Karnatakaexamshub


KPSC KEA Practice MCQ

Practice MCQ in Kannada – 10

By Karnataka  |  11 Sep, 2026  |  Comments Off on Practice MCQ in Kannada – 10


1. ಸೇವಾ ತೆರಿಗೆ, ಅಂದರೆ ದೂರವಾಣಿ ಸೇವೆಗಳು, ಶೇರು ದಲ್ಲಾಳಿಗಳು, ಹೆಲ್ತ್ ಕ್ಲಬ್‌ಗಳು, ಬ್ಯೂಟಿ ಪಾರ್ಲರ್‌ಗಳು, ಡ್ರೈ ಕ್ಲೀನಿಂಗ್ ಸೇವೆಗಳು ಮುಂತಾದ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಯನ್ನು ______ ರಲ್ಲಿ ಜಾರಿಗೆ ತರಲಾಯಿತು.

  • (1) 1993–94
  • (2) 1991–92
  • (3) 1992–93
  • (4) 1994–95

2. ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ಅನುಚ್ಛೇದವು ಯಾವುದೇ ಅಪರಾಧದ ಆರೋಪ ಹೊತ್ತಿರುವ ಯಾವುದೇ ವ್ಯಕ್ತಿಯನ್ನು ತನ್ನ ವಿರುದ್ಧ ಸಾಕ್ಷಿಯಾಗುವಂತೆ ಒತ್ತಾಯಿಸಲಾಗುವುದಿಲ್ಲ ಎಂಬುವುದನ್ನು ಉಲ್ಲೇಖಿಸುತ್ತದೆ?

  • (1) ಅನುಚ್ಛೇದ 20
  • (2) ಅನುಚ್ಛೇದ 16
  • (3) ಅನುಚ್ಛೇದ 18
  • (4) ಅನುಚ್ಛೇದ 14

3. ಸರೋಜಿನಿ ನಾಯ್ಡು ಅವರು ______ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು?

  • (1) 1931
  • (2) 1921
  • (3) 1925
  • (4) 1935

4. “ಲೋಸರ್” ಉತ್ಸವವನ್ನು ಲಡಾಖ್ ಹಾಗೂ ಟಿಬೆಟಿಯನ್ ಸಮುದಾಯದವರು ______ ದ ಹಿನ್ನೆಲೆಯಲ್ಲಿ ಆಚರಿಸುತ್ತಾರೆ.

  • (1) ಹೊಸ ವರ್ಷದ ಹಬ್ಬ
  • (2) ಮಾನ್ಸೂನ್ ಉತ್ಸವ
  • (3) ಚಳಿಗಾಲದ ಆಯನ ಸಂಕ್ರಾಂತಿ ಉತ್ಸವ
  • (4) ಸುಗ್ಗಿ ಹಬ್ಬ

5. ಸಾಪೇಕ್ಷತಾ ಸಿದ್ಧಾಂತದೊಂದಿಗೆ ______ ಅವರು ಭೌತಶಾಸ್ತ್ರದ ಚಿತ್ರಣವನ್ನು ಬದಲಾಯಿಸಿ ದರಲ್ಲದೆ, ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತವನ್ನು ವಿನ್ಯಾಸ ಗೊಳಿಸಲು ಅವರ ಈ ಸಿದ್ಧಾಂತವು ಪ್ರಮುಖವಾಗಿ ಕೊಡುಗೆ ನೀಡಿತು.

  • (1) ಗೆಲಿಲಿಯೋ ಗೆಲಿಲಿ
  • (2) ಪಾಲ್ ಜಿ. ಹೆವಿಟ್
  • (3) ಆಲ್ಬರ್ಟ್ ಐನ್ ಸ್ಟೈನ್
  • (4) ಐಸಾಕ್ ನ್ಯೂಟನ್

6. ಪ್ರಧಾನ ಮಂತ್ರಿ ಜನ ಧನ ಯೋಜನೆ (PMJDY) ಅಡಿ, 2023ರ ಆಗಸ್ಟ್ 9ರವರೆಗೆ ಮಧ್ಯಪ್ರದೇಶದಲ್ಲಿ ______ ಜನಧನ ಖಾತೆಗಳನ್ನು ಒದಗಿಸಲಾಗಿತ್ತು.

