ನಾವು ಒಂದು ಕಣ್ಣಿಗಿಂತ ಎರಡು ಕಣ್ಣುಗಳನ್ನು ಹೊಂದಿರುವುದರಿಂದ ಹಲವಾರು ಅನುಕೂಲಗಳಿವೆ. ಇದು ವಿಶಾಲಕ್ಷೇತ್ರದ ವೀಕ್ಷಣೆಗೆ ಅವಕಾಶ ನೀಡುತ್ತದೆ. ಪ್ರತಿ ಮಾನವನಿಗೆ ಒಂದು ಕಣ್ಣಿನ ನೇರ ದೃಷ್ಟಿವ್ಯಾಪ್ತಿ 150° ಎರಡೂ ಕಣ್ಣುಗಳ ನೇರ ದೃಷ್ಟಿವ್ಯಾಪ್ತಿ 180° ಮಸುಕಾದ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವು ಎರಡು ಕಣ್ಣುಗಳಿಂದ ವರ್ಧಿಸುತ್ತದೆ. ಕೆಲವು ಪ್ರಾಣಿಗಳು ಸಾಮಾನ್ಯವಾಗಿ ಬೇಟೆಗಾರ ಪ್ರಾಣಿಗಳು, ತಮ್ಮ ಎರಡು ಕಣ್ಣುಗಳನ್ನು ತಲೆಯ ಎರಡು ವಿರುದ್ಧ ಪಾರ್ಶ್ವದಲ್ಲಿ ಹೊಂದಿರುತ್ತವೆ. ಇದು ವಸ್ತುವಿನ ವಿಶಾಲವ್ಯಾಪ್ತಿಯ ದೃಷ್ಟಿಯನ್ನು ಕೊಡುತ್ತದೆ. ಆದರೆ ನಮ್ಮೆರಡೂ ಕಣ್ಣುಗಳು ಹಣೆಯ ಮುಂಭಾಗದಲ್ಲಿ ಸ್ಥಾನ ಹೊಂದಿವೆ. ಇದು ನಮ್ಮ ದೃಷ್ಟಿಯ ಪರಿಧಿಯನ್ನು ಕಡಿಮೆ ಮಾಡುತ್ತದೆ. ಇದನ್ನು ಸ್ಟೀರಿಯೋಪ್ಸಿಸ್ (stereopsis) ಎನ್ನುತ್ತೇವೆ. ಒಂದು ಕಣ್ಣನ್ನು ಮುಚ್ಚಿ ಪ್ರಪಂಚವು ಚಪ್ಪಟೆಯಂತೆ ಎರಡು ಆಯಾಮದಲ್ಲಿ ಕಾಣುತ್ತದೆ. ಎರಡೂ ಕಣ್ಣುಗಳನ್ನು ತೆರೆದಾಗ ವಿಶ್ವದ ಮೂರನೇ ಆಯಾಮ ತೆರೆದುಕೊಳ್ಳುತ್ತದೆ. ಏಕೆಂದರೆ, ನಮ್ಮ ಕಣ್ಣುಗಳು ಕೆಲವು ಸೆಂಟಿಮೀಟರ್ಗಳ ಅಂತರದಲ್ಲಿವೆ. ಪ್ರತಿ ಕಣ್ಣು ಮತ್ತೊಂದಕ್ಕಿಂತ ಸ್ವಲ್ಪ ವಿಭಿನ್ನವಾದ ಪ್ರತಿಬಿಂಬವನ್ನು ನೋಡುತ್ತದೆ. ನಮ್ಮ ಮಿದುಳು ಎರಡೂ ಪ್ರತಿಬಿಂಬಗಳನ್ನು ಒಗ್ಗೂಡಿಸಿ ಏಕ ಪ್ರತಿಬಿಂಬವಾಗಿಸುತ್ತದೆ ಮತ್ತು ವಸ್ತು ನಮ್ಮಿಂದ ಎಷ್ಟು ಸಮೀಪ ಅಥವಾ ದೂರದಲ್ಲಿದೆ ಎಂಬ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.
ದೃಷ್ಟಿಗೆ ಎರಡು ಕಣ್ಣುಗಳು ಏಕೆಿರಬೇಕು, ಕೇವಲ ಒಂದು ಸಾಲದೇ ?
By Karnataka | 27 Aug, 2026 | Comments Off on ದೃಷ್ಟಿಗೆ ಎರಡು ಕಣ್ಣುಗಳು ಏಕೆಿರಬೇಕು, ಕೇವಲ ಒಂದು ಸಾಲದೇ ?