| ಕನ್ನಡ ರಾಜ್ಯೋತ್ಸವ |
|---|
| ❯ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡಿಗರ ನಾಡ ಹಬ್ಬವಾಗಿ ಆಚರಣೆ. |
| ❯1956ರ ನವೆಂಬರ್ 1 ರಂದು ಏಕೀಕೃತ ವಿಶಾಲ ಮೈಸೂರು ನಿರ್ಮಾಣ (1953ರ ಫಜಲ್ ಅಲಿ ನೇತೃತ್ವದ ರಾಜ್ಯ ಪುನರ್ ವಿಂಗಡಣಾ ಆಯೋಗ ಶಿಫಾರಸ್ಸಿನ ಅನ್ವಯ). |
| ❯ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಎಂದು ಘೋಷಣೆ. |
| ❯1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದ್ಘಾಟನೆ. (ಏಕೀಕರಣದ ಮೊದಲ ಮುಖ್ಯಮಂತ್ರಿ – ಎಸ್. ನಿಜಲಿಂಗಪ್ಪ) |
| ❯ಕರ್ನಾಟಕ ರಾಜ್ಯವಾಗಿ ಮರುನಾಮಕರಣ – 1973 ನವೆಂಬರ್ 1. (ಮುಖ್ಯಮಂತ್ರಿ – ಡಿ. ದೇವರಾಜ್ ಅರಸು) |
| ❯ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ – ಪ್ರತಿ ವರ್ಷ ನವೆಂಬರ್ 1 ರಂದು. |
| ❯ಕನ್ನಡ ನಾಡ ಧ್ವಜ: ಕನ್ನಡ ನಾಡ ಧ್ವಜವು 2 ಬಣ್ಣದ ಧ್ವಜವಾಗಿದ್ದು, 1965ರಲ್ಲಿ ಮೊದಲ ಬಾರಿಗೆ ಮ.ರಾಮಮೂರ್ತಿ ಅವರು ಪರಿಗಣಿಸಿದ್ದರು. ಈ ಬಾವುಟದ ಮೇಲಿನ ಭಾಗ ಹಳದಿ ಬಣ್ಣ (ಶಾಂತಿ ಸಂಕೇತ) ಹಾಗೂ ಕೆಂಪು ಬಣ್ಣ (ಧೈರ್ಯ ಸಂಕೇತ). |
| ❯ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ನೇತೃತ್ವದ ಸಮಿತಿಯು ನಾಡ ಧ್ವಜ ವಿನ್ಯಾಸವನ್ನು ಬದಲಿಸಲು ನೇಮಕವಾಗಿತ್ತು. ಇದರ ಪ್ರಕಾರ 2:3 ಅನುಪಾತದ ಧ್ವಜದ ಮೇಲ್ಭಾಗದಲ್ಲಿ ಹಳದಿ, ಮಧ್ಯದಲ್ಲಿ ಬಿಳಿ ಹಾಗೂ ಬಿಳಿ ಬಣ್ಣದ ನಡುವೆ ರಾಜ್ಯ ಲಾಂಛನ ಕೆಳ ಭಾಗದಲ್ಲಿ ಕೆಂಪು ಬಣ್ಣವಿರಲಿದೆ. ಇದನ್ನು 2018ರ ಮಾರ್ಚ್ 8 ರಂದು ಕರ್ನಾಟಕ ರಾಜ್ಯ ಸರ್ಕಾರ ಗುರುತಿಸಲ್ಪಟ್ಟಿತ್ತು. ಆದರೆ, ಅಧಿಕೃತ ಚಿಹ್ನೆಯಾಗಿಸಲು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯ್ದಿರಿಸಲಾಗಿದೆ. ಕನ್ನಡ ಧ್ವಜ ಯಾವುದೇ ಅಧಿಕೃತ ಸ್ಥಾನಮಾನ ಹೊಂದಿಲ್ಲ. |
ಕನ್ನಡ ರಾಜ್ಯೋತ್ಸವ
By Karnataka | 30 Jul, 2026 | Comments Off on ಕನ್ನಡ ರಾಜ್ಯೋತ್ಸವ