೊಡುವ ಬೇಕು, ಬೇಡ, ಉಂಟು, ಇಲ್ಲ, ಅಲ್ಲ, ಸಾಕು, ಹೌದು ಮುಂತಾದ ಅವ್ಯಯಗಳು.
- ದ್ವಿರುಕ್ತಿ ಎಂದರೆ – ಒಂದು ಪದವನ್ನು ಎರಡು ಬಾರಿ ಉಚ್ಚರಿಸುವುದು.
- ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ಹೀಗೆನ್ನುವರು – ದ್ವಿರುಕ್ತಿ.
- ದ್ವಿರುಕ್ತಿಗಳಿಗೆ ಉದಾಹರಣೆಗಳು – ಹೌದು ಹೌದು, ದೊಡ್ಡ ದೊಡ್ಡ, ಮನೆಮನೆ, ಎಲೆಲೆ, ಕಳ್ಳಾ ಕಳ್ಳಾ, ಅಗೋ ಅಗೋ, ಬನ್ನಿ ಬನ್ನಿ, ಅಬ್ಬಬ್ಬಾ, ಬೇಡ ಬೇಡ, ಮೊಟ್ಟಮೊದಲು ಇತ್ಯಾದಿ.
- ಕಾಯಕನರು, ದೇವರುಗೀವರು, ಬಟ್ಟೆಬರೆ, ಸಾಲಸೋಲ ಇವು – ಜೋಡುನುಡಿಗಳು.
ಕ್ರಿಯಾಪದ ಪ್ರಕರಣ
By Karnataka | 24 Jun, 2026 | Leave a comment