| ಪ್ರಶ್ನೆ | ಉತ್ತರ |
| ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೆ ತಂದವರು ಯಾರು? | ಲಾರ್ಡ್ ವಿಲಿಯಂ ಬೆಂಟಿಂಕ್ |
| ‘ನೆಲಗಡಲೆ’ ಇದು ಮೂಲತಃ ಯಾವ ದೇಶದ ಬೆಳೆ? | ಬ್ರೆಜಿಲ್ |
| ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರವಿರುವ ದಿನಪತ್ರಿಕೆ ಯಾವುದು? | ದಿ ಟೈಮ್ಸ್ ಆಫ್ ಇಂಡಿಯಾ |
| ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ? | ಆರ್‌ಬಿಐ (RBI) ಗವರ್ನರ್ |
| ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ? | ಸರೋಜಿನಿ ನಾಯ್ಡು |
| ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು? | ವಿಲಿಯಂ ಷೇಕ್ಸ್‌ಪಿಯರ್ |
| ನೇತ್ರದಾನದಲ್ಲಿ ಕಣ್ಣಿನ ಯಾವ ಭಾಗವನ್ನು ಬೇರೆಯವರಿಗೆ ಅಳವಡಿಸಬಹುದು? | ಕಾರ್ನಿಯಾ (Cornea) |
| ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘ ಸ್ಥಾಪಿಸಿದವರು ಯಾರು? | ಎಂ.ಕೆ. ಗಾಂಧಿ |
| ಅಭ್ರಕ ಹೆಚ್ಚಾಗಿ ಉತ್ಪಾದಿಸುವ ರಾಜ್ಯ ಯಾವುದು? | ಆಂಧ್ರ ಪ್ರದೇಶ |
| ವಿಶ್ವ ವಿಖ್ಯಾತ ಪ್ರೇಮಕಥೆ ಲೈಲಾ ಮಜ್ನು ಕೃತಿ ರಚಿಸಿದವರು ಯಾರು? | ಅಮೀರ ಖುಸ್ರು |
| ಹಿಜಿರಾ ಶಕವರ್ಷ ಪ್ರಾರಂಭವಾದದ್ದು ಯಾವಾಗ? | ಕ್ರಿ.ಶ. 622 |
| ದಿವಂಗತ ಧೀರುಬಾಯಿ ಅಂಬಾನಿಯವರ ಪತ್ನಿಯ ಹೆಸರೇನು? | ಕೋಕಿಲಾ ಬೆನ್ |
| ರಾಮ್ ಜೇಠ್ಮಲಾನಿಯವರು 1999 ರಲ್ಲಿ ಸ್ಥಾಪಿಸಿದ ಪಕ್ಷದ ಹೆಸರೇನು? | ಭಾರತೀಯ ಲೋಕ ಪಂಚಾಯತ್ |
| ಪ್ರತಿದಿನ ನಮ್ಮ ಆಹಾರದಲ್ಲಿ ಎಷ್ಟು ಗ್ರಾಂ ಕೊಬ್ಬು ಇರಬೇಕು? | 80 ಗ್ರಾಂ |
| ಹೆಚ್.ಐ.ವಿ (HIV) ವಿಸ್ತೃತ ರೂಪವೇನು? | ಹ್ಯೂಮನ್ ಇಮ್ಯುನೋ ಡಿಫಿಷಿಯನ್ಸಿ ವೈರಸ್ |
| ಬುದ್ಧ ಪೌರ್ಣಮಿಯ ಮಹತ್ವ ಬರಲು ಕಾರಣವೇನು? | ಬುದ್ಧನ ಹುಟ್ಟು, ಜ್ಞಾನೋದಯ ಮತ್ತು ನಿರ್ವಾಣ |
| ರೇಷ್ಮೆಯನ್ನು ಪ್ರಥಮವಾಗಿ ಆವಿಷ್ಕರಿಸಿದ ನಾಗರಿಕರು ಯಾರು? | ಚೀನೀಯರು |
| ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾದ ಪ್ರಥಮ ಭಾರತೀಯ ಯಾರು? | ಸುಭಾಷ್ ಚಂದ್ರ ಬೋಸ್ |
| ಫೌಂಟನ್ ಪೆನ್ನನ್ನು ಕಂಡು ಹಿಡಿದವರು ಯಾರು? | ಎಲ್.ಇ. ವಾಟರ್ ಮ್ಯಾನ್ |
| ಸಿಂಧೂ ನದಿಯ ಉಪನದಿಗಳು ಯಾವುವು? | ರಾವಿ, ಜೀಲಂ, ಸೆಟ್ಲೆಜ್ |
| ಗಿರ್ ಅರಣ್ಯಧಾಮ ಯಾವ ರಾಜ್ಯದಲ್ಲಿದೆ? | ಗುಜರಾತ್ |
| ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಎಂದು ಆಚರಿಸುವರು? | ಮೇ 8 |
| ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಬಳಸಿದ ನೌಕೆ ಯಾವುದು? | ಸೋಯುಜ್ ಟಿ – 11 |
| ರೆಡ್‌ಕ್ರಾಸ್ ಸಂಸ್ಥೆಯ ಸ್ಥಾಪಕ ಯಾರು? | ಹೆನ್ರಿ ಡುನಾಂಟ್ |
| ಎರಡು ಮೆದುಳುಗಳಿದ್ದ ಪ್ರಾಣಿ ಯಾವುದು? | ಡೈನೋಸಾರ್ |
| ಮಾನವನ ದೇಹದ ರಕ್ತದ ಗುಂಪುಗಳು ಯಾವುವು? | ಎ, ಬಿ, ಎಬಿ ಮತ್ತು ಒ |
| ಮನುಷ್ಯನ ದೇಹದಲ್ಲಿನ ಸಣ್ಣ ಕರುಳಿನ ಉದ್ದ ಎಷ್ಟು? | 6 ಮೀಟರ್ |
| ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸುತ್ತದೆ? | 76 ವರ್ಷಗಳಿಗೊಮ್ಮೆ |
| ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಯಾವುದು? | ಮದರ್ ಇಂಡಿಯಾ |
Q and Answers in Kannada Part – 13
By Karnataka | 23 Jun, 2026 | Leave a comment