ಯುವ ಸಾಹಿತ್ಯ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕೇಂದ್ರ ಸಾಹಿತ್ಯ ಅಕಾಡೆಮಿ
ಅರ್ಹತೆ: ಭಾರತೀಯ ಭಾಷೆಗಳ 22 ಯುವ ಲೇಖಕರ ಅತ್ಯುತ್ತಮ ಕೃತಿಗಳು
ಪ್ರಶಸ್ತಿ ಮೊತ್ತ: 50 ಸಾವಿರ ರೂ ನಗದು ಮತ್ತು ತಾಮ್ರ ಪ್ರಶಸ್ತಿ ಫಲಕ
📚 ಮಾಸ್ತಿ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸ್ಮಾರಕ ಟ್ರಸ್ಟ್
ಪ್ರಶಸ್ತಿ ಮೊತ್ತ: 20 ಸಾವಿರ ರೂ ನಗದು & ಪ್ರಶಸ್ತಿ ಫಲಕ
🏛️ ಡಾ. ಡಿ. ದೇವರಾಜ್ ಅರಸ್ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕರ್ನಾಟಕ ರಾಜ್ಯ ಸರ್ಕಾರ
ಪ್ರಶಸ್ತಿ ಮೊತ್ತ: 2 ಲಕ್ಷ ರೂ ನಗದು ಮತ್ತು ಫಲಕ
🎨 ಕರ್ನಾಟಕ ಕಲಾಶ್ರೀ ಪ್ರಶಸ್ತಿ
ನೀಡುವವರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಗೌರವ ಪ್ರಶಸ್ತಿ ಮೊತ್ತ: 50 ಸಾವಿರ ರೂ ನಗದು
ವಾರ್ಷಿಕ ಪ್ರಶಸ್ತಿ ಮೊತ್ತ: 25 ಸಾವಿರ ರೂ
🏹 ಏಕಲವ್ಯ ಪ್ರಶಸ್ತಿ
ಕ್ರೀಡಾ ಸಾಧಕರಿಗೆ ಕೊಡಮಾಡುವ ಪ್ರಶಸ್ತಿ
ಸ್ಥಾಪನೆ: 1993
ಮೊದಲ ಪ್ರಶಸ್ತಿ: ಅಮಿತ್‌ರಾಯ್ ಚೌಧರಿ (ವಾಲಿಬಾಲ್)
ಪ್ರದಾನ ಮಾಡುವವರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಪ್ರಶಸ್ತಿ ಮೊತ್ತ: 2 ಲಕ್ಷ ರೂ. ನಗದು ಮತ್ತು ಏಕಲವ್ಯನ ಕಂಚಿನ ಪ್ರತಿಮೆ
🌟 ಕನಕಶ್ರೀ ಪ್ರಶಸ್ತಿ
ಪ್ರಾರಂಭ: 2008
ಉದ್ದೇಶ: ಕನಕದಾಸರ ಜೀವನ ಸಾಹಿತ್ಯ ಸಂದೇಶ, ಸಾಮಾಜಿಕ ಅನನ್ಯ ಸೇವೆ ಸಲ್ಲಿಸಿದ ವಿದ್ವಾಂಸರು, ಸಾಹಿತಿಗಳು ಹಾಗೂ ಸಂಶೋಧಕರನ್ನು ಪ್ರೋತ್ಸಾಹಿಸುವುದು.
ಪ್ರಶಸ್ತಿ ಮೊತ್ತ: 5 ಲಕ್ಷ ರೂ ನಗದು ಹಾಗೂ ಕನಕದಾಸರ ಕಂಚಿನ ಪುತ್ತಳಿ ಮತ್ತು ಪ್ರಶಸ್ತಿ ಫಲಕ
🏆 ಮೂರ್ತಿದೇವಿ ಪ್ರಶಸ್ತಿ
ನೀಡುವವರು: ಭಾರತೀಯ ಜ್ಞಾನಪೀಠ ಸಂಸ್ಥೆ
ಪ್ರಶಸ್ತಿ ಮೊತ್ತ: 1 ಲಕ್ಷ ರೂ. ನಗದು ಮತ್ತು ಸ್ಮರಣಿಕ
ವಿಶೇಷತೆ: ಸಂವಿಧಾನದ 8ನೇ ಅನುಚ್ಛೇದದ ಭಾಷೆಗಳು ಮತ್ತು ಆಂಗ್ಲ ಭಾಷೆಯಲ್ಲಿ ಬರೆಯುವ ಭಾರತೀಯ ಬರಹಗಾರರಿಗೆ ನೀಡುವ ಪ್ರಶಸ್ತಿ.
