ಕನ್ನಡ ವರ್ಣಮಾಲೆ (ಒಟ್ಟು: 49)
೧. ಸ್ವರಗಳು (13)
ವಿವರಣೆ: ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳು.
- ಹ್ರಸ್ವಸ್ವರ (6): ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು.
- ಅ, ಇ, ಉ, ಋ, ಎ, ಒ
- ದೀರ್ಘಸ್ವರ (7): ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು.
- ಆ, ಈ, ಊ, ಏ, ಐ, ಓ, ಔ
- ಪ್ಲುತಸ್ವರ: ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳು.
- ಉದಾ: ಅಮ್ಮಾ೩, ಅಪ್ಪಾ೩
೨. ವ್ಯಂಜನಗಳು (34)
ವಿವರಣೆ: ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳು.
- ವರ್ಗೀಯ ವ್ಯಂಜನ (25): ಅಕ್ಷರಗಳ ಉತ್ಪತ್ತಿ ಸ್ಥಾನದ ಆಧಾರದ ಮೇಲೆ ಸರಿಯಾಗಿ ವರ್ಗೀಕರಿಸಲು ಬರುವ ವ್ಯಂಜನಗಳು.
- ಅಲ್ಪಪ್ರಾಣ (10): ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (1 ಮತ್ತು 3ನೇ ವರ್ಗದ ಅಕ್ಷರಗಳು).
- ಕ, ಗ | ಚ, ಜ | ಟ, ಡ | ತ, ದ | ಪ, ಬ
- ಮಹಾಪ್ರಾಣ (10): ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (2 ಮತ್ತು 4ನೇ ವರ್ಗದ ಅಕ್ಷರಗಳು).
- ಖ, ಘ | ಛ, ಝ | ಠ, ಢ | ಥ, ಧ | ಫ, ಭ
- ಅನುನಾಸಿಕಗಳು (5): ಮೂಗಿನ ಸಹಾಯದಿಂದ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (5ನೇ ವರ್ಗದ ಅಕ್ಷರಗಳು).
- ಙ, ಞ, ಣ, ನ, ಮ
- ಅಲ್ಪಪ್ರಾಣ (10): ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು (1 ಮತ್ತು 3ನೇ ವರ್ಗದ ಅಕ್ಷರಗಳು).
- ಅವರ್ಗೀಯ ವ್ಯಂಜನ (9): ಅಕ್ಷರಗಳ ಉತ್ಪತ್ತಿ ಸ್ಥಾನದ ಆಧಾರದ ಮೇಲೆ ಸರಿಯಾಗಿ ವರ್ಗೀಕರಿಸಲು / ಒಂದು ವರ್ಗಕ್ಕೆ ಸೇರಿಸಲು ಬಾರದ ವ್ಯಂಜನಗಳು.
- ಯ, ರ, ಲ, ವ, ಶ, ಷ, ಸ, ಹ, ಳ
೩. ಯೋಗವಾಹಗಳು (2)
ವಿವರಣೆ: ಸ್ವತಂತ್ರವಲ್ಲದ, ಸ್ವರವೂ ಅಲ್ಲದ, ವ್ಯಂಜನವೂ ಅಲ್ಲದ, ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦, ವಿಸರ್ಗ-ಃ) ಯೋಗವಾಹಗಳೆಂದು ಕರೆಯುತ್ತಾರೆ.
- ಅನುಸ್ವಾರ (1): ಅಂ
- ವಿಸರ್ಗ (1): ಅಃ
ವಿಶೇಷ ಟಿಪ್ಪಣಿಗಳು
- ಹೊಸಗನ್ನಡದ ರ-ಳ ಗಳನ್ನು ಹಳಗನ್ನಡದಲ್ಲಿ ಱ, ೞ ಎಂದು ಕರೆಯುತ್ತಾರೆ.
- ಕೇಶಿರಾಜನ ಪ್ರಕಾರ ದೇಶಿಯ 5 ಅಕ್ಷರಗಳೆಂದರೆ: ಎ, ಒ, ಱ, ೞ, ಕುಳ (ಳ)
- ಹಳಗನ್ನಡದಲ್ಲಿ 4 ಯೋಗವಾಹಗಳಿವೆ:
- ಅನುಸ್ವಾರ/ಬಿಂದು (ಅಂ)
- ವಿಸರ್ಗ (ಅಃ)
- ಉಪಾಧ್ಮಾನೀಯ ( ೲ )
- ಜಿಹ್ವಾಮೂಲೀಯ ( ೱ )
- ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು:
- ಸ್ವರ ಅಕ್ಷರಗಳು
- ವರ್ಗೀಯ ವ್ಯಂಜನ ಅಕ್ಷರಗಳು
- ಅವರ್ಗೀಯ ವ್ಯಂಜನ ಅಕ್ಷರಗಳು
- ಯೋಗವಾಹ ಅಕ್ಷರಗಳು
- ದೇಶೀಯ ಅಕ್ಷರಗಳು