  • (1) 50 ಶೇಕಡಾ
  • (2) 75 ಶೇಕಡಾ
  • (3) 25 ಶೇಕಡಾ
  • (4) 100 ಶೇಕಡಾ

7. ಮಹಾರಾಷ್ಟ್ರ ಸರ್ಕಾರವು ಸ್ಥಾಪಿಸಿರುವ ‘ಉದ್ಯೋಗ ರತ್ನ’ ಪ್ರಶಸ್ತಿ (2023) ಅನ್ನು ಯಾರಿಗೆ ಪ್ರದಾನ ಮಾಡಲಾಗಿದೆ?

  • (1) ಆದಿ ಗೋದ್ರೇಜ್
  • (2) ಆನಂದ್ ಮಹೀಂದ್ರಾ
  • (3) ರತನ್ ಟಾಟಾ
  • (4) ಲಕ್ಷ್ಮಣರಾವ್ ಕಿರ್ಲೋಸ್ಕರ್

8. ಈ ಕೆಳಗಿನವುಗಳಲ್ಲಿ ಯಾವ ನೆರೆಯ ದೇಶಗಳು ಈ ಮೊದಲು ಭಾರತದ ಭಾಗಗಳಾಗಿದ್ದವು?

  • (1) ಇಂಡೋನೇಶ್ಯಾ ಮತ್ತು ಭೂತಾನ್
  • (2) ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ
  • (3) ನೇಪಾಳ ಮತ್ತು ಚೀನಾ
  • (4) ಶ್ರೀಲಂಕಾ ಮತ್ತು ಮಾಲ್ಡೀವ್ಸ್

9. ಯಾವ ರಾಜ್ಯದ ಮುಖ್ಯಮಂತ್ರಿ ಅವರು, ತಮ್ಮ ರಾಜ್ಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ‘ಕಲೈಂಜರ್ ಮಗಳಿರ್ ಉರಿಮೈ ತೊಗೈ ತಿಟ್ಟಂ’ (ಕಲೈಂಜರ್ ಹೆಣ್ಣುಮಕ್ಕಳ ಹಕ್ಕು ಭತ್ಯೆ ಯೋಜನೆ) ಎಂಬ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ?

  • (1) ಮಧ್ಯಪ್ರದೇಶ
  • (2) ಕೇರಳ
  • (3) ಪಶ್ಚಿಮ ಬಂಗಾಳ
  • (4) ತಮಿಳುನಾಡು

10. ಯಾವ ಕ್ರೀಡೆಯಲ್ಲಿ ಪಾಲ್ಗೊಳ್ಳುವವರನ್ನು ಪ್ಯೂಜಿಲಿಸ್ಟ್ (Pugilist) ಎಂದು ಕರೆಯಲಾಗುತ್ತದೆ?

  • (1) ಟೆನಿಸ್
  • (2) ಬಾಕ್ಸಿಂಗ್
  • (3) ಹಾಕಿ
  • (4) ಬ್ಯಾಡ್ಮಿಂಟನ್

11. ಭಾರತೀಯ ಸಂವಿಧಾನದಲ್ಲಿರುವ ಕೆಳಗಿನ ಯಾವ ಅನುಚ್ಛೇದವು ಭಾರತೀಯ ಹಣಕಾಸು ಆಯೋಗಕ್ಕೆ ಸಂಬಂಧಿಸಿದೆ?

  • (1) ಅನುಚ್ಛೇದ 270
  • (2) ಅನುಚ್ಛೇದ 290
  • (3) ಅನುಚ್ಛೇದ 260
  • (4) ಅನುಚ್ಛೇದ 280

12. ಭಾರತದ ಕ್ರೀಡಾಪಟುವಾದ ಅನಹತ ಉಂಗರ್ಸಿಂಗ್ ಅವರು ಯಾವ ಕ್ರೀಡೆಯನ್ನು ಆಡುತ್ತಾರೆ?

  • (1) ಸ್ಕ್ವಾಶ್
  • (2) ಈಜು
  • (3) ಟೇಬಲ್ ಟೆನಿಸ್
  • (4) ಬ್ಯಾಡ್ಮಿಂಟನ್

13. ದುಲೀಪ್ ಟ್ರೋಫಿಯು ______ ಗೆ ಸಂಬಂಧಿಸಿದೆ.

