| ಹಾರ್ಮೋನ್ ಹೆಸರು | ಲಘು ರೂಪ | ಗುರಿ ಅಂಗಗಳು | ಕಾರ್ಯಗಳು |
| ಬೆಳವಣಿಗೆ ಹಾರ್ಮೋನ್ | STH | – | ದೇಹದ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. |
| ಥೈರಾಯ್ಡ್ ನ್ನು ಚೋದಿಸುವ ಹಾರ್ಮೋನ್ | TSH | ಥೈರಾಯ್ಡ್ ಗ್ರಂಥಿ | ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಗಳನ್ನು ಸ್ರವಿಸಲು ಪ್ರಚೋದಿಸುತ್ತದೆ |
| ಅಡ್ರಿನೋ ಕಾರ್ಟಿಕೊ ಟ್ರೋಫಿಕ್ ಹಾರ್ಮೋನ್ | ACTH | ಅಡ್ರಿನಲ್ ಗ್ರಂಥಿ | ಅಡ್ರಿನಲ್ ಗ್ರಂಥಿಗಳ ಹಾರ್ಮೋನ್ ಸ್ರವಿಕೆಯನ್ನು ನಿಯಂತ್ರಿಸುತ್ತದೆ. |
| ಮೆಲನೋಸೈಟ್ ಚೋದಿಸುವ ಹಾರ್ಮೋನ್ | MSH | ಚರ್ಮ | ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯನ್ನು ಹತೋಟಿಯಲ್ಲಿಡುತ್ತದೆ. |
| ಪ್ರೋಲ್ಯಾಕ್ಟಿನ್ | – | ಸ್ತನ ಗ್ರಂಥಿ | ಸ್ತನ ಗ್ರಂಥಿಗಳು ಹಾಲನ್ನು ಸ್ರವಿಸುವಂತೆ ಚೋದಿಸುತ್ತವೆ |
| ವಾಸೋಪ್ರೆಸಿನ್ | – | ಮೂತ್ರ ಜನಕಾಂಗಗಳು | ಮೂತ್ರ ಜನಕಾಂಗಗಳಲ್ಲಿ ನೀರಿನ ವಿಸರ್ಜನೆಯನ್ನು ನಿಯಂತ್ರಿಸುತ್ತದೆ. |
| ಆಕ್ಸಿಟೋಸಿನ್ (ಜನನ ಹಾರ್ಮೋನ್ ) | – | ಗರ್ಭಕೋಶ ಹಾಗೂ ಸ್ತನ ಗ್ರಂಥಿ | ಶಿಶುವಿನ ಜನನದ ಸಂದರ್ಭದಲ್ಲಿ ಗರ್ಭಕೋಶದ ಸ್ನಾಯುಗಳ ಸಂಕೋಚನೆ ಮತ್ತು ಸ್ತನ ಗ್ರಂಥಿಗಳಿಂದ ಹಾಲಿನ ಸ್ರವಿಕೆಯನ್ನು ಚೋದಿಸುತ್ತವೆ |
| ಫಾಲಿಕಲ್ ಚೋದಿಸುವ ಹಾರ್ಮೋನ್ | FSH | ಜನನ ಗ್ರಂಥಿಗಳು | ಜನನ ಗ್ರಂಥಿಗಳು ಲಿಂಗಾಣುಗಳನ್ನು ಉತ್ಪತ್ತಿ ಮಾಡುವಂತೆ ಚೋದಿಸುತ್ತವೆ |
| ಲ್ಯೂಟಿನೈಜಿಂಗ್ ಹಾರ್ಮೋನ್ | LH | ಜನನ ಗ್ರಂಥಿಗಳು | ಜನನ ಗ್ರಂಥಿಗಳು ಲೈಂಗಿಕ ಹಾರ್ಮೋನ್ ಉತ್ಪಾದಿಸಲು ಚೋದಿಸುತ್ತವೆ. |
ಪಿಟ್ಯೂಟರಿ ಗ್ರಂಥಿ ಹಾರ್ಮೋನ್ ಗಳು
By Karnataka | 26 Aug, 2026 | Comments Off on ಪಿಟ್ಯೂಟರಿ ಗ್ರಂಥಿ ಹಾರ್ಮೋನ್ ಗಳು