Karnatakaexamshub


Blog

ಕನ್ನಡ ವರ್ಣಮಾಲೆ

By Karnataka  |  13 Sep, 2026  |  Comments Off on ಕನ್ನಡ ವರ್ಣಮಾಲೆ


ಕನ್ನಡ ವರ್ಣಮಾಲೆ (ಒಟ್ಟು: 49)

೧. ಸ್ವರಗಳು (13)

ವಿವರಣೆ: ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳು.

  • ಹ್ರಸ್ವಸ್ವರ (6): ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು.
    • ಅ, ಇ, ಉ, ಋ, ಎ, ಒ
  • ದೀರ್ಘಸ್ವರ (7): ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು.
    • ಆ, ಈ, ಊ, ಏ, ಐ, ಓ, ಔ
  • ಪ್ಲುತಸ್ವರ: ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು.
    • ಉದಾ: ಅಮ್ಮಾ೩, ಅಪ್ಪಾ೩

೨. ವ್ಯಂಜನಗಳು (34)

ವಿವರಣೆ: ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳು.

  • ವರ್ಗೀಯ ವ್ಯಂಜನ (25): ಅಕ್ಷರಗಳ ಉತ್ಪತ್ತಿ ಸ್ಥಾನದ ಆಧಾರದ ಮೇಲೆ ಸರಿಯಾಗಿ ವರ್ಗೀಕರಿಸಲು ಬರುವ ವ್ಯಂಜನಗಳು.
    • ಅಲ್ಪಪ್ರಾಣ (10): ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (1 ಮತ್ತು 3ನೇ ವರ್ಗದ ಅಕ್ಷರಗಳು).
      • ಕ, ಗ | ಚ, ಜ | ಟ, ಡ | ತ, ದ | ಪ, ಬ
    • ಮಹಾಪ್ರಾಣ (10): ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (2 ಮತ್ತು 4ನೇ ವರ್ಗದ ಅಕ್ಷರಗಳು).
      • ಖ, ಘ | ಛ, ಝ | ಠ, ಢ | ಥ, ಧ | ಫ, ಭ
    • ಅನುನಾಸಿಕಗಳು (5): ಮೂಗಿನ ಸಹಾಯದಿಂದ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (5ನೇ ವರ್ಗದ ಅಕ್ಷರಗಳು).
      • ಙ, ಞ, ಣ, ನ, ಮ
  • ಅವರ್ಗೀಯ ವ್ಯಂಜನ (9): ಅಕ್ಷರಗಳ ಉತ್ಪತ್ತಿ ಸ್ಥಾನದ ಆಧಾರದ ಮೇಲೆ ಸರಿಯಾಗಿ ವರ್ಗೀಕರಿಸಲು / ಒಂದು ವರ್ಗಕ್ಕೆ ಸೇರಿಸಲು ಬಾರದ ವ್ಯಂಜನಗಳು.
    • ಯ, ರ, ಲ, ವ, ಶ, ಷ, ಸ, ಹ, ಳ

೩. ಯೋಗವಾಹಗಳು (2)

ವಿವರಣೆ: ಸ್ವತಂತ್ರವಲ್ಲದ, ಸ್ವರವೂ ಅಲ್ಲದ, ವ್ಯಂಜನವೂ ಅಲ್ಲದ, ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦, ವಿಸರ್ಗ-ಃ) ಯೋಗವಾಹಗಳೆಂದು ಕರೆಯುತ್ತಾರೆ.

  • ಅನುಸ್ವಾರ (1): ಅಂ
  • ವಿಸರ್ಗ (1): ಅಃ

ವಿಶೇಷ ಟಿಪ್ಪಣಿಗಳು

  • ಹೊಸಗನ್ನಡದ ರ-ಳ ಗಳನ್ನು ಹಳಗನ್ನಡದಲ್ಲಿ ಱ, ೞ ಎಂದು ಕರೆಯುತ್ತಾರೆ.
  • ಕೇಶಿರಾಜನ ಪ್ರಕಾರ ದೇಶಿಯ 5 ಅಕ್ಷರಗಳೆಂದರೆ: ಎ, ಒ, ಱ, ೞ, ಕುಳ (ಳ)
  • ಹಳಗನ್ನಡದಲ್ಲಿ 4 ಯೋಗವಾಹಗಳಿವೆ:
    1. ಅನುಸ್ವಾರ/ಬಿಂದು (ಅಂ)
    2. ವಿಸರ್ಗ (ಅಃ)
    3. ಉಪಾಧ್ಮಾನೀಯ ( ೲ )
    4. ಜಿಹ್ವಾಮೂಲೀಯ ( ೱ )
  • ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು:
    1. ಸ್ವರ ಅಕ್ಷರಗಳು
    2. ವರ್ಗೀಯ ವ್ಯಂಜನ ಅಕ್ಷರಗಳು
    3. ಅವರ್ಗೀಯ ವ್ಯಂಜನ ಅಕ್ಷರಗಳು
    4. ಯೋಗವಾಹ ಅಕ್ಷರಗಳು
    5. ದೇಶೀಯ ಅಕ್ಷರಗಳು
manojns1997

error: Content is protected !!