  • (1) ಬ್ಯಾಸ್ಕೆಟ್ ಬಾಲ್
  • (2) ಫುಟ್ ಬಾಲ್
  • (3) ಕ್ರಿಕೆಟ್
  • (4) ಬ್ಯಾಡ್ಮಿಂಟನ್

14. 2011ರ ಜನಗಣತಿಯ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಅತ್ಯಂತ ಕಡಿಮೆ ಮಹಿಳಾ ಸಾಕ್ಷರತಾ ದರವನ್ನು ಹೊಂದಿದೆ?

  • (1) ಕೇರಳ
  • (2) ಉತ್ತರ ಪ್ರದೇಶ
  • (3) ರಾಜಸ್ಥಾನ
  • (4) ಜಾರ್ಖಂಡ್

15. ಹರ್ಷವರ್ಧನನ ಸಾಮ್ರಾಜ್ಯವನ್ನು ಎಷ್ಟು ವಿಶಿಷ್ಟ ರೀತಿಯ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು?

  • (1) ಮೂರು
  • (2) ಐದು
  • (3) ಎರಡು
  • (4) ನಾಲ್ಕು

16. ಈ ಕೆಳಗಿನವುಗಳ ಪೈಕಿ ಯಾವುದು, ಭಾರತದಲ್ಲಿ ನೃತ್ಯಕ್ಕಾಗಿ ಇರುವ ಅತ್ಯಂತ ದೊಡ್ಡ ಪ್ರಶಸ್ತಿಯಾಗಿದೆ?

  • (1) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • (2) ಕಾಳಿದಾಸ ಸನ್ಮಾನ್
  • (3) ಗುರು ದೇವಪ್ರಸಾದ್ ಪ್ರಶಸ್ತಿ
  • (4) ನೃತ್ಯ ಶಿರೋಮಣಿ

17. ಭಾರತದ ರೈತರ ಮೇಲೆ ಹಸಿರು ಕ್ರಾಂತಿಯಿಂದಾದ ಪರಿಣಾಮದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಓದಿ.
ಎ) ಹಸಿರು ಕ್ರಾಂತಿಯ ಆವಿಷ್ಕಾರವು ರೈತರು ತಾಂತ್ರಿಕತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿತು.
ಬಿ) ಕೃಷಿಯ ಉತ್ಪಾದನೆಯನ್ನು ಸುಧಾರಿಸಲು ರೈತರು ತಮ್ಮ ಹೆಚ್ಚಿನ ಆದಾಯವನ್ನು ಮತ್ತೇ ಕೃಷಿಗೇ ಸುರಿದರು.
ತಪ್ಪಾದ ಹೇಳಿಕೆಯನ್ನು / ಗಳನ್ನು ಗುರುತಿಸಿ.

  • (1) ಎ ಅಥವಾ ಬಿ ಎರಡೂ ತಪ್ಪಲ್ಲ
  • (2) ಎ ಮಾತ್ರ ತಪ್ಪು
  • (3) ಬಿ ಮಾತ್ರ ತಪ್ಪು
  • (4) ಎ ಮತ್ತು ಬಿ ಎರಡೂ ತಪ್ಪು

18. ಹಸಿರು ಕ್ರಾಂತಿಯನ್ನು______ಎಂದೂ ಕರೆಯಬಹುದಾಗಿದೆ.

  • (1) ಕೃಷಿ ಕ್ರಾಂತಿ
  • (2) ವಿತ್ತ ಕ್ರಾಂತಿ
  • (3) ಶ್ವೇತ ಕ್ರಾಂತಿ
  • (4) ನೀಲಿ ಕ್ರಾಂತಿ

19. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ______ ವಾದನಕ್ಕೆ ಹೆಸರುವಾಸಿಯಾಗಿದ್ದಾರೆ.

  • (1) ಶೆಹನಾಯಿ
  • (2) ಕೊಳಲು
  • (3) ತಬಲಾ
  • (4) ಹಾರ್ಮೋನಿಯಂ

20. ಲಾವಣಿಯು ಈ ಕೆಳಗಿನವುಗಳಲ್ಲಿ ಯಾವ ರಾಜ್ಯಕ್ಕೆ ಸೇರಿದ ನೃತ್ಯ ಪ್ರಕಾರವಾಗಿದೆ?

  • (1) ಮಹಾರಾಷ್ಟ್ರ
  • (2) ಮಧ್ಯಪ್ರದೇಶ
  • (3) ತಮಿಳುನಾಡು
  • (4) ಅಸ್ಸಾಂ
manojns1997

error: Content is protected !!