- ನಾಲ್ಕು ವಿಧವಾದ ನಾಮಪ್ರಕೃತಿಗಳು ಇವು – ಸಹಜನಾಮಪ್ರಕೃತಿಗಳು, ಕೃದಂತಗಳು, ತದ್ಧಿತಾಂತಗಳು ಮತ್ತು ಸಮಾಸಗಳು.
- ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿದರೆ ಅದು – ಕೃದಂತಗಳು.
- ಕೃದಂತಗಳಿಗಿರುವ ಮತ್ತೊಂದು ಹೆಸರು – ಕೃನ್ನಾಮಗಳು.
- ಕೃದಂತಗಳಲ್ಲಿರುವ ಮೂರು ವಿಧಗಳು – ಕೃದಂತನಾಮ, ಕೃದಂತ ಭಾವನಾಮ ಮತ್ತು ಕೃದಂತಾವ್ಯಯ.
- ಕೃದಂತನಾಮಗಳಿಗೆ ಉದಾಹರಣೆಗಳೆಂದರೆ – ಮಾಡಿದ, ಬರೆಯುವ, ತಿನ್ನುವ, ನಡೆಯುವ, ಹೋಗದ ಇತ್ಯಾದಿ.
- ಕೃದಂತ ಭಾವನಾಮಗಳಿಗೆ ಉದಾಹರಣೆಗಳೆಂದರೆ – ಮಾಟ, ತಿನ್ನುವಿಕೆ, ನಡೆತ, ಹೋಗುವಿಕೆ ಇತ್ಯಾದಿ.
- ಕೃದಂತಾವ್ಯಯಗಳಿಗೆ ಉದಾಹರಣೆಗಳೆಂದರೆ – ಮಾಡಿ, ತಿಂದು, ನಡೆಯುತ್ತಾ, ಹೋಗಲು ಇತ್ಯಾದಿ.
- ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದರೆ ಅದು – ಕೃದಂತಭಾವನಾಮ ಅಥವಾ ಭಾವಕೃದಂತ.
- ಕೃದಂತಾವ್ಯಯಗಳು ಎಂದರೆ – ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂತಹ ಶಬ್ದ ರೂಪಗಳು.
- ತದ್ಧಿತ ಎಂಬ ಪ್ರತ್ಯಯವನ್ನು ಅಂತ್ಯದಲ್ಲಿ ಉಳ್ಳದ್ದೇ – ತದ್ಧಿತಾಂತ.
- ‘ಮೋಸಗಾರ’ ಎಂಬ ಪದದಲ್ಲಿರುವ ತದ್ಧಿತ ಪ್ರತ್ಯಯ -ಗಾರ.
- ನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗೆ, ವಂತ, ವಳ, ಇಕ, ಆಳಿ ಇತ್ಯಾದಿ ಪ್ರತ್ಯಯಗಳು ಸೇರಿದಾಗ ಅದು – ತದ್ಧಿತಾಂತ.
- ತದ್ಧಿತಾಂತಗಳಲ್ಲಿರುವ ಮೂರು ವಿಧಗಳು ಇವು – ತದ್ಧಿತಾಂತ ನಾಮ, ತದ್ಧಿತಾಂತ ಭಾವನಾಮ ಮತ್ತು ತದ್ಧಿತಾಂತಾವ್ಯಯ.
- ತದ್ಧಿತಾಂತ ನಾಮಗಳಿಗೆ ಉದಾಹರಣೆಗಳೆಂದರೆ – ಬಳಗಾರ, ಓಲೆಕಾರ, ಕನ್ನಡಿಗ, ಹಣವಂತ, ಮಡಿವಾಳ, ಹೂವಾಡಿಗ, ಬಿಳಿಕ, ವಾಚಾಳಿ, ಕುಂಬಾರ ಇತ್ಯಾದಿ.
- ತದ್ಧಿತಾಂತ ಭಾವನಾಮ ಉದಾಹರಣೆಗಳೆಂದರೆ – ಬಡತನ, ಜಾಣತನ, ಬ್ರಾಹ್ಮಣಿಕೆ, ಕಿವುಡು, ಬಿಳುಪು, ಜಾಣ್ಮೆ ಇತ್ಯಾದಿ.
- ನಾಮಪದಗಳ ಮುಂದೆ ಅಂತೆ, ಪೂಲ್, ವೋಲು, ತನಕ, ವರೆಗೆ, ಮಟ್ಟಿಗೆ, ಒನ್ನರ, ಇಂತ, ಒಸುಗ, ಆಗಿ ಮುಂತಾದ ಪ್ರತ್ಯಯಗಳು ಸೇರಿದರೆ ಅದು – ತದ್ಧಿತಾಂತಾವ್ಯಯ.
- ತದ್ಧಿತಾಂತಾವ್ಯಯಗಳಿಗೆ ಉದಾಹರಣೆಗಳೆಂದರೆ – ರಾಮನಂತೆ, ಚಂದ್ರನವೊಲು, ಮನೆಯತನಕ, ಊರವರೆಗೆ, ಅವನಮಟ್ಟಿಗೆ, ನಿನಗೋಸ್ಕರ, ನನ್ನ ಸಲುವಾಗಿ, ಇವನಿಗಿಂತ, ನಿನಗಾಗಿ, ರಾಮನಿಗೋಸುಗ ಇತ್ಯಾದಿ.
ಕೃದಂತ ಮತ್ತು ತದ್ಧಿತಾಂತ ಪ್ರಕರಣ
By Karnataka | 24 Jun, 2026 | Leave a comment