Karnatakaexamshub


KPSC KEA Practice MCQ

Practice MCQ in Kannada – 4

By Karnataka  |  10 Sep, 2026  |  Comments Off on Practice MCQ in Kannada – 4


1. ತ್ರಿವರ್ಣದ ಧ್ವಜವನ್ನು ಭಾರತದ ರಾಷ್ಟ್ರೀಯ ಧ್ವಜವೆಂದು ಸಂವಿಧಾನ ರಚನಾಸಭೆಯು ಯಾವಾಗ ಅಂಗೀಕರಿಸಿತು ?

  • (ಎ) ಜುಲೈ 22, 1947
  • (ಬಿ) ಜೂನ್ 22, 1947
  • (ಸಿ) ಮೇ 25, 1947
  • (ಡಿ) ಆಗಸ್ಟ್ 1947

Answer: (ಎ) ಜುಲೈ 22, 1947

2. ತ್ರಿವರ್ಣದ ರಾಷ್ಟ್ರಧ್ವಜವನ್ನು ದೇಶಕ್ಕೆ ಎಂದು ಸಮರ್ಪಿಸಲಾಯಿತು ?

  • (ಎ) ಆಗಸ್ಟ್ 14, 1947ರ ಮಧ್ಯರಾತ್ರಿ
  • (ಬಿ) ಜನವರಿ 26, 1950
  • (ಸಿ) ನವೆಂಬರ್ 26, 1949
  • (ಡಿ) ಮೇಲಿನ ಯಾವುದೂ ಅಲ್ಲ

Answer: (ಎ) ಆಗಸ್ಟ್ 14, 1947ರ ಮಧ್ಯರಾತ್ರಿ

3. ರಾಷ್ಟ್ರಧ್ವಜದ ಅಗಲಕ್ಕೂ ಮತ್ತು ಉದ್ದಕ್ಕೂ ಇರುವ ಪ್ರಮಾಣ ಎಷ್ಟು ?

  • (ಎ) 4 : 3
  • (ಬಿ) 2 : 3 (ಅಗಲ : ಉದ್ದ)
  • (ಸಿ) 3 : 2
  • (ಡಿ) ಮೇಲಿನ ಯಾವುದೂ ಅಲ್ಲ

Answer: (ಬಿ) 2 : 3 (ಅಗಲ : ಉದ್ದ)

4. ತ್ರಿವರ್ಣ ಧ್ವಜದ ಮಧ್ಯೆ ಇರುವ ನೀಲಿ ಬಣ್ಣದ ಚಕ್ರಕ್ಕೆ ಎಷ್ಟು ಕೀಲಿ (Spokes) ಗಳಿರುತ್ತವೆ?

  • (ಎ) 15
  • (ಬಿ) 20
  • (ಸಿ) 18
  • (ಡಿ) 24

Answer: (ಡಿ) 24

5. ಭಾರತದ ರಾಷ್ಟ್ರೀಯ ಲಾಂಛನ ಮತ್ತು ಮೊಹರು ಯಾವುದು ?

  • (ಎ) ಸಾರಾನಾಥದಲ್ಲಿರುವ ಅಶೋಕಸ್ತಂಬದ ಪ್ರತಿರೂಪ
  • (ಬಿ) ಹುಲಿ
  • (ಸಿ) ಕಮಲ
  • (ಡಿ) ಇವು ಯಾವುದೂ ಅಲ್ಲ

Answer: (ಎ) ಸಾರಾನಾಥದಲ್ಲಿರುವ ಅಶೋಕಸ್ತಂಬದ ಪ್ರತಿರೂಪ

6. ಸಾರಾನಾಥದಲ್ಲಿರುವ ಅಶೋಕನ ಸ್ತಂಬದಲ್ಲಿ ಒಂದರ ಹಿಂದೆ ಒಂದು ನಿಂತ 4 ಸಿಂಹಗಳು ಕಂಡು ಬಂದರೆ ಭಾರತದ ರಾಷ್ಟ್ರೀಯ ಲಾಂಛನದಲ್ಲಿ ಎಷ್ಟು ಸಿಂಹಗಳು ಕಂಡು ಬರುತ್ತವೆ?

