- ಅಲಂಕಾರಗಳು ಎಂದರೆ – ಅರ್ಥದ ಚಮತ್ಕಾರದಿಂದಲೂ, ಶಬ್ದಗಳ ಚಮತ್ಕಾರದಿಂದಲೂ ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ನುಡಿಗಳು.
- ಅರ್ಥಾಲಂಕಾರ ಎಂದರೆ – ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸುವ ನುಡಿಗಳು.
- ಶಬ್ದಾಲಂಕಾರ ಎಂದರೆ – ಶಬ್ದಗಳ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸುವ ನುಡಿಗಳು.
- ಅಲಂಕಾರ ಕುರಿತು ಗ್ರಂಥಗಳನ್ನು ಬರೆದಿದ್ದವರನ್ನು ಹೀಗೆಂದು ಕರೆಯುವರು – ಲಾಕ್ಷಣಿಕರು.
- ‘ಕಾವ್ಯಾವಲೋಕನ’ ಎಂಬ ಲಕ್ಷಣಗ್ರಂಥವನ್ನು ಬರೆದವನು – ಎರಡನೇ ನಾಗವರ್ಮ.
- ‘ಅಪ್ರತಿಮವೀರ ಚರಿತ್ರೆ’ ಎಂಬ ಲಕ್ಷಣಗ್ರಂಥವನ್ನು ಬರೆದವನು – ತಿರುಮಲಾರ್ಯ.
- ತಿರುಮಲಾರ್ಯನು ಈ ಅರಸನ ಆಸ್ಥಾನ ಪಂಡಿತನಾಗಿದ್ದನು – ಮೈಸೂರಿನ ಚಿಕ್ಕದೇವರಾಜ ಒಡೆಯರ್.
- ‘ಕನ್ನಡ ಕುವಲಯಾನಂದ’ ಎಂಬ ಲಕ್ಷಣಗ್ರಂಥವನ್ನು ಬರೆದವನು – ಚಾಯಪ್ಪದೇಸಾಯಿ.
- ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ – ಉಪಮಾಲಂಕಾರ.
- ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕ ಈ ನಾಲ್ಕೂ ಬಂದಿದ್ದರೆ ಅದು – ಪೂರ್ಣೋಪಮಾಲಂಕಾರ.
- ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕಗಳಲ್ಲಿ ಒಂದಾದರೂ, ಕೆಲವಾದರೂ ಸ್ಪಷ್ಟವಾಗಿ ಹೇಳಿರದಿದ್ದರೆ ಅದು – ಲುಪ್ತೋಪಮಾಲಂಕಾರ.
- ವರ್ಣಿಸುವ ವಸ್ತು ಇನ್ನೊಂದರಂತೆ ಇದೆ ಎಂದು ಹೇಳದೆ, ಎರಡೂ ವಸ್ತುಗಳು (ಉಪಮೇಯ ಮತ್ತು ಉಪಮಾನ) ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ – ಅಭೇದರೂಪಕಾಲಂಕಾರ.
- ಒಂದಾನೊಂದು ಪದಾರ್ಥವನ್ನೋ, ಅಥವಾ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಸಂಭಾವಿಸಿ (ಕಲ್ಪಿಸಿ) ವರ್ಣಿಸುವುದೇ – ಉತ್ಪ್ರೇಕ್ಷಾಲಂಕಾರ.
- ಎರಡು ಬೇರೆ ಬೇರೆ ವಾಕ್ಯಗಳು ಅರ್ಥಸಾಮ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬವಾದಂತೆ ತೋರುತ್ತಿದ್ದರೆ ಅದು – ದೃಷ್ಟಾಂತಾಲಂಕಾರ.
- ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ – ಅರ್ಥಾಂತರನ್ಯಾಸಾಲಂಕಾರ.
- ಬೇರೆ ಬೇರೆ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವರ್ಣ್ಯವಾದ ವಿಷಯಗಳ ಪರವಾಗಿ ಬೇರೆ ಬೇರೆ ಅರ್ಥ ಕೊಡುವುದೇ – ಶ್ಲೇಷಾಲಂಕಾರ.
- ಶಬ್ದಾಲಂಕಾರದಲ್ಲಿರುವ ಎರಡು ವಿಧಗಳು – ಅನುಪ್ರಾಸ ಮತ್ತು ಯಮಕ.
- ಅನುಪ್ರಾಸದಲ್ಲಿರುವ ಎರಡು ವಿಧಗಳು – ವೃತ್ಯನುಪ್ರಾಸ ಮತ್ತು ಛೇಕಾನುಪ್ರಾಸ.
- ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃ ಪುನಃ ಹೇಳಲ್ಪಟ್ಟಿದ್ದರೆ ಅದು – ವೃತ್ಯನುಪ್ರಾಸ.
- ಎರಡೇಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃ ಪುನಃ ಪದ್ಯದಲ್ಲಿ ಬಂದಿದ್ದರೆ ಅದು – ಛೇಕಾನುಪ್ರಾಸ.
- ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಪದಭಾಗವೋ ಒಂದು ಪದ್ಯದ ಆದಿ, ಮಧ್ಯ, ಅಂತ್ಯ ಸ್ಥಾನಗಳಲ್ಲಿ ಎಲ್ಲಿಯಾದರೂ ನಿಯತವಾಗಿ ಬಂದಿದ್ದರೆ ಅದು – ಯಮಕಾಲಂಕಾರ.
ಅಲಂಕಾರಗಳು
By Karnataka | 24 Jun, 2026 | Leave a comment