Karnatakaexamshub


GK Tables Kannada

ಯಕ್ಷಗಾನ ಬಗ್ಗೆ ಮಾಹಿತಿ

By Karnataka  |  30 Jul, 2026  |  Comments Off on ಯಕ್ಷಗಾನ ಬಗ್ಗೆ ಮಾಹಿತಿ


ಯಕ್ಷಗಾನ ಬಗ್ಗೆ ಮಾಹಿತಿ
  • ಯಕ್ಷಗಾನ ಎಂಬುದು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡು ಒಂದು ಸ್ವತಂತ್ರವಾದ ಶಾಸ್ತ್ರೀಯ ನೃತ್ಯ ಹಾಗೂ ಜಾನಪದ ಸಾಹಿತ್ಯ ಪ್ರಕಾರವಾಗಿದೆ. ಕರಾವಳಿ ಕರ್ನಾಟಕದಲ್ಲಿ ಅಂದರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನ ಮನೆಮಾತಾಗಿದೆ.
  • ಯಕ್ಷಗಾನದಲ್ಲಿ ಮೂಡಲ ಪಾಯ ಮತ್ತು ಪಡುವಲ ಪಾಯ ಎಂಬ 2 ಪ್ರಕಾರಗಳಿವೆ.
  • ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತ ಇರುವುದು ಮೂಡಲಪಾಯ. ಮೂಡಲಪಾಯದಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಶ್ರೀಕೃಷ್ಣ ಪಾರಿಜಾತ. ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಕಂಡು ಬರುವುದು ಪಡುವಲಪಾಯ. ಇದರಲ್ಲಿ ತೆಂಕುತಿಟ್ಟು, ಬಡುಗುತಿಟ್ಟು ಮತ್ತು ಉತ್ತರದ ತಿಟ್ಟು ಪ್ರಮುಖ ಪ್ರಭೇದಗಳಾಗಿವೆ.
  • ಉತ್ತರದ ತಿಟ್ಟು ಶೈಲಿ ಬಯಲಾಟಗಳು ಉತ್ತರ ಕರ್ನಾಟಕ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರಿಯವಾಗಿವೆ. ಉಡುಪಿಯಲ್ಲಿ ಬಡಗು ತಿಟ್ಟು ಜನಪ್ರಿಯವಾಗಿವೆ. ತೆಂಕು ತಿಟ್ಟು ಶೈಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕಾಣಬಹುದು.
  • ಪ್ರಮುಖ ಪಾತ್ರಧಾರಿಗಳು: ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯಾಯ.
  • ಬಯಲಾಟ ಎಂಬುದು ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದವಾಗಿದೆ. ದಕ್ಷಿಣ ಪ್ರಾಂತ್ಯದಲ್ಲಿ ಕಂಡು ಬರುವ ಯಕ್ಷಗಾನದ ಒಂದು ರೂಪವಾಗಿದೆ. ಬಯಲಾಟದಲ್ಲಿ ಜನಪ್ರಿಯ ಕೋಟೆ ಮತ್ತು ಚೆನ್ನಯ್ಯ ಕಥೆ ಪ್ರಸಿದ್ಧವಾಗಿದೆ. ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟವು ಹೆಚ್ಚಾಗಿ ನಡೆಯುವ ಕಾರಣ ಇದನ್ನು ಬಯಲಾಟ ಎಂದೇ ಕರೆಯಲಾಗಿದೆ. ಪುರಾಣ, ಮಹಾಕಾವ್ಯಗಳ ಸಣ್ಣಸಣ್ಣ ಕಥೆಗಳ ನೃತ್ಯ ಮತ್ತು ನಾಟಕಗಳ ಮೂಲಕ ಪ್ರದರ್ಶಿಸಲಾಗುವುದು. ಕರ್ನಾಟಕದ ಕರಾವಳಿ ಭಾಗದಲ್ಲಿ ಭೂತಾರಾಧನೆಯೂ ಕೂಡ ಪ್ರಸಿದ್ಧವಾಗಿದೆ.
manojns1997

error: Content is protected !!