| ಪ್ರಶ್ನೆ | ಉತ್ತರ |
| ಮೇ – 26 – 2014 ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು? | 15ನೇ |
| ಇತ್ತೀಚೆಗೆ ನಡೆದ 2014 ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ? | ಝಾನ್ಸಿ |
| ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ ಮೊದಲಿಗೆ ಯಾವ ವೃತ್ತಿಯಲ್ಲಿದ್ದರು? | ಸುಪ್ರೀಂ ಕೋರ್ಟಿನಲ್ಲಿ ವಕೀಲರು |
| ಕಿರುತೆರೆ ನಟಿ ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಯಾವ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದರು? | ರಾಹುಲ್ ಗಾಂಧಿ |
| ತಮಿಳುನಾಡು ಬಿಜೆಪಿಯಿಂದ ಆಯ್ಕೆಯಾಗಿರುವ ಏಕೈಕ ಸಂಸದರು ಯಾರು? | ಪೊನ್ ರಾಧಾಕೃಷ್ಣನ್ |
| ಭಾರತೀಯ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿ ಬಳಿಕ ವಿ.ಕೆ.ಸಿಂಗ್‌ರವರು 2014ರ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು? | ಉತ್ತರ ಪ್ರದೇಶದ ಗಾಜಿಯಾಬಾದ್ |
| ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ಸ್ಥಳ ಯಾವುದು? | ಗುಜರಾತಿನ ಮೆಹಸಾನಾ ಜಿಲ್ಲೆಯ ವಡ್‌ನಗರ |
| ನರೇಂದ್ರ ಮೋದಿಯವರು ಮೊದಲು ಗುಜರಾತಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷ ಯಾವುದು? | 2001 – ಆಗಸ್ಟ್ – 07 |
| ಮೋದಿ ಸಂಪುಟದಲ್ಲಿರುವ ಅತಿ ಹಿರಿಯವಯಸ್ಸಿನ ಸಚಿವ ಯಾರು? | ನಜ್ಮಾ ಹೆಪ್ತುಲ್ಲಾ |
| ಅರುಣ ಜೇಟ್ಲಿ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವರ್ಷ ಯಾವುದು? | 2014 |
| ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು? | ಜೆ.ಎಂ.ಕೇನ್ಸ್ |
| VAT ನ – ವಿಸ್ತೃತ ರೂಪವೇನು? | ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (Value Added Tax) |
| ನವಿಲುತೀರ್ಥ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? | ಮಲಪ್ರಭಾ |
| ಮಂಗಳ ಗ್ರಹಕ್ಕೆ ಎರಡು ಉಪಗ್ರಹಗಳಿರಬೇಕೆಂದು ಮೊದಲು ಊಹಿಸಿದವರು ಯಾರು? | ಜೊನಾಥನ್ ಸ್ವಿಫ್ಟ್ |
| ಕೊಂಕಣ ರೈಲು ಮಾರ್ಗ ಯಾವ ರಾಜ್ಯಗಳ ಜಂಟಿ ಯೋಜನೆ? | ಕರ್ನಾಟಕ, ಗೋವಾ, ಮಹಾರಾಷ್ಟ್ರ |
| ಬ್ರಹ್ಮಗಿರಿ ವನ್ಯ ಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಕೊಡಗು ಜಿಲ್ಲೆ |
| ಮಾನವನ ಜಠರದ ಗೋಡೆಯಲ್ಲಿ ಎಷ್ಟು ಪದರದ ಸ್ನಾಯುಗಳಿವೆ? | ಮೂರು |
| ಫಿರಾಮಿಡ್‌ಗಳು ಯಾವ ನಾಗರಿಕತೆಯ ಕೊಡುಗೆಗಳು? | ಈಜಿಪ್ಟ್ ನಾಗರಿಕತೆ |
| ಭಾರತ ಸರ್ಕಾರವು ಕೊಳಚೆ ನಿರ್ಮೂಲನಾ ಸುಧಾರಣಾ ಕಾಯಿದೆ ಜಾರಿಗೆ ತಂದ ವರ್ಷ ಯಾವುದು? | 1956 |
| ರಾಷ್ಟ್ರೀಯ ನರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| ಭಾರತದಲ್ಲಿ ಮೊದಲ ಸಿನಿಮಾ ತಯಾರಿಕೆ ಆರಂಭವಾದ ವರ್ಷ ಯಾವುದು? | 1912 |
| ಸಿಂಧೂನದಿ ನಾಗರಿಕತೆಯ ಜನರ ಮುಖ್ಯ ಉದ್ಯೋಗ ಯಾವುದಾಗಿತ್ತು? | ಕೃಷಿ ಮತ್ತು ವ್ಯಾಪಾರ |
| ಗೋಬಿ ಮರುಭೂಮಿ ಯಾವ ಖಂಡದಲ್ಲಿದೆ? | ಏಷ್ಯಾ ಖಂಡ |
| ಎಲೆಕ್ಟ್ರಾನ್ನನ್ನು ಕಂಡು ಹಿಡಿದವರು ಯಾರು? | ಜೆ.ಜೆ. ಥಾಮ್ಸನ್ |
| ಅಮೆರಿಕಾದ ಛಾಯಾ ಚಿತ್ರ ಸೊಸೈಟಿಯ ಗೌರವ ಫೆಲೋಶಿಪ್ ಪಡೆದ ಮೊದಲ ಕರ್ನಾಟಕದ ವ್ಯಕ್ತಿ ಯಾರು? | ಸಿ. ರಾಜಗೋಪಾಲ್ |
| ಮೈಸೂರು ಸ್ಯಾಂಡಲ್ ಸೋಪು ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| ‘ಇಂದಿರಾ ಪಾಯಿಂಟ್’ ಎಲ್ಲಿದೆ? | ನಿಕೋಬಾರ್ |
| 1952ರಲ್ಲಿ ಭಾರತದ ಮೊದಲ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಕನ್ನಡಿಗ ಯಾರು? | ಆರ್.ಆರ್.ದಿವಾಕರ್ |
Q and Answers in Kannada Part – 28
By Karnataka | 23 Jun, 2026 | Leave a comment