| ವರ್ಣಸ್ಥಾನ | ಅರ್ಥ | ಸ್ವರಗಳು | ವರ್ಗೀಯ ವ್ಯಂಜನಗಳು | ಅವರ್ಗೀಯ ವ್ಯಂಜನಗಳು / ಯೋಗವಾಹ |
| ಕಂಠ್ಯವರ್ಣ | ಗಂಟಲಿನಿಂದ ಹುಟ್ಟುವ ಅಕ್ಷರಗಳಿಗೆ ಕಂಠ್ಯವರ್ಣ | ಅ, ಆ | ಕ, ಖ, ಗ, ಘ, ಙ | ಹ, ವಿಸರ್ಗ ( ಃ ) |
| ತಾಲು / ತಾಲವ್ಯ | ದವಡೆ (ತಾಲು) ಯಿಂದ ಹುಟ್ಟುವ ಅಕ್ಷರಗಳೇ ತಾಲವ್ಯಾಕ್ಷರಗಳು | ಇ, ಈ | ಚ, ಛ, ಜ, ಝ, ಞ | ಯ, ಶ |
| ಮೂರ್ಧನ್ಯ | ನಾಲಿಗೆಯ ಮೇಲ್ಭಾಗ ಮತ್ತು ಮೂಗಿನ ಕೆಳಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳು. | ಋ | ಟ, ಠ, ಡ, ಢ, ಣ | ರ, ಷ, ಳ |
| ದಂತ್ಯವರ್ಣ | ಹಲ್ಲುಗಳ ಸಹಾಯದಿಂದ ಹುಟ್ಟುವ ಅಕ್ಷರಗಳು | — | ತ, ಥ, ದ, ಧ, ನ | ಸ, ಲ |
| ಓಷ್ಠ್ಯವರ್ಣ | ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು | ಉ, ಊ | ಪ, ಫ, ಬ, ಭ, ಮ | ಅಂ (ಅನುಸ್ವಾರ) |
| ದಂತೋಷ್ಠ್ಯ | ಹಲ್ಲು ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು | — | — | ವ |
| ಕಂಠತಾಲು | ಕಂಠ ಮತ್ತು ದವಡೆಯ ಸಹಾಯದಿಂದ ಹುಟ್ಟುವ ಅಕ್ಷರಗಳು | ಎ, ಏ, ಐ | — | — |
| ಕಂಠೋಷ್ಠ್ಯ | ಕಂಠ ಮತ್ತು ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು | ಒ, ಓ, ಔ | — | — |
| ನಾಸಿಕವರ್ಣ | ಮೂಗಿನ ಸಹಾಯದಿಂದ ಹುಟ್ಟುವ ಅಕ್ಷರಗಳು | — | ಙ, ಞ, ಣ, ನ, ಮ | — |
ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು
By Karnataka | 13 Sep, 2026 | Comments Off on ಕನ್ನಡ ಅಕ್ಷರಗಳ ಉಚ್ಚಾರಣಾ ಸ್ಥಾನಗಳು