- ಇವರು ಮೂಲತಃ ಆಫ್ರಿಕಾದ ಜಾ೦ಜ್ ಕರಾವಳಿಯ ಬಂಟು ವಂಶಸ್ಥರು.
- ಅರಬ್ ಗುಲಾಮ ವ್ಯಾಪಾರದಿಂದ ಭಾರತಕ್ಕೆ ಬಂದವರು.
- ಭಾರತದಲ್ಲಿ ಪ್ರಥಮವಾಗಿ ಗುಜರಾತಿನ ಬರೂಚಿನಲ್ಲಿ ನೆಲೆಯಾಗಿದ್ದು, ಕಾಲಂತರ ಗಿರ್ ಅರಣ್ಯ ಪ್ರದೇಶ ಮತ್ತು ಜುನಾಗಡ್ ಪ್ರದೇಶದಲ್ಲಿ ಪ್ರಸ್ತುತ ವಾಸಿಸುತ್ತಿದ್ದಾರೆ.
- ಕರ್ನಾಟಕದ ಉತ್ತರ ಭಾಗವಾದ ಉತ್ತರ ಕನ್ನಡದ ಎಲ್ಲಾಪುರ,ಮುಂಡಗೋಡ, ಸಿದ್ದಾಪುರ ,ಹಳಿಯಾಳ, ಜೋಹಿಡಾ, ಕಾರವಾರ, ಧಾರವಾಡದ ಕಲಗಟ್ಟಿ, ಬೆಳಗಾವಿಯ ಖಾನಾಪುರ
- ಇವರಲ್ಲಿ ಅತಿ ಹೆಚ್ಚು ಮುಸ್ಲಿಂ ಧರ್ಮದವರಾಗಿದ್ದು, ಸ್ವತಂತ್ರದ ನಂತರ ಪಾಕಿಸ್ತಾನ ಪ್ರತ್ಯೇಕವಾದ ಕಾರಣ ಕರಾಚಿ ಮತ್ತು ಸಿಂದ್ ಪ್ರದೇಶದಲ್ಲಿದ್ದಾರೆ.ಕರ್ನಾಟಕದಲ್ಲಿ ಹಿಂದೂ ಧರ್ಮವನ್ನು ಪಾಲಿಸುತ್ತಾರೆ.
- 1984ನಲ್ಲಿ ನಮ್ಮರಾಜ್ಯದ ದಾಂಡೇಲಿಯಲ್ಲಿರುವ ಗ್ರಾಮೀಣ ಕಲ್ಯಾಣ ಸಮಿತಿಯವರು, ಕರ್ನಾಟಕ ಸಿದ್ಧಿ ಅಭಿವೃದ್ಧಿ ಸಂಘವನ್ನು ಪ್ರಾರಂಭಿಸಿದರು. ಈ ಸಂಘದ ಮೂಲಕ, ಸಿದ್ಧಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಉದ್ಯೋಗದ ಸದವಕಾಶ ನೀಡುವ ಮಹತ್ಕಾರ್ಯ ನಡೆಯುತ್ತಿದೆ.
- ಮ್ಯಾಗಸೇಸೆ ಪ್ರಶಸ್ತಿಯ ಪುರಸ್ಕೃತರಾಗಿರುವ ವಿ. ಸುಬ್ಬಣ್ಣನವರೂ ಸಹ ಈ ಕೆಲಸದಲ್ಲಿ ಭಾಗಿಯಾಗಿರುವರು.
- ಜನವರಿ ೮ ೨೦೦೩ರಲ್ಲಿ ಕೇಂದ್ರ ಸರ್ಕಾರ ಸಿದ್ದಿ ಜನಾಂಗವನ್ನು ಶೆಡ್ಯೂಲ್ ಟ್ರೈಬ್ಸ್ ಪಟ್ಟಿಯಲ್ಲಿ ಪರಿಗಣಿಸಿತು.
- ಇದರಿಂದಾಗಿ ಈ ಜನಾಂಗ ಇಂದು ಸಂವಿಧಾನದ ಪ್ರಕಾರ ಶಕ್ತರಾಗಿರುತ್ತಾರೆ.
- ನಿರಾಶ್ರಿತ ಸಿದ್ದಿಯರಿಗೆ ವಸತಿ ಯೋಜನೆ, ಉದ್ಯೋಗಾವಕಾಶ, ಶಿಕ್ಷಣ, ವಿದ್ಯುತ್‌ಶಕ್ತಿ, ಆಸ್ಪತ್ರೆಗಳು, ರಸ್ತೆಗಳು, ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯ ಸರ್ಕಾರ ಕೈಗೊಂಡಿದೆ.
- ಇದರ ಅಡಿ, ಪ್ರತಿಯೊಂದು ಸಿದ್ಧಿ ಕುಟುಂಬಕ್ಕೆ ತಲಾ ಎರಡು ಎಕರೆ ಜಮೀನನ್ನು ಅಥವಾ ಭೂಮಿಯನ್ನು ನೀಡಲಾಗುತ್ತಿದೆ.
- ಇತ್ತೀಚೆಗೆ, ಯು.ಎನ್.ಓ ಸಂಘದ ಯುನೆಸ್ಕೊ ಸಮಿತಿ ಈ ಬುಡುಕಟ್ಟಿನವರ ಪುನರ್ವಸತಿ ಕಾರ್ಯವನ್ನು ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಹಣದ ಸಹಾಯವನ್ನು ಸಹ ನೀಡುತ್ತಿದೆ.
ಸಿದ್ಧಿ ಬುಡಕಟ್ಟು ಜನಾಂಗ
By Karnataka | 25 Aug, 2026 | Comments Off on ಸಿದ್ಧಿ ಬುಡಕಟ್ಟು ಜನಾಂಗ