- ಅವ್ಯಯ ಎಂದರೆ – ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ, ಏಕರೂಪವಾಗಿರುವ ಶಬ್ದಗಳು.
- ಅವ್ಯಯಗಳಿಗೆ ಉದಾಹರಣೆಗಳೆಂದರೆ – ಚೆನ್ನಾಗಿ, ಸುಮ್ಮನೆ, ನೆಟ್ಟಗೆ, ಸುತ್ತಲೂ, ಮೆಲ್ಲಗೆ, ತರುವಾಯ ಇತ್ಯಾದಿ.
- ಸಾಮಾನ್ಯಾವ್ಯಯಗಳು ಎಂದರೆ – ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂಥ ಅವ್ಯಯಗಳು.
- ಸಾಮಾನ್ಯಾವ್ಯಯಗಳಿಗೆ ಉದಾಹರಣೆಗಳೆಂದರೆ – ಚೆನ್ನಾಗಿ, ಕೂಡಲೆ, ಬೇಗ, ಬೇರೆ, ಬಳಿಕ, ಸೊಗಸಾಗಿ ಇತ್ಯಾದಿ.
- ಅನುಕರಣಾವ್ಯಯಗಳು ಎಂದರೆ – ಅರ್ಥವಿಲ್ಲದ ಧ್ವನಿವಿಶೇಷಗಳನ್ನು ತಾನು ಕೇಳಿದಂತೆ ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳು.
- ಅನುಕರಣಾವ್ಯಯಗಳಿಗೆ ಉದಾಹರಣೆಗಳೆಂದರೆ – ಡಬಡಬ, ಪಟಪಟ, ಚಟಚಟ, ಕರಕರ, ಸುಯ್ಯನೆ, ರೊಯ್ಯನೆ, ಜುಳುಜುಳು ಗಡಗಡ ಇತ್ಯಾದಿ.
- ಭಾವಸೂಚಕಾವ್ಯಯಗಳು ಎಂದರೆ – ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಬಳಸುವ ಕೆಲವು ಅರ್ಥವಿಲ್ಲದ ಶಬ್ದಗಳು.
- ಭಾವಸೂಚಕಾವ್ಯಯಗಳಿಗೆ ಇರುವ ಮತ್ತೊಂದು ಹೆಸರು – ನಿಪಾತಾವ್ಯಯಗಳು.
- ಭಾವಸೂಚಕಾವ್ಯಯಗಳಿಗೆ ಉದಾಹರಣೆಗಳೆಂದರೆ – ಎಲಾ, ಅಯ್ಯೋ, ಅಬ್ಬಾ, ಧೂ, ಭೇ, ಓಹೋ, ಭಲೇ ಇತ್ಯಾದಿ.
- ಕ್ರಿಯಾರ್ಥಕಾವ್ಯಯಗಳು ಎಂದರೆ – ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಕೆಲವು ಅವ್ಯಯಗಳು.
- ಕ್ರಿಯಾರ್ಥಕಾವ್ಯಯಗಳಿಗೆ ಉದಾಹರಣೆಗಳೆಂದರೆ – ಉಂಟು, ಬೇಕು, ಬೇಡ, ಸಾಕು, ಇಲ್ಲ ಹೌದು ಇತ್ಯಾದಿ.
- ಸಂಬಂಧಾರ್ಥಕಾವ್ಯಯಗಳು ಎಂದರೆ – ಎರಡು ಪದಗಳನ್ನಾಗಲಿ ಅಥವಾ ಹಲವು ಪದಸಮುಚ್ಚಯಗಳನ್ನಾಗಲಿ, ವಾಕ್ಯಗಳನ್ನಾಗಲಿ, ಜೋಡಿಸುವಂತಹ ಮತ್ತು ಸಂಬಂಧಗೊಳಿಸುವಂತಹ ಶಬ್ದಗಳು.
- ಸಂಬಂಧಾರ್ಥಕಾವ್ಯಯಗಳಿಗೆ ಉದಾಹರಣೆಗಳು – ಉ, ಉಂ, ಅಥವಾ, ಆದ್ದರಿಂದ, ಅಲ್ಲದೆ, ಮತ್ತು ಇತ್ಯಾದಿ.
- ಅವಧಾರಣಾರ್ಥಕಾವ್ಯಯ ಎಂದರೆ – ಒಂದು ನಿಶ್ಚಯಾರ್ಥದಲ್ಲಿ ಬರುವ ಅವ್ಯಯ.
- ಅವಧಾರಣಾರ್ಥಕಾವ್ಯಯಗಳಿಗೆ ಉದಾಹರಣೆಗಳು – ಅದೇ, ಅವನೇ, ನಾನೇ, ಈ ರೀತಿಯ ಪದಗಳಲ್ಲಿರುವ ಏ ಕಾರ.
ಅವ್ಯಯ ಪ್ರಕರಣ
By Karnataka | 24 Jun, 2026 | Leave a comment