🏅 ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
ಪ್ರಾರಂಭ: 1995
ಉದ್ದೇಶ: ಕನ್ನಡದ ಮಹಿಳಾ ಸಾಹಿತಿಗಳ ಜೀವಮಾನ ಸಾಧನೆ ಪರಿಗಣಿಸಿ ಗೌರವಿಸುವುದು
ಪ್ರಶಸ್ತಿ ಮೊತ್ತ: 3 ಲಕ್ಷ ರೂ ನಗದು ಹಾಗೂ ಪುತ್ತಳಿ ಮತ್ತು ಪ್ರಶಸ್ತಿ ಫಲ
ಪ್ರಶಸ್ತಿ ನೀಡುವವರು: ಕನ್ನಡ & ಸಂಸ್ಕೃತಿ ಇಲಾಖೆ
🏅 ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
ಪ್ರಾರಂಭ: 1995
ಉದ್ದೇಶ: ಕನ್ನಡದ ಮಹಿಳಾ ಸಾಹಿತಿಗಳ ಜೀವಮಾನ ಸಾಧನೆ ಪರಿಗಣಿಸಿ ಗೌರವಿಸುವುದು
ಪ್ರಶಸ್ತಿ ಮೊತ್ತ: 3 ಲಕ್ಷ ರೂ ನಗದು ಹಾಗೂ ಪುತ್ತಳಿ ಮತ್ತು ಪ್ರಶಸ್ತಿ ಫಲಕ
ಪ್ರಶಸ್ತಿ ನೀಡುವವರು: ಕನ್ನಡ & ಸಂಸ್ಕೃತಿ ಇಲಾಖೆ
👑 ಮಯೂರ ವರ್ಮ ಪ್ರಶಸ್ತಿ
ನೀಡುವವರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಅರ್ಹತೆ: 45 ವರ್ಷದೊಳಗಿನ ಸಾಹಿತಿಗಳಿಗೆ ನೀಡುವುದು.
ಪ್ರಶಸ್ತಿ ಮೊತ್ತ: 25 ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಫಲಕ
🎶 ಸಂತ ಶಿಶುನಾಳ ಶರೀಫ ಪ್ರಶಸ್ತಿ
ಪ್ರಾರಂಭ: 1995
ಅರ್ಹತೆ: ತತ್ವ ಪದ, ದಾಸರ ಪದ, ವಚನ ಸಂಗೀತ, ಸುಗಮ ಸಂಗೀತ, ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸೇವೆ ಸಲ್ಲಿಸಿದವರು.
ಪ್ರಶಸ್ತಿ ಮೊತ್ತ: 1 ಲಕ್ಷರೂ
🕊️ ಸಂಯಮ ಪ್ರಶಸ್ತಿ
ಪ್ರಾರಂಭ: 2011
ಪ್ರಶಸ್ತಿ ಮೊತ್ತ: 1 ಲಕ್ಷ ರೂ ನಗದು ಮತ್ತು ಸ್ಮರಣಿಕೆ
ಪ್ರಶಸ್ತಿ ನೀಡುವವರು: ವಾರ್ತಾ ಇಲಾಖೆ
📜 ರಾಷ್ಟ್ರಕವಿ ಪ್ರಶಸ್ತಿ
ಪ್ರಾರಂಭ: 1949
ಉದ್ದೇಶ: ಹಿರಿಯ ಗೌರವಕ್ಕೆ ಪಾತ್ರರಾದ ಕವಿಗಳನ್ನು ಗುರುತಿಸುವುದು.
ಪ್ರಶಸ್ತಿ ಮೊತ್ತ: 10 ಲಕ್ಷ ರೂ ನಗದು
ಪ್ರಶಸ್ತಿ ನೀಡುವವರು: ಕರ್ನಾಟಕ ರಾಜ್ಯ ಸರ್ಕಾರ
ಮೊದಲ ಪ್ರಶಸ್ತಿ ಪುರಸ್ಕೃತರು: ಎಂ. ಗೋವಿಂದ ಪೈ (1949–ಮದ್ರಾಸ್ ರಾಜ್ಯ ಸರ್ಕಾರ).
ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರು: ಕುವೆಂಪು (1969), ಜಿ.ಎಸ್.ಶಿವರುದ್ರಪ್ಪ (2006).
🕊️ ಭಗವಾನ್ ಮಹಾವೀರ ಪ್ರಶಸ್ತಿ
ಪ್ರಾರಂಭ: 2016
ಉದ್ದೇಶ: ಅಹಿಂಸೆ, ಶಾಂತಿ, ಸೌಹಾರ್ದ ಜನಕಲ್ಯಾಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪ್ರತಿಪಾದನೆ ಹಾಗೂ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ನೀಡುವುದು.
ಪ್ರಶಸ್ತಿ ಮೊತ್ತ: 3 ಲಕ್ಷ ರೂ. ಹಾಗೂ ಪುತ್ತಳಿ ಫಲಕ
ವಿಶೇಷತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚೊಚ್ಚಲ ಬಾರಿಗೆ ನೀಡಿದ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಸಿದ್ಧಗಂಗಾ ಮಠಾಧ್ಯಕ್ಷರಾಗಿದ್ದ ಶ್ರೀಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅವರಿಗೆ ಅರ್ಪಣೆ ಮಾಡಲಾಗಿತ್ತು.
🪕 ಜಾನಪದ ಶ್ರೀ ಪ್ರಶಸ್ತಿ
ಪ್ರಾರಂಭ: 1994
ಉದ್ದೇಶ: ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಕಲಾವಿದರಿಗೆ ನೀಡುವ ಉನ್ನತ ಪ್ರಶಸ್ತಿ.
ಪ್ರಶಸ್ತಿ ಮೊತ್ತ: 1 ಲಕ್ಷ ರೂ ನಗದು
🗡️ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ
ಪ್ರಾರಂಭ: 2013
ಉದ್ದೇಶ: ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹೋರಾಟ ನಡೆಸಿದವರಿಗೆ ಗೌರವ ಸಲ್ಲಿಸುವುದು
ಪ್ರಶಸ್ತಿ ಮೊತ್ತ: 3 ಲಕ್ಷ ರೂ ಹಾಗೂ ಪುತ್ತಳಿ ಫಲಕ
🎓 ಜಾನಪದ ತಜ್ಞ ಪ್ರಶಸ್ತಿ
ಪ್ರಾರಂಭ: 1986. ಆದರೆ 2014ರಲ್ಲಿ ಪ್ರಶಸ್ತಿ ನೀಡುವುದನ್ನು ನಿಲ್ಲಿಸಲಾಗಿದೆ.
ಅರ್ಹತೆ: ಜಾನಪದ ಕ್ಷೇತ್ರ ತಜ್ಞರು, ವಿದ್ವಾಂಸರು
ಪ್ರಶಸ್ತಿ ಮೊತ್ತ: 10 ಸಾವಿರ ರೂ ಗೌರವ ಧನ ಹಾಗೂ ಪ್ರಶಸ್ತಿ ಫಲಕ. ಕಲಾವಿದರಿಗೆ ಮತ್ತು ಪುಸ್ತಕ ಬಹುಮಾನಕ್ಕೆ ತಲಾ 5 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ.
🎭 ಗುಬ್ಬಿ ವೀರಣ್ಣ ಪ್ರಶಸ್ತಿ
ಪ್ರಾರಂಭ: 1994
ಉದ್ದೇಶ: ವೃತ್ತಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಂದಾಯ ಮಾಡಿದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಶಸ್ತಿ ಮೊತ್ತ: 1 ಲಕ್ಷ
ವಿಶೇಷತೆ: ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಬಿ.ವಿ. ಕಾರಂತ ಪ್ರಶಸ್ತಿ ನೀಡಲಾಗುತ್ತದೆ.
🌍 ವಿಶ್ವ ಮಾನವ ಕನ್ನಡಿಗ ಪ್ರಶಸ್ತಿ
ನೀಡುವವರು: ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ
ಪ್ರಶಸ್ತಿ ಮೊತ್ತ: 10ಸಾವಿರ ರೂ ನಗದು
🏹 ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ
ಉದ್ದೇಶ: ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದವರಿಗೆ ನೀಡಲಾಗುತ್ತದೆ.
