Karnatakaexamshub


GK Tables Kannada

ರಾಷ್ಟ್ರೀಯ ಭದ್ರತಾ ಪಡೆ (NSG)

By Karnataka  |  24 Jun, 2026  |  Leave a comment



ರಾಷ್ಟ್ರೀಯ ಭದ್ರತಾ ಕಾಯ್ದೆ 1986 ರ ಪ್ರಕಾರ ಸ್ಥಾಪಿಸಲಾಗಿದೆ. 1984ರ ‘ಆಪರೇಷನ್ ಬ್ಲೂ ಸ್ಟಾರ್’ನ ವಿಶ್ಲೇಷಣೆಯಿಂದ ಸ್ಥಾಪಿಸಲಾಯಿತು ಈ ಒಂದು ಘಟನೆ ಭಯೋತ್ಪಾದಕರಿಗೆ ಮಟ್ಟ ಹಾಕಲು ವಿಶೇಷ ಪಡೆ ದೇಶಕ್ಕೆ ಬೇಕು ಎಂಬುದನ್ನು ಮನಗಾಣಿಸಿತು. ಇದೇ ಎನ್.ಎಸ್.ಜಿ. ರಚಿಸಲು ಸ್ಫೂರ್ತಿ ಪಡೆಯಿತು. ಇದು ನೇರವಾಗಿ ಕ್ಯಾಬಿನೆಟ್ ಸಚಿವಾಲಯದಡಿ ಬರುತ್ತದೆ. ಇದು ಭಾರತದ ರಾಷ್ಟ್ರೀಯ ಏಕತೆಯನ್ನು ಕಾಪಾಡವುದು. ಇದು ಜಗತ್ತಿನ ಅತ್ಯುತ್ತಮ ಪಡೆಯೆಂದು ಕರೆಸಿಕೊಂಡಿದೆ. ಭಯೋತ್ಪಾದಕರನ್ನು ಎದುರಿಸುವ ಅತ್ಯಾಧುನಿಕ ಸಲಕರಣೆ ಹಾಗೂ ತರಬೇತಿ ಹೊಂದಿರುವ ಪಡೆಯಾಗಿದೆ. ತಾಂತ್ರಿಕ ಸುಧಾರಿತ ಪಡೆಯಾದ ಇದು ಎಂಥ ಸನ್ನಿವೇಶದಲ್ಲೂ ಭಯೋತ್ಪಾದಕರನ್ನು ಮಟ್ಟ ಹಾಕುತ್ತದೆ. ಇದರ ಸೈನಿಕರಿಗೆ ‘ಬ್ಲ್ಯಾಕ್ ಕ್ಯಾಟ್ಸ್’ ಎಂದು ಕರೆಯಲಾಗುತ್ತದೆ. ಕಾರಣ ತಲೆಯ ಸುತ್ತಲೂ ಕಪ್ಪು ಬಟ್ಟೆ ಸುತ್ತಿರುವುದು ಇದನ್ನು ಸ್ಪೇಷಲ್ ಆಕ್ಷನ್ ಗ್ರೂಪ್ (SAG) ಸ್ಪೇಷಲ್ ರೇಂಜರ್ ಗ್ರೂಪ್ (SRG) ಎಂದು ವಿಂಗಡಿಸಲಾಗಿದೆ. ಎನ್.ಎಸ್.ಜಿ. ಸೈನಿಕ ಸಂಖ್ಯೆ 14500 ಇದರಲ್ಲಿ ಸಿ.ಆರ್.ಪಿ.ಎಫ್., ಬಿ.ಎಸ್.ಎಫ್., ಸಿ.ಐ.ಎಫ್. ಅಯ್ವ ಸೈನಿಕರಿಗೆ ಈ ತರಬೇತಿಯನ್ನು ನೀಡಲಾಗುವುದು. ಈ ತರಬೇತಿ ಹೊಂದಿದ 5 ಜನರ ಒಳಗೊಂಡ ಒಂದು ಪಡೆ ರಚನೆಯಾಗಿರುತ್ತದೆ. ಇದರಲ್ಲಿ ಒಬ್ಬ ಕಮಾಂಡರ್ ಇರುತ್ತಾನೆ. ಈ ಪಡೆ 2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕರನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಆಪರೇಷನ್ ಬ್ಲ್ಯಾಕ್ ಟಾರ್ನೆಡೋ ಮತ್ತು ಆಪರೇಷನ್ ಸೈಕ್ಲೋನ್ ಎಂಬ ಹೆಸರು ಈ ಕಾರ್ಯಾಚರಣೆಗಳಿಗೆ ನೀಡಲಾಗಿತ್ತು. ಈ ಕಾರ್ಯಾಚರಣೆ ಯಲ್ಲಿ ದೇಶದ ಹೆಮ್ಮೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿ ಹಲವು ಪೋಲೀಸ್ ಅಧಿಕಾರಿಗಳು ಹುತಾತ್ಮರಾದರು. ಸುಮಾರು 9 ಜನ ಭಯೋತ್ಪಾದಕರನ್ನು ಕೊಂದು ಕಾರ್ಯಾಚರಣೆ ಯಶಸ್ವಿಗೊಳಿಸಿದರು. ಈ ಪಡೆಯ ಘೋಷ ವಾಕ್ಯ ‘ಸರ್ವತ್ರ ಸರ್ವೋತ್ತಮ ಸುರಕ್ಷಾ’. 

manojns1997

Your email address will not be published. Required fields are marked *

error: Content is protected !!