| ಹೆಸರು / ಪದ | ವಿವರ |
| ಪಾಂಚಜನ್ಯ | ಶ್ರೀಕೃಷ್ಣನ ಬಳಿ ಇದ್ದ ಶಂಖ. |
| ಪಂಚವಟಿ | ವನವಾಸದ ಸಮಯದಲ್ಲಿ ರಾಮ ಸೀತೆ ವಾಸಿಸುತ್ತಿದ್ದ ಆಶ್ರಮ. |
| ಪಾಶುಪತಾಸ್ತ್ರ | ಶಿವನು ಅರ್ಜುನನಿಗೆ ನೀಡಿದ ಒಂದು ಅಸ್ತ್ರ. |
| ದಾರುಕ | ಶ್ರೀಕೃಷ್ಣನ ರಥದ ಸಾರಥಿ. |
| ಪುತ್ರಕಾಮೇಷ್ಠಿ | ಮಕ್ಕಳನ್ನು ಪಡೆಯಲು ಮಾಡಿದ ಯಾಗದ ಹೆಸರು. |
| ಪ್ರತಿಕಾಮಿ | ದುರ್ಯೋಧನನ ರಥದ ಸಾರಥಿ. |
| ಶಚಿ | ಇಂದ್ರನ ಧರ್ಮಪತ್ನಿ. |
| ಅಕ್ಷಯಪಾತ್ರೆ | ಎಂದೂ ಖಾಲಿಯಾಗದ ಪಾತ್ರೆ. |
| ಶುಕ್ರಚಾರಿ | ಅಸುರರ ಗುರು. |
| ಸೌಗಂಧಿಕ | ಸುವಾಸನೆಯುಳ್ಳ ಪುಷ್ಪ. |
| ಮಾನಸ ಸರೋವರ | ಹಿಮಾಲಯದಲ್ಲಿರುವ ಪವಿತ್ರ ಸರೋವರ. |
| ಶಕುನಿ | ಗಾಂಧಾರಿ ಸಹೋದರ. ಪಗಡೆ ಆಟದಲ್ಲಿ ಪಂಡಿತ. |
| ತಾಂಡವ | ಶಿವನ ಒಂದು ಬಗೆಯ ನೃತ್ಯ. |
| ಮಾರೀಚ | ರಾವಣನ ಚಿಕ್ಕಪ್ಪ, ಮಾಯಾಜಿಂಕೆಯ ವೇಷ ಧರಿಸಿದವ. |
| ಕುಂಭಕರ್ಣ | ರಾಕ್ಷಸ, ರಾವಣನ ಸಹೋದರ. |
| ಐರಾವತ | ಇಂದ್ರನ ಪಟ್ಟದ ಆನೆ. |
| ಅಮರಾವತಿ | ಇಂದ್ರನ(ದೇವತೆಗಳ) ಪಟ್ಟಣ. |
| ದಂಡಕ | ದಟ್ಟವಾದ ಅರಣ್ಯ. |
| ಕಾಮಧೇನು | ಗೋವುಗಳ ಮಾತೆ. ಕೇಳಿದ್ದನ್ನು ದಯಪಾಲಿಸುವ ಗೋವು. |
| ನಂದಿನಿ | ಋಷಿ ವಶಿಷ್ಠರ ಬಳಿ ಇದ್ದ ಗೋವು. ಕಾಮಧೇನು ಇದರ ತಾಯಿ. |
| ಧನ್ವಂತರಿ | ದೇವ ವೈದ್ಯ. |
| ಗಾಂಡೀವ | ಅರ್ಜುನನ ಬಳಿ ಇದ್ದ ಬಿಲ್ಲು. |
| ಸುದರ್ಶನ ಚಕ್ರ | ವಿಷ್ಣುವಿನ ಆಯುಧ. |
| ಡಮರು | ಶಿವನ ವಾದ್ಯ. |
| ಕೊಳಲು | ಕೃಷ್ಣನ ವಾದ್ಯ. |
| ವೀಣೆ | ಸರಸ್ವತಿಯ ವಾದ್ಯ. |
| ತಂಬೂರಿ | ನಾರದ ಮುನಿಯ ವಾದ್ಯ. |
ಪುರಾಣಗಳಲ್ಲಿನ ಕೆಲವು ವಿಶಿಷ್ಟ ಸಂಗತಿಗಳು
By Karnataka | 24 Aug, 2026 | Comments Off on ಪುರಾಣಗಳಲ್ಲಿನ ಕೆಲವು ವಿಶಿಷ್ಟ ಸಂಗತಿಗಳು