ನೀಡುವವರು: ಕರ್ನಾಟಕ ಸರ್ಕಾರ
🎵 ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ
ಪ್ರಾರಂಭ: 1993
ಅರ್ಹತೆ: ಸಂಗೀತ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೆಯ್ದ ವಿದ್ವಾಂಸರಿಗೆ ನೀಡುವ ಪ್ರಶಸ್ತಿ.
ಮೊದಲ ಪ್ರಶಸ್ತಿ ಪುರಸ್ಕೃತರು: ಡಾ. ಪುಟ್ಟರಾಜ ಗವಾಯಿ (1993)
ಇತ್ತೀಚಿನ ಪುರಸ್ಕೃತರು: ಸರೋದ್ ವಾದಕ ಪಂಡಿತ್ ರಾಜೇವ್ ತಾರಾನಾಥ್ (2018)
ವಿಶೇಷತೆ: ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ನೀಡಲಾಗುವ ಪುರಸ್ಕಾರ
🏰 ನಾಡಪ್ರಭು ಕೆಂಪೇಗೌಡ ಪ್ರಶಸ್ತಿ
ಪ್ರಾರಂಭ: 2011
ಅರ್ಹತೆ: ವೈದ್ಯಕೀಯ, ಶಿಕ್ಷಣ, ಮಾಧ್ಯಮ, ರಂಗಭೂಮಿ ಸಾಹಿತ್ಯ, ಸಂಗೀತ, ಪತ್ರಿಕೋದ್ಯಮ, ಸಂಸ್ಕೃತಿ ಮೊದಲಾದ ಕ್ಷೇತ್ರಗಳ ವೈಯಕ್ತಿಕ ಕೊಡುಗೆಗಾಗಿ ನೀಡುವ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಬಿಬಿಎಂಪಿ
ಪ್ರಶಸ್ತಿ ಮೊತ್ತ: 25 ಸಾವಿರ ನಗದು ಮತ್ತು ಫಲಕ
👑 ರಾಣಿ ಅಬ್ಬಕ್ಕ ಪ್ರಶಸ್ತಿ
ನೀಡುವವರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಅರ್ಹತೆ: ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಸಾಹಿತಿಗಳು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ನೀಡುವ ಪ್ರಶಸ್ತಿ.
ಪ್ರಶಸ್ತಿ ಮೊತ್ತ: 30 ಸಾವಿರ ನಗದು
📰 ಟಿ.ಎಸ್.ಆರ್ ಪ್ರಶಸ್ತಿ
ಮೊದಲು ಪ್ರಾರಂಭ: 1993
ಪ್ರಶಸ್ತಿ ನೀಡುವುದು: ಪ್ರಜಾವಾಣಿಯ ಟಿ.ಎಸ್. ರಾಮಚಂದ್ರರಾವ್ ಹೆಸರಿನಲ್ಲಿ ನೀಡಿಕೆ
ಉದ್ದೇಶ: ಶ್ರೇಷ್ಠ ಪತ್ರಿಕಾ ವಿನ್ಯಾಸಕ್ಕೆ, ವರದಿಗೆ, ದೂರದರ್ಶನದ ಸುದ್ದಿ ವಾಚನಕ್ಕೆ, ಸುದ್ದಿ ಸಾಕ್ಷ್ಯ ಚಿತ್ರಗಳು ಮುಂತಾದ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ.
ನೀಡುವವರು: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ
ಮೊದಲ ಪುರಸ್ಕೃತರು: ಪುಟ್ಟಪ್ಪ (1993)
📜 ಕುಮಾರವ್ಯಾಸ ಪ್ರಶಸ್ತಿ
ಪ್ರಾರಂಭ: 2005
ಅರ್ಹತೆ: ಗಮಕ ಕಲೆಯಲ್ಲಿ ವಿಶೇಷ ಸಾಧನೆ ತೋರಿದ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿ.