  • (ಎ) ನಾಲ್ಕು
  • (ಬಿ) ಎರಡು
  • (ಸಿ) ಮೂರು
  • (ಡಿ) ಒಂದು

Answer: (ಸಿ) ಮೂರು

7. ರಾಷ್ಟ್ರೀಯ ಲಾಂಛನವನ್ನು ಭಾರತ ಸರ್ಕಾರವು ಯಾವಾಗ ಅಳವಡಿಸಿಕೊಂಡಿತು ?

  • (ಎ) ಆಗಸ್ಟ್ 14, 1947
  • (ಬಿ) ನವೆಂಬರ್ 26, 1949
  • (ಸಿ) ಆಗಸ್ಟ್ 15, 1947
  • (ಡಿ) ಜನವರಿ 26, 1950

Answer: (ಡಿ) ಜನವರಿ 26, 1950

8. ಭಾರತದ ರಾಷ್ಟ್ರಗೀತೆ ‘ಜನಗಣಮನ’ವನ್ನು 1911 ರಲ್ಲಿ ಯಾರು ರಚಿಸಿದರು ?

  • (ಎ) ಬಂಕಿಂ ಚಂದ್ರ ಚಟರ್ಜಿ
  • (ಬಿ) ರವೀಂದ್ರನಾಥ ಠಾಗೋರ್
  • (ಸಿ) ಶರತ್‌ಚಂದ್ರ ಚಟರ್ಜಿ
  • (ಡಿ) ತಾರಾಶಂಕರ್ ಬಂದೋಪಾಧ್ಯಾಯ

Answer: (ಬಿ) ರವೀಂದ್ರನಾಥ ಠಾಗೋರ್

9. ಜನಗಣಮನವನ್ನು ರಾಷ್ಟ್ರಗೀತೆಯೆಂದು ಸಂವಿಧಾನ ರಚನಾ ಸಭೆಯು ಯಾವಾಗ ಅಂಗೀಕರಿಸಿತು?

  • (ಎ) ಜನವರಿ 26, 1950
  • (ಬಿ) ಜನವರಿ 24, 1950
  • (ಸಿ) ಆಗಸ್ಟ್ 15, 1947
  • (ಡಿ) ಆಗಸ್ಟ್ 14, 1947

Answer: (ಬಿ) ಜನವರಿ 24, 1950

10. ‘ಜನಗಣಮನ’ದ ಹಾಡುವ ಅವಧಿ ಎಷ್ಟು ?

  • (ಎ) 1 ನಿಮಿಷ
  • (ಬಿ) 1 ನಿಮಿಷ 10 ಸೆಕೆಂಡುಗಳು
  • (ಸಿ) 45 ಸೆಕೆಂಡುಗಳು
  • (ಡಿ) 52 ಸೆಕೆಂಡುಗಳು

Answer: (ಡಿ) 52 ಸೆಕೆಂಡುಗಳು

11. ಭಾರತದ ರಾಷ್ಟ್ರೀಯ ಹಾಡು ಯಾವುದು ?

  • (ಎ) ವಂದೇ ಮಾತರಂ
  • (ಬಿ) ಜನಗಣಮನ
  • (ಸಿ) ಜೈ ಭಾರತ ಜನನಿಯ ತನುಜಾತೆ
  • (ಡಿ) ಇದು ಯಾವುದೂ ಅಲ್ಲ

Answer: (ಎ) ವಂದೇ ಮಾತರಂ

12. ಭಾರತದ ರಾಷ್ಟ್ರೀಯ ಹಾಡನ್ನು ರಚಿಸಿದವರು ಯಾರು ?

