| ಪ್ರಶ್ನೆ | ಉತ್ತರ |
| ಮಹಮ್ಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ. ಆ ಚಿತ್ರ ಯಾವುದು? | ಒಂದೇ ಬಳ್ಳಿ ಹೂಗಳು |
| ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು? | ಮಯೂರವರ್ಮ (ಕದಂಬರು) |
| ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ 2 ವರ್ಷಕ್ಕೆ ಹೆಚ್ಚಿಸಲಾಯಿತು? | 1929-29 |
| ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ? | ಬೀದರ್ |
| ಕನ್ನಡದ ಮೊದಲ ನಾಟಕ ಯಾವುದು? | ಮಿತ್ರವೃಂದ ಗೋವಿಂದ |
| ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು? | ಡಿ.ವಿ.ಜಿ |
| ಮ್ಯಾಗ್ಸೆಸೆ ಪ್ರಶಸ್ತಿ ಪಡೆದ (ರಂಗಭೂಮಿ ಸೇವೆಗೆ) ಮೊದಲ ಕನ್ನಡಿಗ ಯಾರು? | ಕೆ.ವಿ.ಸುಬ್ಬಣ್ಣ |
| ಕರ್ನಾಟಕ ಪ್ರಥಮ ಶಾಖೋತ್ಪನ್ನ ವಿದ್ಯುದ್ಧಾರ ಎಲ್ಲಿದೆ? | ಶಕ್ತಿನಗರ |
| ಕನ್ನಡದ ಮೊದಲ ಕೃತಿ ಯಾವುದು? | ಕವಿರಾಜಮಾರ್ಗ |
| ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ? | ಹರಿಹರ |
| ಕರ್ನಾಟಕದ ಸಿಂಹವೆಂದು ಯಾರಿಗೆ ಹೇಳುವರು? | ಗಂಗಾಧರ ದೇಶಪಾಂಡೆ |
| ಕರ್ನಾಟಕದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು? | ಗೌರಿಬಿದನೂರು |
| ಬೇಚೆ ಇದು ಯಾರ ಕಾವ್ಯನಾಮ? | ರಾಯಸಂ ಭೀಮಸೇನರಾವ್ |
| ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಯಾವುದು? | ಮೈಸೂರು ವಿಶ್ವವಿದ್ಯಾನಿಲಯ |
| ಪೃಥ್ವಿರಾಜ್ ಕಪೂರ್ ನಟಿಸಿರುವ ಕನ್ನಡ ಚಿತ್ರ ಯಾವುದು? | ಸಾಕ್ಷಾತ್ಕಾರ |
| ಕನ್ನಡದ ಮೊದಲ ಶಿಲಾಶಾಸನ ಯಾವುದು? | ಹಲ್ಮಿಡಿ ಶಾಸನ (ಕ್ರಿ.ಶ. 450) |
| ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು? | ವಿ ಶಾಂತಾರಾಮ್ |
| ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು? | ಉತ್ತರ ಕನ್ನಡ ಜಿಲ್ಲೆಯ ಸೂಪ (153 ಮೀ) |
| ಕನ್ನಡದ ಮೊದಲ ಕಾದಂಬರಿ ಯಾವುದು? | ಇಂದಿರಬಾಯಿ (ಗುಲ್ವಾಡಿ ವೆಂಕಟರಾವ್ ವಿರಚಿತ) |
| ಕನಕದಾಸರ ಹುಟ್ಟೂರು ಯಾವುದು? | ಬಾಡ (ಹಾವೇರಿ ಜಿಲ್ಲೆ) |
| ನೋಬೆಲ್ ಪ್ರಶಸ್ತಿ ಪಡೆದ ಕನ್ನಡಿಗ ವಿಜ್ಞಾನಿ ಯಾರು? | ಸರ್.ಸಿ.ವಿ.ರಾಮನ್ |
| ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು? | 1915 |
| ಇಪ್ಪತ್ತೆರಡು ಭಾಷೆಗಳನ್ನು ಕಲಿತಿದ್ದ ಏಕೈಕ ಕನ್ನಡಿಗ ಯಾರು? | ಗೋವಿಂದಪೈ |
| ಕರ್ನಾಟಕದ ಪ್ರಥಮ ರಾಜ್ಯಪಾಲರು ಯಾರು? | ಜಯಚಾಮರಾಜ ಒಡೆಯರು |
| ಕನ್ನಡದ ಚಲನಚಿತ್ರದ ಮೊದಲ ನಾಯಕ ನಟ ಯಾರು? | ಎಂ.ವಿ.ಸುಬ್ಬಯ್ಯನಾಯ್ಡು |
| ಕರ್ನಾಟಕದಲ್ಲಿ ಬಾಹ್ಯಾಕಾಶ ಕೇಂದ್ರ ಎಲ್ಲಿ ಸ್ಥಾಪನೆ ಆಗಿದೆ? | ಹಾಸನ |
| ಏಷ್ಯಾದ ಮೊಟ್ಟಮೊದಲ ಜಲವಿದ್ಯುತ್ ಶಕ್ತಿ ಕೇಂದ್ರ ಯಾವುದು? | ಶಿವನಸಮುದ್ರ ಯೋಜನೆ |
| ಮಹಾಭಾರತವನ್ನು ಕಾದಂಬರಿಯಾಗಿ ಬರೆದವರು ಯಾರು? ಕಾದಂಬರಿ ಯಾವುದು? | ಎಸ್.ಎಲ್.ಭೈರಪ್ಪ – ಪರ್ವ |
| ಕರ್ನಾಟಕದ ದೊಡ್ಡ ದೇವಾಲಯ ಯಾವುದು? | ಶ್ರೀ ಕಂಠೇಶ್ವರ ದೇವಾಲಯ (ನಂಜನಗೂಡು) |
Q and Answers in Kannada Part – 2
By Karnataka | 23 Jun, 2026 | Leave a comment