1. ಸೇವಾ ತೆರಿಗೆ, ಅಂದರೆ ದೂರವಾಣಿ ಸೇವೆಗಳು, ಶೇರು ದಲ್ಲಾಳಿಗಳು, ಹೆಲ್ತ್ ಕ್ಲಬ್ಗಳು, ಬ್ಯೂಟಿ ಪಾರ್ಲರ್ಗಳು, ಡ್ರೈ ಕ್ಲೀನಿಂಗ್ ಸೇವೆಗಳು ಮುಂತಾದ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಯನ್ನು ______ ರಲ್ಲಿ ಜಾರಿಗೆ ತರಲಾಯಿತು.
2. ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ಅನುಚ್ಛೇದವು ಯಾವುದೇ ಅಪರಾಧದ ಆರೋಪ ಹೊತ್ತಿರುವ ಯಾವುದೇ ವ್ಯಕ್ತಿಯನ್ನು ತನ್ನ ವಿರುದ್ಧ ಸಾಕ್ಷಿಯಾಗುವಂತೆ ಒತ್ತಾಯಿಸಲಾಗುವುದಿಲ್ಲ ಎಂಬುವುದನ್ನು ಉಲ್ಲೇಖಿಸುತ್ತದೆ?
3. ಸರೋಜಿನಿ ನಾಯ್ಡು ಅವರು ______ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು?
4. “ಲೋಸರ್” ಉತ್ಸವವನ್ನು ಲಡಾಖ್ ಹಾಗೂ ಟಿಬೆಟಿಯನ್ ಸಮುದಾಯದವರು ______ ದ ಹಿನ್ನೆಲೆಯಲ್ಲಿ ಆಚರಿಸುತ್ತಾರೆ.
5. ಸಾಪೇಕ್ಷತಾ ಸಿದ್ಧಾಂತದೊಂದಿಗೆ ______ ಅವರು ಭೌತಶಾಸ್ತ್ರದ ಚಿತ್ರಣವನ್ನು ಬದಲಾಯಿಸಿ ದರಲ್ಲದೆ, ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತವನ್ನು ವಿನ್ಯಾಸ ಗೊಳಿಸಲು ಅವರ ಈ ಸಿದ್ಧಾಂತವು ಪ್ರಮುಖವಾಗಿ ಕೊಡುಗೆ ನೀಡಿತು.
6. ಪ್ರಧಾನ ಮಂತ್ರಿ ಜನ ಧನ ಯೋಜನೆ (PMJDY) ಅಡಿ, 2023ರ ಆಗಸ್ಟ್ 9ರವರೆಗೆ ಮಧ್ಯಪ್ರದೇಶದಲ್ಲಿ ______ ಜನಧನ ಖಾತೆಗಳನ್ನು ಒದಗಿಸಲಾಗಿತ್ತು.
7. ಮಹಾರಾಷ್ಟ್ರ ಸರ್ಕಾರವು ಸ್ಥಾಪಿಸಿರುವ ‘ಉದ್ಯೋಗ ರತ್ನ’ ಪ್ರಶಸ್ತಿ (2023) ಅನ್ನು ಯಾರಿಗೆ ಪ್ರದಾನ ಮಾಡಲಾಗಿದೆ?
8. ಈ ಕೆಳಗಿನವುಗಳಲ್ಲಿ ಯಾವ ನೆರೆಯ ದೇಶಗಳು ಈ ಮೊದಲು ಭಾರತದ ಭಾಗಗಳಾಗಿದ್ದವು?
9. ಯಾವ ರಾಜ್ಯದ ಮುಖ್ಯಮಂತ್ರಿ ಅವರು, ತಮ್ಮ ರಾಜ್ಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ‘ಕಲೈಂಜರ್ ಮಗಳಿರ್ ಉರಿಮೈ ತೊಗೈ ತಿಟ್ಟಂ’ (ಕಲೈಂಜರ್ ಹೆಣ್ಣುಮಕ್ಕಳ ಹಕ್ಕು ಭತ್ಯೆ ಯೋಜನೆ) ಎಂಬ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ?
10. ಯಾವ ಕ್ರೀಡೆಯಲ್ಲಿ ಪಾಲ್ಗೊಳ್ಳುವವರನ್ನು ಪ್ಯೂಜಿಲಿಸ್ಟ್ (Pugilist) ಎಂದು ಕರೆಯಲಾಗುತ್ತದೆ?
11. ಭಾರತೀಯ ಸಂವಿಧಾನದಲ್ಲಿರುವ ಕೆಳಗಿನ ಯಾವ ಅನುಚ್ಛೇದವು ಭಾರತೀಯ ಹಣಕಾಸು ಆಯೋಗಕ್ಕೆ ಸಂಬಂಧಿಸಿದೆ?
12. ಭಾರತದ ಕ್ರೀಡಾಪಟುವಾದ ಅನಹತ ಉಂಗರ್ಸಿಂಗ್ ಅವರು ಯಾವ ಕ್ರೀಡೆಯನ್ನು ಆಡುತ್ತಾರೆ?
13. ದುಲೀಪ್ ಟ್ರೋಫಿಯು ______ ಗೆ ಸಂಬಂಧಿಸಿದೆ.
14. 2011ರ ಜನಗಣತಿಯ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಅತ್ಯಂತ ಕಡಿಮೆ ಮಹಿಳಾ ಸಾಕ್ಷರತಾ ದರವನ್ನು ಹೊಂದಿದೆ?
15. ಹರ್ಷವರ್ಧನನ ಸಾಮ್ರಾಜ್ಯವನ್ನು ಎಷ್ಟು ವಿಶಿಷ್ಟ ರೀತಿಯ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು?
16. ಈ ಕೆಳಗಿನವುಗಳ ಪೈಕಿ ಯಾವುದು, ಭಾರತದಲ್ಲಿ ನೃತ್ಯಕ್ಕಾಗಿ ಇರುವ ಅತ್ಯಂತ ದೊಡ್ಡ ಪ್ರಶಸ್ತಿಯಾಗಿದೆ?
17. ಭಾರತದ ರೈತರ ಮೇಲೆ ಹಸಿರು ಕ್ರಾಂತಿಯಿಂದಾದ ಪರಿಣಾಮದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಓದಿ.
ಎ) ಹಸಿರು ಕ್ರಾಂತಿಯ ಆವಿಷ್ಕಾರವು ರೈತರು ತಾಂತ್ರಿಕತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿತು.
ಬಿ) ಕೃಷಿಯ ಉತ್ಪಾದನೆಯನ್ನು ಸುಧಾರಿಸಲು ರೈತರು ತಮ್ಮ ಹೆಚ್ಚಿನ ಆದಾಯವನ್ನು ಮತ್ತೇ ಕೃಷಿಗೇ ಸುರಿದರು.
ತಪ್ಪಾದ ಹೇಳಿಕೆಯನ್ನು / ಗಳನ್ನು ಗುರುತಿಸಿ.
18. ಹಸಿರು ಕ್ರಾಂತಿಯನ್ನು______ಎಂದೂ ಕರೆಯಬಹುದಾಗಿದೆ.
19. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ______ ವಾದನಕ್ಕೆ ಹೆಸರುವಾಸಿಯಾಗಿದ್ದಾರೆ.
20. ಲಾವಣಿಯು ಈ ಕೆಳಗಿನವುಗಳಲ್ಲಿ ಯಾವ ರಾಜ್ಯಕ್ಕೆ ಸೇರಿದ ನೃತ್ಯ ಪ್ರಕಾರವಾಗಿದೆ?