| ಪ್ರಶ್ನೆ | ಉತ್ತರ |
| ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು ಯಾವ ದೇಶದ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಯಿತು? | ರಷ್ಯಾ |
| ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 1 ಮೇ 1960 |
| ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು? | ಚಕ್ರವರ್ತಿ ರಾಜಗೋಪಾಲಾಚಾರಿ |
| ಮೊದಲ ಭಾರತ – ಪಾಕ್ ಯುದ್ಧ ನಡೆದಾಗ ಭಾರತದ ಕಮಾಂಡರ್ ಆಗಿ ಸೇವೆಯಲ್ಲಿದ್ದ ಕನ್ನಡಿಗ ಯಾರು? | ಫೀಲ್ಡ್ ಮಾರ್ಷಲ್ ಕಾರ್ಯಪ್ಪ |
| ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಲ್ಲಿದೆ? | ವಾರಣಾಸಿ |
| 1957-58ರ ಅವಧಿಯಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಒಟ್ಟುಗೂಡಿ ಭೂಮಿ ಮತ್ತು ಪರಿಸರಗಳ ಅಧ್ಯಯನ ನಡೆಸಿದರು. ಅದನ್ನು ಏನೆಂದು ಕರೆಯುತ್ತಾರೆ? | ಇಂಟರ್ ನ್ಯಾಷನಲ್ ಜಿಯೋಫಿಸಿಕಲ್ ಇಯರ್ |
| ಶಿಳ್ಳೆ ಹೊಡೆದಂತೆ ದನಿ ಹೊರಡಿಸುವ ಹಕ್ಕಿ ಯಾವುದು? | ಲೋರಾ |
| ಜಪಾನ್ ಮೇಲೆ ಹಾಕಲ್ಪಟ್ಟ ಪರಮಾಣು ಬಾಂಬ್ನ ಸಾಂಕೇತಿಕ ಹೆಸರೇನು? | ಲಿಟಲ್ ಬಾಯ್ |
| ನೇತ್ರ ತಜ್ಞರು ಪರೀಕ್ಷೆ ಮಾಡುವ ಮೊದಲು ರೋಗಿಯ ಕಣ್ಣುಗಳಿಗೆ ಸಾರರಹಿತ ದ್ರಾವಣ ಹಾಕುತ್ತಾರೆ. ಆ ದ್ರಾವಣ ಯಾವುದು? | ಅಲ್ಕಾಲಾಯ್ಡ್ ಅಟ್ರೋಫೈನ್ |
| ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ? | ಯು.ಕೆ. ರಾಯಲ್ ಗ್ರೀನ್ವಿಚ್ ವೀಕ್ಷಣಾಲಯ |
| 2008-2012ರ ಅವಧಿಯ ಭಾರತದ ರಿಸರ್ವ್ ಬ್ಯಾಂಕ್ನ ಗವರ್ನರ್ ಯಾರಾಗಿದ್ದರು? | ಡಿ. ಸುಬ್ಬರಾವ್ |
| ಮಹಾರಾಷ್ಟ್ರ ರಾಜ್ಯ ಆಡಳಿತದ ಭಾಷೆ ಯಾವುದು? | ಮರಾಠಿ |
| ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ? | ಮುಂಬೈ |
| ರಾಜವರ್ಧನ ಸಿಂಗ್ ರಾಥೋರ್ ಯಾವ ಕ್ರೀಡೆಗೆ ಹೆಸರುವಾಸಿ? | ಶೂಟಿಂಗ್ |
| ಸಿಖ್ಖರ ಹತ್ತನೆಯ ಮತ್ತು ಕೊನೆಯ ಗುರು ಯಾರು? | ಗುರು ಗೋವಿಂದ ಸಿಂಗ್ |
| ವಿಶ್ವದ ಅತಿ ದೊಡ್ಡ ಸಾಗರ ಯಾವುದು? | ಪೆಸಿಫಿಕ್ ಸಾಗರ |
| ಯಾವ ರಾಷ್ಟ್ರವು ಮೊದಲ ಬಾರಿಗೆ ಯುದ್ಧದಲ್ಲಿ ವಿಮಾನವನ್ನು ಉಪಯೋಗ ಮಾಡಿತು? | ಇಟಲಿ |
| ಭಾರತದ ಆಡಳಿತ ಸುಧಾರಣೆ ಬಗ್ಗೆ ಮುತುವರ್ಜಿ ವಹಿಸಿದ ಮೊದಲ ಅಫಘಾನ್ ದೊರೆ ಯಾರು? | ಶೇರ್ ಶಹಾ ಸೂರಿ |
| ಕೊಯ್ನಾ ನೀರಾವರಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ರಾಜ್ಯ ಯಾವುದು? | ಮಹಾರಾಷ್ಟ್ರ |
| ಕೈಗಾ ಅಣುವಿದ್ಯುತ್ ಕೇಂದ್ರ ಪ್ರಾರಂಭವಾದ ವರ್ಷ ಯಾವುದು? | 2000 |
| ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ? | ಕಾನ್ಪುರ |
| ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು? | ದ್ವೈತ ಸಿದ್ಧಾಂತ |
| 1890ರಲ್ಲಿ ಧಾರವಾಡದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾದ ಸಂಘ ಯಾವುದು? | ಕರ್ನಾಟಕ ವಿದ್ಯಾವರ್ಧಕ ಸಂಘ |
| ಭಾರತದ ಸಂವಿಧಾನ ರಚಿಸಲು ತೆಗೆದುಕೊಂಡ ಅವಧಿ ಎಷ್ಟು? | 2 ವರ್ಷ 11 ತಿಂಗಳು 18 ದಿನಗಳು |
| ಭಾರತದ ಬಿಸ್ಮಾರ್ಕ್ ಎಂದು ಜನಪ್ರಿಯರಾದವರು ಯಾರು? | ಸರ್ದಾರ್ ವಲ್ಲಭಭಾಯಿ ಪಟೇಲ್ |
| ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು? | ಭಾರತ |
| ಆರೋಗ್ಯಶಾಲಿಯ ವ್ಯಕ್ತಿಯ ನಾಡಿ ಮಿಡಿತ ಒಂದು ನಿಮಿಷಕ್ಕೆ ಎಷ್ಟಿರುತ್ತದೆ? | 72 |
| 2014ರಲ್ಲಿ ನಡೆದ ಟಿ-20 ವಿಶ್ವ ಕಪ್ ಆತಿಥ್ಯ ವಹಿಸಿದ ದೇಶ ಯಾವುದು? | ಬಾಂಗ್ಲಾದೇಶ |
| ಆಪಲ್ ಇಂಟರ್ ನ್ಯಾಷನಲ್ ಕಂಪನಿ ತಯಾರಿಸುವ ಐಫೋನ್ಗಳು ಮೊದಲ ಪರಿಚಯವಾಗಿದ್ದು ಯಾವಾಗ? | ಜನವರಿ – 09 – 2007 |
Q and Answers in Kannada Part – 21
By Karnataka | 23 Jun, 2026 | Leave a comment