ಪ್ರಶಸ್ತಿ ಮೊತ್ತ: 1 ಲಕ್ಷರೂ
💃 ಶಾಂತಲಾ ನಾಟ್ಯ ಪ್ರಶಸ್ತಿ
ಪ್ರಾರಂಭ: 1995
ಪ್ರಶಸ್ತಿ ನೀಡುವವರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಅರ್ಹತೆ: ನೃತ್ಯ ರಂಗಕ್ಕೆ ಸಂಬಂಧಿಸಿದಂತೆ ಅಪೂರ್ವ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ನೀಡುವ ಪ್ರಶಸ್ತಿ
ಪ್ರಶಸ್ತಿ ಮೊತ್ತ: 1 ಲಕ್ಷ ರೂ
🗿 ಜಕಣಾಚಾರಿ ಪ್ರಶಸ್ತಿ
ಪ್ರಾರಂಭ: 1995
ಅರ್ಹತೆ: ವಿಶಿಷ್ಟ ಶಿಲ್ಪಕಲಾ ಸಾಧನೆ ಮಾಡಿದ ಶಿಲ್ಪ ಕಲಾವಿದರಿಗೆ ನೀಡುವ ಪ್ರಶಸ್ತಿ.
ಪ್ರಶಸ್ತಿ ಮೊತ್ತ: 1 ಲಕ್ಷರೂ
ಮೊದಲ ಪ್ರಶಸ್ತಿ ಪುರಸ್ಕೃತರು: ಸಿ. ಪರಮೇಶ್ವರಚಾರ್ (1995)
🎻 ಟಿ. ಚೌಡಯ್ಯ ಪ್ರಶಸ್ತಿ
ಕರ್ನಾಟಕದ ಮಹೋನ್ನತ ಸಂಗೀತ ವಿದ್ವಾಂಸರಾದ ಪಿಟೀಲು ಟಿ. ಚೌಡಯ್ಯನವರ ಹೆಸರಿನಲ್ಲಿ ನೀಡುವ ಪ್ರಶಸ್ತಿ.
ಪ್ರಾರಂಭ: 1995
ಅರ್ಹತೆ: ಶಾಸ್ತ್ರೀಯ ವಾದ್ಯ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರಿಗೆ ನೀಡುವ ಪ್ರಶಸ್ತಿ.
ಪ್ರಶಸ್ತಿ ಮೊತ್ತ: 1.5 ಲಕ್ಷರೂ
🪕 ಶ್ರೀ ನಿಜಗುಣ ಪುರಂದರ ಪ್ರಶಸ್ತಿ
ಪ್ರಾರಂಭ: 1991 (ಕನಕ ಪುರಂದರ ಪ್ರಶಸ್ತಿಯಾಗಿ ಮೊದಲ ಬಾರಿ ನೀಡಿಕೆ) 2010 ರಿಂದ ಶ್ರೀ ನಿಜಗುಣ ಪುರಂದರ ಪ್ರಶಸ್ತಿಯಾಗಿ ನೀಡಿಕೆ
ಅರ್ಹತೆ: ಕರ್ನಾಟಕ ಸಂಗೀತ, ಹಿಂದುಸ್ತಾನಿ ಗಾಯನ, ಕನ್ನಡ ನಾಡಿನ ದಾಸ ಶ್ರೇಷ್ಠರಾದ ಪುರಂದರ ದಾಸರು & ಕನಕದಾಸರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆ ನೀಡುವ ಪ್ರಶಸ್ತಿ.
🎨 ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
ಪ್ರಾರಂಭ: 1994
ಉದ್ದೇಶ: ಚಿತ್ರಕಲಾ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಕರ್ನಾಟಕದ ಚಿತ್ರ ಕಲಾವಿದರಿಗೆ ನೀಡಲಾಗುತ್ತದೆ.
ಪ್ರಶಸ್ತಿ ಮೊತ್ತ: 3 ಲಕ್ಷರೂ ನಗದು ಮತ್ತು ಸ್ಮರಣಿಕೆ
ನೀಡುವವರು: ಕರ್ನಾಟಕ ಸರ್ಕಾರ
ಮೊದಲ ಪುರಸ್ಕೃತರು: ಕೆ.ಕೆ. ಹೆಬ್ಬಾರ್
🎨 ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
ಪ್ರಾರಂಭ: 1994
ಉದ್ದೇಶ: ಚಿತ್ರಕಲಾ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಕರ್ನಾಟಕದ ಚಿತ್ರ ಕಲಾವಿದರಿಗೆ ನೀಡಲಾಗುತ್ತದೆ.