  • (ಎ) ರವೀಂದ್ರನಾಥ ಠಾಗೋರ್
  • (ಬಿ) ಬಂಕಿಮ ಚಂದ್ರ ಚಟರ್ಜಿ
  • (ಸಿ) ಶರತ್‌ಚಂದ್ರ ಚಟರ್ಜಿ
  • (ಡಿ) ಇವರು ಯಾರೂ ಅಲ್ಲ

Answer: (ಬಿ) ಬಂಕಿಮ ಚಂದ್ರ ಚಟರ್ಜಿ

13. ಭಾರತ ರಾಷ್ಟ್ರೀಯ ಹಾಡನ್ನು ಅಂಗೀಕರಿಸಿದ್ದು ಯಾವಾಗ ?

  • (ಎ) ಆಗಸ್ಟ್ 15, 1947
  • (ಬಿ) ಜನವರಿ 24, 1950
  • (ಸಿ) ನವೆಂಬರ್ 26, 1949
  • (ಡಿ) ಇದು ಯಾವುದೂ ಅಲ್ಲ

Answer: (ಬಿ) ಜನವರಿ 24, 1950

14. ವಂದೇಮಾತರಂ ಹಾಡನ್ನು 1882 ರಲ್ಲಿ ಪ್ರಕಟವಾದ ಬಂಕಿಮಚಂದ್ರ ಚಟರ್ಜಿಯವರ ಯಾವ ಕೃತಿಯಿಂದ ಆರಿಸಲಾಗಿದೆ ?

  • (ಎ) ಕಪಾಲ ಕುಂಡಲ
  • (ಬಿ) ವಿಷವೃಕ್ಷ
  • (ಸಿ) ಆನಂದಮಠ
  • (ಡಿ) ಇದು ಯಾವುದೂ ಅಲ್ಲ

Answer: (ಸಿ) ಆನಂದಮಠ

15. ‘ವಂದೇಮಾತರಂ’ ಹಾಡನ್ನು ಯಾವ ವರ್ಷದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದಲ್ಲಿ ಮೊದಲು ಹಾಡಲಾಗಿತ್ತು ?

  • (ಎ) 1896
  • (ಬಿ) 1890
  • (ಸಿ) 1887
  • (ಡಿ) 1898

Answer: (ಎ) 1896

16. 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ?

  • (ಎ) ಸಿಂಹ
  • (ಬಿ) ಆನೆ
  • (ಸಿ) ಜಿಂಕೆ
  • (ಡಿ) ಹುಲಿ

Answer: (ಡಿ) ಹುಲಿ

17. ಭಾರತದ ರಾಷ್ಟ್ರ ಪಕ್ಷಿ ಯಾವುದು ?

  • (ಎ) ಗರುಡ
  • (ಬಿ) ಗಿಳಿ
  • (ಸಿ) ನವಿಲು
  • (ಡಿ) ಹುಲಿ

Answer: (ಸಿ) ನವಿಲು

18. ಭಾರತದ ರಾಷ್ಟ್ರೀಯ ಹೂವು ಯಾವುದು ?

  • (ಎ) ಗುಲಾಬಿ
  • (ಬಿ) ಕಮಲ
  • (ಸಿ) ದಾಸವಾಳ
  • (ಡಿ) ಸೇವಂತಿಗೆ

Answer: (ಬಿ) ಕಮಲ

19. ಭಾರತದ ರಾಷ್ಟ್ರೀಯ ಕ್ಯಾಲೆಂಡರ್ ಯಾವುದು ?

  • (ಎ) ಸಕ
  • (ಬಿ) ಕ್ರಿಸ್ತ
  • (ಸಿ) ಮಹಮ್ಮದೀಯ
  • (ಡಿ) ಇದು ಯಾವುದೂ ಅಲ್ಲ

Answer: (ಎ) ಸಕ

20. ಸಕ ಕ್ಯಾಲೆಂಡರ್ ಯಾವಾಗಿನಿಂದ ಜಾರಿಗೆ ಬಂತು ?

  • (ಎ) ಜನವರಿ 26, 1950
  • (ಬಿ) ಆಗಸ್ಟ್ 15, 1947
  • (ಸಿ) ಮಾರ್ಚ್ 22, 1957
  • (ಡಿ) ಇದು ಯಾವುದೂ ಅಲ್ಲ

Answer: (ಸಿ) ಮಾರ್ಚ್ 22, 1957

manojns1997

error: Content is protected !!