ಪ್ರಶಸ್ತಿ ಮೊತ್ತ: 3 ಲಕ್ಷರೂ ನಗದು ಮತ್ತು ಸ್ಮರಣಿಕೆ
ನೀಡುವವರು: ಕರ್ನಾಟಕ ಸರ್ಕಾರ
🌸 ಅಕ್ಕಮಹಾದೇವಿ ಪ್ರಶಸ್ತಿ
ಪ್ರಾರಂಭ: 2016
ಉದ್ದೇಶ: ಶಿವ ಶರಣೆಯರ ಆಗಮಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸಿದ ಯಾವುದೇ ಕ್ಷೇತ್ರದ ಮಹಿಳಾ ಸಾಧಕರಿಗೆ ಹಾಗೂ ಸಂಸ್ಥೆಗಳಿಗೆ ಪ್ರಶಸ್ತಿ ನೀಡುವುದು.
ಪ್ರಶಸ್ತಿ ಮೊತ್ತ: 3 ಲಕ್ಷ ರೂ ಹಾಗೂ ಹಿತ್ತಾಳೆ ಫಲಕ
ವಿಶೇಷತೆ: 2017ರಲ್ಲಿ ಹಂಪಿ ವಿವಿಯ ಕುಲಪತಿ ಮಲ್ಲಿಕಾ ಘಂಟಿ ಅವರಿಗೆ ಚೊಚ್ಚಲ ಬಾರಿಗೆ ಆಚರಿಸಿದ ಅಕ್ಕಮಹಾದೇವಿ ಆಚರಣೆ ದಿನದಂದು ನೀಡಲಾಯಿತು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಭವನದ ಸಭಾಂಗಣದ ಹೆಸರು: ವಚನಗಾರ್ತಿ ಅಕ್ಕಮಹಾದೇವಿ
📰 ಖಾದ್ರಿ ಶಾಮಣ್ಣ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್
ಅರ್ಹತೆ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ
ಪ್ರಶಸ್ತಿ ಮೊತ್ತ: 15 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ
👑 ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕನ್ನಡ ಸಾಹಿತ್ಯ ಪರಿಷತ್
ಅರ್ಹತೆ: ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹಿತ ರಕ್ಷಣೆ ಹಾಗೂ ಶೋಷಿತ ಮಹಿಳೆಯರ ಪರ ಹೋರಾಟ ಮಾಡುತ್ತಿರುವವರಿಗೆ ನೀಡುವ ಪ್ರಶಸ್ತಿ
ಪ್ರಶಸ್ತಿ ಮೊತ್ತ: 25 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ
🏅 ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ
ಉದ್ದೇಶ: ಕರ್ನಾಟಕದ ಗಡಿ ಭಾಗದಲ್ಲಿದ್ದು, ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಅಪರಿಮಿತವಾದ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಶಸ್ತಿ ಮೊತ್ತ: 3 ಲಕ್ಷ ರೂ ಹಾಗೂ ಪುತ್ತಳಿ ಫಲಕ
🏛️ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ಪ್ರಶಸ್ತಿ
ಪ್ರಶಸ್ತಿ ಮೊತ್ತ: 25 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ
ಅರ್ಹತೆ: ಕರ್ನಾಟಕದ ಸಾಮಾಜಿಕ ಸಾಂಸ್ಕೃತಿಕ ಕಲೆ, ಪರಂಪರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ 50 ವರ್ಷ ಮೀರಿದ ಮಹಾನೀಯರಿಗೆ ನೀಡುವುದು.
ವಿಶೇಷತೆ: ಬೆಂಗಳೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ. ತಿಮ್ಮೇಶ್ ಸ್ಥಾಪಿಸಿದ್ದ ದತ್ತಿ ನಿಧಿ ಮೂಲಕ ನೀಡುವ ಪ್ರಶಸ್ತಿ
📚 ಮನೋಹರಿ ಪಾರ್ಥಸಾರಥಿ ಮನುಶ್ರೀ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕನ್ನಡ ಸಾಹಿತ್ಯ ಪರಿಷತ್
ಅರ್ಹತೆ: ದೇಶ ವಿದೇಶದ ಭಾಷೆಗಳಲ್ಲಿ ಸಮಗ್ರ ಸಾಹಿತ್ಯದಲ್ಲಿ ಸಾಧನೆ ಮಾಡಿದವರು.
ಪ್ರಶಸ್ತಿ ಮೊತ್ತ: 25 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ
🌾 ಹೆಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕರ್ನಾಟಕ ಜಾನಪದ ಪರಿಷತ್
ಪ್ರಶಸ್ತಿ ಮೊತ್ತ: 1 ಲಕ್ಷ ರೂ ನಗದು & ಪ್ರಶಸ್ತಿ ಫಲಕ
🛠️ ಕಾಯಕ ಶ್ರೀ ಪ್ರಶಸ್ತಿ
ನೀಡುವವರು: ಬೆಳಗಾವಿ ಜಿಲ್ಲೆಯ ಗೋಕಾಕ್ ಶೂನ್ಯ ಸಂಪಾದನಾ ಮಠ
📖 ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ
ಅರ್ಹತೆ: ಕನ್ನಡ ಭಾಷೆ ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ ಕಥನ ಕಾವ್ಯ ಸಂಶೋಧನಾ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರು.
ಪ್ರಶಸ್ತಿ ಮೊತ್ತ: 10 ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ
2018ರ ಪ್ರಶಸ್ತಿ: ಕನ್ನಡದ ಖ್ಯಾತ ವಿದ್ವಾಂಸ ಡಾ. ಹಂಪ ನಾಗರಾಜಯ್ಯ.
👶 ಬಾಲ ಸಾಹಿತ್ಯ ಪುರಸ್ಕಾರ
ಪ್ರಶಸ್ತಿ ನೀಡುವವರು: ಕೇಂದ್ರ ಸಾಹಿತ್ಯ ಅಕಾಡೆಮಿ
ಅರ್ಹತೆ: ಭಾರತೀಯ ಭಾಷೆಗಳ 22 ಮಕ್ಕಳ ಸಾಹಿತ್ಯಕ್ಕೆ ಕೊಡುಗೆ ನೀಡಿದ ಲೇಖಕರ ಅತ್ಯುತ್ತಮ ಕೃತಿಗಳು
ಪ್ರಶಸ್ತಿ ಮೊತ್ತ: 50 ಸಾವಿರ ರೂ ನಗದು ಮತ್ತು ತಾಮ್ರ ಪ್ರಶಸ್ತಿ ಫಲಕ
✊ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕನ್ನಡ ಶಕ್ತಿ ಕೇಂದ್ರ
ಅರ್ಹತೆ: ದಿವಂಗತ ಗೋಪಾಲ ಗೌಡರ ಜೀವನ ಆದರ್ಶಗಳನ್ನು ಪಾಲಿಸಿಕೊಂಡು ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರು.
ಪ್ರಶಸ್ತಿ ಮೊತ್ತ: 25 ಸಾವಿರ ರೂ ನಗದು & ಸ್ಮರಣಿಕೆ
💎 ಕರ್ನಾಟಕ ಚೂಡಾಮಣಿ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ
2018ರ ಪ್ರಶಸ್ತಿ: ಕನ್ನಡ ಪರ ಹೋರಾಟಗಾರ ರಾ.ನಂ. ಚಂದ್ರಶೇಖರ
ರಾಜ್ಯೋತ್ಸವ ಪ್ರಶಸ್ತಿ
ಸ್ಥಾಪನೆ & ಮೊದಲ ಪ್ರದಾನ: 1966
ಪ್ರಶಸ್ತಿ ನೀಡುವವರು: ಕರ್ನಾಟಕ ಸರ್ಕಾರ
ಯಾವ ವಿಧದ ಪ್ರಶಸ್ತಿ: ಕರ್ನಾಟಕ ರಾಜ್ಯದ 2ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ
ಕ್ಷೇತ್ರ: ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಶಿಲ್ಪಕಲೆ, ಪತ್ರಿಕೋದ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ಮಾಹಿತಿ ತಂತ್ರಜ್ಞಾನ & ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡಿ ನೀಡಲಾಗುತ್ತದೆ.
ಪ್ರಶಸ್ತಿ ಮೊತ್ತ: 1 ಲಕ್ಷ ರೂ. ನಗದು, ಶಾಲು, ಪ್ರಶಸ್ತಿ ಪತ್ರ & ಸ್ಮರಣಿಕೆ. ಇದಲ್ಲದೇ ಅರ್ಹ ಪುರಸ್ಕೃತರಿಗೆ ಸರ್ಕಾರದ ವತಿಯಿಂದ ನಿವೇಶನ ನೀಡುವ ಪದ್ಧತಿ ಇದೆ.
ಪ್ರಶಸ್ತಿ ಮಾಡುವ ದಿನಾಂಕ: ನವೆಂಬರ್ 1 (ಕನ್ನಡ ರಾಜ್ಯೋತ್ಸವ ದಿನ)